ಬೆಂಗಳೂರು, ಸೆ.13- ಪರಿಸರ ಜಾಗೃತೆ ಮತ್ತು ಅರಣ್ಯ ಸಾಂದ್ರತೆ ಹೆಚ್ಚಿಸುವಿಕೆಯ ಉದ್ದೇಶದಿಂದ ಅರಣ್ಯ ಭೂಮಿ ಹಕ್ಕಿಗಾಗಿ ಕಳೆದ 32 ವರ್ಷದಿಂದ ಹೋರಾಟ ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ, ಬೆಂಗಳೂರಿನಲ್ಲಿ ನಾಳೆ (ಸೆ.14) ಸಾವಿರ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾದ್ಯಂತ ಜು.30 ರಿಂದ ಆ.14 ರವರೆಗೆ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಅವುಗಳಲ್ಲಿ ಆಯ್ದ ಒಂದು ಸಾವಿರ ಛಾಯಾಚಿತ್ರವನ್ನ ಜ್ಞಾನ ಜ್ಯೋತಿ ಆಡಿಟೊರಿಯಮ, ಬೆಂಗಳೂರು ನಗರ ವಿಶ್ವವಿದ್ಯಾಲಯ (ಫ್ರೀಡಂ ಪಾರ್ಕನಿಂದ 200 ಮೀ ದೂರ) ದಲ್ಲಿ ಪ್ರದರ್ಶಿಸಲಾಗುವುದೆಂದು ಅವರು ಹೇಳಿದರು.
ವೀರಪ್ಪ ಮೊಯ್ಲಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ
ಅಭಿಯಾನದಲ್ಲಿ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ, ಪದ್ಮಶ್ರೀ ವಿಜೇತೆ ತುಳಸಿ ಗೌಡ ಮತ್ತು ಸುಕ್ರಿ ಗೌಡ ಪಾಲ್ಗೊಂಡಿರುವುದು ಅಭಿಯಾನದ ವಿಶೇಷವಾಗಿದೆ. ಉತ್ತರ ಕನ್ನಡ ಜಿಲ್ಲೆಯ 167 ಗ್ರಾಮ ಪಂಚಾಯತ ವ್ಯಾಪ್ತಿಯ, ಸುಮಾರು 836 ಹಳ್ಳಿಗಳಲ್ಲಿ, ಸುಮಾರು 41 ಸಾವಿರ ಕುಟುಂಬಗಳಿಂದ, 2 ಲಕ್ಷಕ್ಕೂ ಮಿಕ್ಕಿ ಅರಣ್ಯವಾಸಿಗಳು ಗಿಡ ನೆಟ್ಟಿ ದಾಖಲಾರ್ಹ ಕಾರ್ಯ ಜರುಗಿದೆ ಎಂದು ಹೇಳಿದರು.
ಅರಣ್ಯವಾಸಿಗಳು ಅರಣ್ಯ ಪ್ರದೇಶದಲ್ಲಿ ಮಾವು, ಹಲಸು, ನೆರಳೆ, ಉಪ್ಪಗೆ, ಸಿಲ್ವರ್, ಚಿಕ್ಕು, ಗೇರು, ಸಾಗುವನಿ, ಪೇರಲೆ, ಮುರುಗಲು ಮುಂತಾದ ಗಿಡಗಳನ್ನು ಹೆಚ್ಚಿನ ಆಸಕ್ತಿಯಿಂದ ನೆಟ್ಟಿರುವುದು. ಈ ಪ್ರಕ್ರಿಯೇಯಲ್ಲಿ ಮಹಿಳೆಯರು ಮತ್ತು ಕುಟುಂಬದ ಹಿರಿಯರಾದ ವೃದ್ಧರು ಸಹಿತ ವಿಶೇಷ ಆಸಕ್ತಿಯಿಂದ ಗಿಡ ನೆಡುವ ಕಾರ್ಯದಲ್ಲಿ ಭಾಗಿಯಾಗಿರುವುದು ಅಭಿಯಾನದ ಮಹತ್ವವನ್ನು ಹೆಚ್ಚಿಸಿದೆ. ಅರಣ್ಯವಾಸಿಗಳ ಮನೆ ಮನೆಗಳಲ್ಲಿ ಸಮಾರೋಪಾದಿಯಾಗಿ ಗಿಡ ನೆಡುವ ಕಾರ್ಯದಲ್ಲಿ ಪಾಲ್ಗೊಂಡಿರುವುದು ಗಮನಾರ್ಹ ಅಂಶ ಎಂದು ಅವರು ಹೇಳಿದರು.
#UttaraKannada, #district, #Plantationcampaign,