ಕೋಮು ಗಲಭೆ ಶಿಕ್ಷೆಯಿಂದ ಅನರ್ಹಗೊಂಡ ಶಾಸಕನ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ

Social Share

ನವದೆಹಲಿ, ನ.8- ಉತ್ತರ ಪ್ರದೇಶದಲ್ಲಿ ಆಡಳಿತಾ ರೂಢ ಬಿಜೆಪಿ ಶಾಸಕನ ಅನರ್ಹತೆಯಿಂದ ತೆರವಾಗಿರುವ ಸ್ಥಾನಕ್ಕೆ ಕೇಂದ್ರ ಚುನಾವಣಾ ಆಯೋಗ ಡಿಸೆಂಬರ್ 5ರಂದು ಚುನಾವಣೆ ಘೋಷಣೆ ಮಾಡಿದೆ.

ಉತ್ತರ ಪ್ರದೇಶದ ಖತೌಲಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಬಿಜೆಪಿಯ ವಿಕ್ರಮ್ ಸಿಂಗ್ ಅವರನ್ನು ಕೋಮು ಗಲಭೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಶಿಕ್ಷೆಗೆ ಗುರಿ ಪಡಿಸಲಾಗಿದ್ದು, ಅನರ್ಹಗೊಂಡಿದ್ದಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಓವೈಸಿ ಮನವಿ

2013ರ ಸೆಪ್ಟಂಬರ್‍ನಲ್ಲಿ ರಾಜಕೀಯ ವ್ಯಕ್ತಿಗಳ ದ್ವೇಷದ ಪ್ರಚೋದನಾಕಾರಿ ಹೇಳಿಕೆಗಳ ಬೆನ್ನಲ್ಲೇ ಮುಜಾಫರ್‍ನಗರದಲ್ಲಿ ಕೋಮು ಗಲಭೆ ಸೃಷ್ಟಿಯಾಗಿತ್ತು. ದುರ್ಘಟನೆಯಲ್ಲಿ 60 ಮಂದಿ ಸಾವನ್ನಪ್ಪಿದ್ದರು. 40 ಸಾವಿರಕ್ಕೂ ಹೆಚ್ಚು ಮಮದಿ ನಿರ್ವಸತಿಗರಾಗಿದ್ದರು. ಈ ಪ್ರಕರಣದಲ್ಲಿ ವಿಕ್ರಮ್ ಸಿಂಗ್ ಅಪರಾ ಎಂದು ಸಾಬೀತಾಗಿದ್ದು ಎರಡು ವರ್ಷ ಶಿಕ್ಷೆಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನ ಅನೂರ್ಜಿತಗೊಂಡಿತ್ತು.

ಪ್ರೀತಿಸಿದವಳಿಗಾಗಿ ಲಿಂಗ ಬದಲಾವಣೆ ಮಾಡಿಸಿಕೊಂಡ ದೈಹಿಕ ಶಿಕ್ಷಕಿ

ಆ ಸ್ಥಾನಕ್ಕೆ ಈಗ ಉಪಚುನಾವಣೆ ಘೋಷಣೆಯಾಗಿದೆ. ಗುಜರಾಜ್ ಮತ್ತು ಹಿಮಾಚಲ ಪ್ರದೇಶದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಡಿಸೆಂಬರ್ 8ರಂದು ನಡೆಯಲಿದೆ, ಖತೌಲಿ ಕ್ಷೇತ್ರದ ಮತ ಎಣಿಕೆಯೂ ಅಂದೇ ನಡೆಯಲಿದೆ.

Articles You Might Like

Share This Article