ಓ ಮಲ್ಲಿಗೆ ಸಿನಿಮಾವನ್ನು ಯಾರೂ ಮರೆಯುವುದಕ್ಕೆ ಸಾಧ್ಯವಿಲ್ಲ. ಅದರಲ್ಲೂ ಆ ಸಿನಿಮಾದಲ್ಲಿನ ಮುಸ್ತಫಾ ಪಾತ್ರವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಸಾಧುಕೋಕಿಲ ಅವರು ಮುಸ್ತಫಾ ಆಗಿ ಈಗಲೂ ಎಲ್ಲರ ಮನಸ್ಸಲ್ಲೂ ಉಳಿದು ಬಿಟ್ಟಿದ್ದಾರೆ. ಆ ಸಿನಿಮಾಗೆ 23 ವರ್ಷ. ಈಗ ಮತ್ತೆ ನಿರ್ದೇಶಕರಾಗಿ ವಿ ಮನೋಹರ್ ಎಂಟ್ರಿಯಾಗಿದ್ದಾರೆ.
ದರ್ಬಾರ್ ಸಿನಿಮಾ ಬಗ್ಗೆ ಮಾತನಾಡಿದ ವಿ ಮನೋಹರ್, “ಈ ಸಿನಿಮಾದ ಕಥೆಯನ್ನು ವಿಶೇಷವಾಗಿ ಎಣೆದಿದ್ದಾರೆ. ಫ್ಯಾಮಿಲಿಯಲ್ಲಿ ಒಂದು ಹೆಣ್ಣಿಗೆ ಹೆರಿಗೆ ನೋವು ಶುರುವಾದ್ರೆ ಇಲ್ಲಿ ನಮ್ಮ ಪ್ರೊಡ್ಯೂಸರ್ ಗೆ ಶುರುವಾಗಿದೆ ಹೆರಿಗೆ ನೋವು. ಇದು ಎಲೆಕ್ಷನ್ ಸಬ್ಜೆಕ್ಟ್ ಆಗಿರುವುದರಿಂದ ಇನ್ನು ಆ ಫೀಲ್ ಸಿನಿಮಾದಲ್ಲಿ ಸಿಗಲಿದೆ.
23 ವರ್ಷದ ನಂತರ ನಂಗೆ ಈ ಸಿನಿಮಾದ ಅವಕಾಶ ಸಿಕ್ಕಿದೆ. ಓ ಮಲ್ಲಿಗೆ ಸಿನಿಮಾದಲ್ಲಿ ಪೆದ್ದು ಥರ ಕಾಣ್ತಾನೆ ಅಂತ, ಕಾಮಿಡಿ ಹೇಗೆ ಮಾಡ್ತಾನೆ ಅಂತಿದ್ರು. ಅದಾದ ಮೇಲೆ ನಂಗೆ ಅವಕಾಶಗಳೇ ಸಿಗಲಿಲ್ಲ. ಆದ್ರೆ ಇಲ್ಲಿ ನಂಗೆ ಸತೀಶ್ ಅವರು ಒಂದೊಳ್ಳೆ ಅವಕಾಶ ನೀಡಿದ್ರು. ಯಾರ್ಯಾರು ಆಡಿಕೊಳ್ಳುತ್ತಾ ಇದ್ರು ಅವರಿಗೆಲ್ಲಾ ಉತ್ತರ ಸಿಗಲಿದೆ. ಕಾಮಿಡಿ ಅಂದಾಕ್ಷಣಾ ಈಗ ಹೆದರುವಂತೆ ಆಗಿದೆ. ಡಬ್ಬಲ್ ಮೀನಿಂಗ್ ಸಿನಿಮಾ ಇರಬಹುದು ಅಂತ. ಆದ್ರೆ ನಾವೂ ಹೋದಲೆಲ್ಲಾ ಇದೊಂದು ಶುದ್ಧ ಹಾಸ್ಯದ ಸಿನಿಮಾ ಅಂತಾನೆ ಹೇಳಿಕೊಂಡು ಬಂದಿದ್ದೀವಿ.
ಮಿತಿ ದಾಟಿದ ವಿದ್ಯುತ್‍ಗೆ ಶುಲ್ಕ ಪಾವತಿ ಕಡ್ಡಾಯ : ಸಚಿವ ಜಾರ್ಜ್
ನಟನಿಗೆ ಕೆಟ್ಟದ್ದನ್ನು ಕಂಡರೆ ಸಹಿಸಲ್ಲ. ಜೂಜಾಡುವುದು, ಕುಡಿದು ತೂರಾಡುವವರನ್ನು ಕಂಡರೆ ಆಗಲ್ಲ. ಊರಿನ ಹಿರಿಯರಿಗೆ ಅದು ಇಷ್ಟ ಆಗಲ್ಲ. ಹೀಗಾಗಿ ಅವನನ್ನು ಸೋಲಿಸಬೇಕು ಎಂದುಕೊಂಡು ಎಲೆಕ್ಷನ್ ನಲ್ಲಿ ನಿಲ್ಲಿಸುತ್ತಾರೆ. ಬಳಿಕ ಏನಾಗುತ್ತೆ ಅನ್ನೋದೆ ಸಿನಿಮಾ” ಎಂದಿದ್ದಾರೆ.
ನಿರ್ಮಾಪಕ, ನಟ ಸತೀಶ್ ಮಾತನಾಡಿ, “ಸಿನಿಮಾ ಶುರು ಮಾಡುವಾಗ ಒಂದು ಮಹತ್ವಾಕಾಂಕ್ಷೆ ಶುರುವಾಗಿತ್ತು. ಸಿನಿಮಾ ಸಾಗುತ್ತಾ ಸಾಗುತ್ತಾ ಇನ್ನು ಏನೋ ಮಾಡಬೇಕು ಅನ್ನಿಸ್ತಾ ಇತ್ತು. ಆದ್ರೆ ಮನೋಹರ್ ಸರ್ ಬೇಡ ಅಂತಿದ್ರು. ಹಣ ಇದೆ ಅಂತ ಹೆಚ್ಚು ಖರ್ಚು ಮಾಡೋದು ಬೇಡ ಅಂತ ಇದ್ರು. ಇಂಥ ಒಳ್ಳೆ ಸಿನಿಮಾ ಮಾಡಿಕೊಟ್ಟಿದ್ದಕ್ಕೆ. ದರ್ಬಾರ್ ಪ್ರೊಡಕ್ಷನ್ ಸಂಸ್ಥೆಯಿಂದಾನೆ ರಿಲೀಸ್ ಮಾಡ್ತಾ ಇದ್ದೀವಿ” ಎಂದಿದ್ದಾರೆ.
#VManohar, #DirectingMovie, #after23years,