ಬಾಲಪ್ರತಿಭೆ ಕುಮಾರಿ ವೈನವಿ

Social Share

ಬೆಂಗಳೂರು,ಫೆ : ಸನಾತನ ಧರ್ಮ, ಭಾರತೀಯ ಹಿಂದೂ ಸಂಸ್ಕøತಿಯ ಪ್ರತೀಕವಾಗಿ, ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಂಠಸ್ಥ ಪ್ರತಿಭಾ ಸ್ಪರ್ಧೆಗಳಲ್ಲದೆ, ಹಲವು ಸತ್ವ ಸಾರ, ಸದ್ವಿಚಾರದಿಂದ ಕೂಡಿರುವ ಇನ್ನಿತರ ಶ್ಲೋಕಗಳು, ದಿನ ನಿತ್ಯದ ಶಾಂತಿ ಮಂತ್ರಗಳು, ದೇವರ ಸ್ತೋತ್ರಗಳನ್ನು ಕಲಿತಿದ್ದಾಳೆ ಬಾಲ ಪ್ರತಿಭೆ ಕುಮಾರಿ ವೈನವಿ.
ಇದಲ್ಲದೆ ನೃತ್ಯ ಹಾಗೂ ಸಂಗೀತ ವನ್ನೂ ಸಹಾ ಹೆಚ್ಚಿನ ಆಸಕ್ತಿಯಿಂದ ಅಭ್ಯಾಸ ಮಾಡುತ್ತಿದ್ದಾಳೆ. ಮಕ್ಕಳ ಅಭಿವೃದ್ಧಿ ಇಲಾಖೆಯು, 2021-22ರ ಸಾಲಿನ, ಬೆಂಗಳೂರು ಜಿಲ್ಲಾ ಮಟ್ಟದಲ್ಲಿ ಇಬ್ಬರು ಅಸಾಧಾರಣ ಬಾಲ ಪ್ರತಿಭೆಗಳನ್ನು ತಾರ್ಕಿಕ ಸಾಧನೆ ಆಡಿ ಗುರುತಿಸಿ, ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರವನ್ನು ಈ ಪುಟಾಣಿಗೆ ನೀಡಿ ಗೌರವಿಸಿದೆ.
ವಿಶೇಷವೆಂದರೆ, ಅದ್ಭುತ ಜ್ಞಾನ ಶಕ್ತಿಯ ಈ ಬಾಲಕಿ ಹೆಸರು 2021ರಲ್ಲಿ ಕರ್ನಾಟಕ ಬುಕ್ ಆಫ್ ರೆಕಾಡ್ರ್ಸ್ ಹಾಗೂ ಪ್ರಸ್ತುತ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ದಾಖಲೆಗೆ ಸೇರ್ಪಡೆಗೊಂಡಿರುವುದು ಹೆಮ್ಮೆಯ ಸಂಗತಿ. ಮಲ್ಲೇಶ್ವರಂ ನ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಕ್ಲೋನಿ ಕಾನ್ವೆಂಟ್ ಹೈಸ್ಕೂಲಿನಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿರುವ, ಕುಮಾರಿ ವೈನವೀ. ಬಿ. ಸಿ., ಡಿಸೆಂಬರ್06, 2014ರಲ್ಲಿ ಜನಿಸಿರುವ, ತಾಯಿ ಮೇಘನಾ, ತಂದೆ ಚನ್ನಮೂರ್ತಿ, ನೆಲಮಂಗಲ ತಾಲೂಕಿನ ತಡಸಿಘಟ್ಟ ಗ್ರಾಮದ ಸಣ್ಣ ರೈತಾಪಿ ಕುಟುಂಬದ ಅಸಾಧಾರಣ ಬಾಲ ಪ್ರತಿಭೆ.
ಈ ಪುಟ್ಟ ಬಾಲಕಿ ಬಹಳಷ್ಟು ಪರಿಶ್ರಮದಿಂದ, 2020 ರಲ್ಲಿಯೇ, ತನ್ನ ಐದನೇ ವಯಸ್ಸಿಗೆ ತಲ್ಲೀನತೆ ಹಾಗೂ ಅದ್ಭುತ ಜ್ಞಾನ ಶಕ್ತಿಯಿಂದ ಶ್ರೀಮದ್ ಭಗವದ್ಗೀತೆಯ ಎಲ್ಲಾ ಹದಿನೆಂಟು ಅಧ್ಯಾಯಗಳ ಏಳುನೂರು ಶ್ಲೋಕಗಳನ್ನು ಕಂಠಸ್ಥ ಮಾಡಿದ್ದಾಳೆ ಎಂಬುದು ಹೆಮ್ಮೆಯ ಸಂಗತಿ.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯ ಹಾಗೂ ಗಣ್ಯರ ಸಮ್ಮುಖದಲ್ಲಿ ಆಯೋಜಿಸಿದ್ದ ಕುವೆಂಪು ರವರ 117 ನೇ ಜಯಂತಿ ಹಾಗೂ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯವು ಪ್ರತ್ಯೇಕವಾಗಿ ಹಮ್ಮಿಕೊಂಡಿದ್ದ ಭಗವದ್ಧ್ಗೀತಾ ಕಂಠಪಾಠ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಹಾಗೂ ಸಂಸ್ಕøತ ಮಹೋತ್ಸವದಲ್ಲಿ ಸಂಸ್ಕøತ ಶ್ಲೋಕ ಳು, ಭಗವದ್ಗೀತಾ ಕಂಠಪಾಠ ಸ್ಪರ್ಧೆ, ಮಂಗಳೂರಿನ ಇಸ್ಕಾನ್ ಸಂಸ್ಥೆ ಯ ಭಗವದ್ಗೀತಾ ಕಲಿಕಾ ಸರಣಿಯ ಪ್ರತಿನಿತ್ಯ ಒಂದೊಂದು ಅಧ್ಯಾಯ ಪಠಣದ ಹದಿನೆಂಟು ದಿನಗಳ ಕಾರ್ಯಕ್ರಮ ಸೇರಿದಂತೆ ಅನೇಕ ಗಣ್ಯರ ಸಮ್ಮುಖದಲ್ಲಿ ತನ್ನ ಕಲಿಕಾ ಸಾಮಥ್ರ್ಯವನ್ನು ಪ್ರಸ್ತುತಪಡಿಸಿ, ಪ್ರಶಂಸೆ, ಪುರಸ್ಕಾರಗಳ ಸಹಿತ ಕೃಪಾಶೀರ್ವಾದಗಳಿಗೆ ಭಾಜನಳಾಗಿದ್ದಾಳೆ ಎಂಬುದು ಹೆಮ್ಮೆಯ ಸಂಗತಿ..!
ಹಿಂದೂ ಸಂಸ್ಕøತಿಯ ಪ್ರತೀಕವಾಗಿ ಪುಟ್ಟ ಬಾಲಕಿ ಹೊರಹೂಮ್ಮಲು ಮಲ್ಲೇಶ್ವರಂನ ಭಗವದ್ಗೀತೆಯ ಗುರುಗಳಾದ ಸುಧಾ ಅಶೋಕ್ ಅವರು ಕಾರಣರು.

Articles You Might Like

Share This Article