ಲಕ್ನೋ, ಫೆ.10- ಉತ್ತರ ಪ್ರದೇಶದ ಪಶ್ಚಿಮ ಭಾಗದ 11 ಜಿಲ್ಲಾಗಳ 58 ವಿಧಾನಸಭಾ ಸ್ಥಾನಗಳಿಗೆ ಇಂದು ಬಿರುಸಿನ ಮತದಾನ ನಡೆದಿದೆ.
ಬೆಳಗ್ಗೆ 7.00 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6.00 ಗಂಟೆಯವರೆಗೆ ಮತದಾನ ನಡೆಯಲಿದೆ
ಮೊದಲ ಹಂತದಲ್ಲಿ 73 ಮಹಿಳೆಯರು ಸೇರಿದಂತೆ 623 ಅಭ್ಯರ್ಥಿಗಳು ಕಣದಲ್ಲಿದ್ದು, 1.24 ಕೋಟಿ ಪುರುಷರು ಮತ್ತು 1.04 ಕೋಟಿ ಮಹಿಳೆಯರು ಸೇರಿದಂತೆ ಸುಮಾರು 2.28 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಕಾಂತ್ ಶರ್ಮಾ, ಸುರೇಶ್ ರಾಣಾ, ಸಂದೀಪ್ ಸಿಂಗï, ಕಪಿಲ್ ದೇವ್ ಅಗರ್ವಾಲï, ಅತುಲ್ ಗಾರ್ಗ್ ಮತ್ತು ಚೌಧರಿ ಲಕ್ಷ್ಮಿ ನಾರಾಯಣ್ ಸೇರಿದಂತೆ ಘಟಾನುಘಟಿ ನಾಯಕರ ಅವರ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಪಶ್ಚಿಮ ಯುಪಿಯ ಜಾಟ್ ಪ್ರಾಬಲ್ಯವಿದ್ದು , ಅಲ್ಲಿನ ರೈತರು ಕೃಷಿ ಕಾನೂನುಗಳ ವಿರುದ್ಧ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಕಳೆದ 2017 ರಲ್ಲಿ 58 ಸ್ಥಾನಗಳಲ್ಲಿ ಬಿಜೆಪಿ 53 ಸ್ಥಾನಗಳನ್ನು ಗಳಿಸಿದರೆ,
ಎಸ್ಪಿ ಮತ್ತು ಬಿಎಸ್ಪಿ ತಲಾ ಎರಡು ಸ್ಥಾನಗಳನ್ನು ಪಡೆದಿದ್ದವು. ಒಂದು ಸ್ಥಾನ ಆರ್‍ಎಲ್‍ಡಿಪಾಲಾಗಿತು ಈ ಭಾರಿ ಪರಿಸ್ಥಿತಿ ಬಿನ್ನವಾಗಿದ್ದು ಬಿಜೆಪಿಗೆ ಪ್ರಮುಕವಾಗಿ ಅಕಿಲೇಶ್‍ನೇತೃತ್ವದ ಎಸ್‍ಪಿ ಸಡ್ಡು ಹೊಡೆದಿದೆ ಉಳಿದಂತೆ ಕಾಂಗ್ರೇಸ್ ಪ್ರಿಯಾಂಕಾ ಗಾಂ ನೆಚ್ಚಿಕೊಂಡಿದೆ. ಮಾಯಾವತಿ ಬಿಎಸ್‍ಪಿ ಸದ್ದು ಮಾಡಿದೆ.
ಎಸ್ಪಿ-ಆರ್‍ಎಲ್‍ಡಿ ಮೈತ್ರಿಯು ತಮ್ಮ ಚುನಾವಣಾ ಪ್ರಚಾರವನ್ನು ರೈತರ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದೆ ಸಿಎಂ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದೆ.ರಾಜಕೀಯವಾಗಿ ನಿರ್ಣಾಯಕವಾಗಿರುವ ರಾಜ್ಯದಲ್ಲಿ ಏಳು ಹಂತದ ಚುನಾವಣೆಯ ಮೊದಲ ಸುತ್ತಿನ ಮತದಾನದ ಕ್ಷೇತ್ರಗಳಲ್ಲಿ ಪ್ರಚಾರ ನಡೆದಿದ್ದು ಬಹುತೇಕ ಶಾಂತಿಯುತವಾಗಿದೆ.
