ನವದೆಹಲಿ, ಸೆ.24- ಖಾಸಗಿ ರೆಸಾರ್ಟ್‍ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರ ಹತ್ಯೆ ಸಂಬಂಧ ಬಿಜೆಪಿ ಮುಖಂಡರ ಮಗನನ್ನು ಉತ್ತರಾ ಖಾಂಡ್ ಪೊಲೀಸರು ಬಂಧಿಸಿದ್ದಾರೆ. ಉತ್ತರಾಖಾಂಡ್‍ನ ಲಕ್ಷ್ಮಣ ಝುಲ ಪ್ರದೇಶದಲ್ಲಿ ಬಿಜೆಪಿ ನಾಯಕ ವಿನೋದ ಆರ್ಯ ಅವರ ಒಡೆತನದ ರೆಸಾರ್ಟ್‍ನಲ್ಲಿ 19 ವರ್ಷದ ಯುವತಿ ಸ್ವಾಗತಕಾರಣಿಯಾಗಿ ಕೆಲಸ ಮಾಡುತ್ತಿದ್ದರು.
ಕಳೆದ ಸೆಪ್ಟಂಬರ್ 18ರಿಂದ ಆಕೆ ಕಾಣೆಯಾಗಿದ್ದಳು. ಪೋಷಕರು ಮೊದಲು ಸಂಬಂಧಿಸಿದ ಕಂದಾಯ ವಿಭಾಗಕ್ಕೆ ದೂರು ನೀಡಿದ್ದರು. ಬಳಿಕ ಪ್ರಕರಣವನ್ನು ಪೊಲೀಸರು ತನಿಖೆಗೆ ಕೈಗೆತ್ತಿಕೊಂಡು ಸೆಪ್ಟಂಬರ್ 24ರಂದು ಪ್ರಕರಣ ದಾಖಲಿಸಿದ್ದರು.
ತನಿಖೆ ನಡೆಸಿದ ಪೊಲೀಸರು ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಮತ್ತು ರೆಸಾರ್ಟ್‍ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಯುವತಿ ಜೊತೆ ವೈಯಕ್ತಿಕ ಕಾರಣಕ್ಕಾಗಿ ವಿವಾದ ಹೊಂದಿದ್ದ ಪುಲ್ಕಿತ್ ರೆಸಾರ್ಟ್ ಸಮೀಪದ ನದಿಗೆ ತಳ್ಳಿ ಕೊಲೆ ಮಾಡಿದ್ದಾರೆು ಎಂದು ಆರೋಪಿಸಲಾಗಿದೆ.
ರಾಜ್ಯ ವಿಪ್ಪತ್ತು ನಿರ್ವಹಣಾ ಸಂಸ್ಥೆ ಶೋಧ ಕಾರ್ಯಾಚರಣೆ ನಡೆಸಿ ಶವವನ್ನು ಪತ್ತೆ ಹಚ್ಚಿದೆ. ಉತ್ತರಖಾಂಡ ನ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಟ್ವೀಟ್ ಮಾಡಿದ್ದು ಘಟನೆಯನ್ನು ಡಿಐಜಿಪಿ ರೇಣುಕಾ ದೇವಿ ನೇತೃತ್ವದ ವಿಶೇಷ ತನಿಖಾ ದಳದ ವಿಚಾರಣೆಗೆ ಒಳಪಡಿಸುವುದಾಗಿ ತಿಳಿಸಿದ್ದಾರೆ.
ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಕಾನೂನು ಬಾಹಿರವಾಗಿ ನಿರ್ಮಿಸಲಾದ ರೆಸಾರ್ಟ್‍ಗಳ ವಿರುದ್ಧ ಬುಲ್ಡೋಜರ್ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಅದರ ಬೆನ್ನಲ್ಲೆ ಬುಲ್ಡೋಜರ್ ಪುಲ್ಕಿತ್ ಒಡೆತನದ ರೆಸಾರ್ಟ್ ಅನ್ನು ಧ್ವಂಸಗೊಳಿಸಿದೆ.