ವಾಜಪೇಯಿ ಕಪ್ ವಾಲಿಬಾಲ್ ಪಂದ್ಯ: ಕರ್ನಾಟಕಕ್ಕೆ ದ್ವಿತೀಯ ಸ್ಥಾನ

Social Share

ಬೆಂಗಳೂರು,ಜ.1- ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಮಹಾಲಕ್ಷ್ಮೀಲೇಔಟ್ನ ಶಂಕರಮಠದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ ವಾಜಪೇಯಿ ಕಪ್ ಹೊನಲು ಬೆಳಕಿನ ಪುರುಷರ ಪಂದ್ಯಾವಳಿಯಲ್ಲಿ ಕೇರಳದ ಎಂ.ಜಿ. ವಿಶ್ವವಿದ್ಯಾನಿಲಯ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಕರ್ನಾಟಕ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ನಿನ್ನೆ ರಾತ್ರಿ ನಡೆದ ರೋಚಕ ವಾಲಿಬಾಲ್ ಪಂದ್ಯದಲ್ಲಿ ಕೇರಳದ ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯ ಹಾಗೂ ಉಜಿರಿಯ ಎಸ್ಡಿಎಂ ವಿವಿ ನಡುವೆ ನಡೆದ ಫೈನಲ್ ಪಂದ್ಯ ನಡೆಯಿತು. ಕೊನೆ ಕ್ಷಣದವರೆಗೂ ನಡೆದ ರೋಚಕ ಹಣಾಹಣಿಯಲ್ಲಿ 24-26, 19-25,29-27,22-25 ಕೇರಳದ ಕೊಟ್ಟಾಯಂನ ಮಹಾತ್ಮ ಗಾಂ ವಿವಿಯು ಗೆಲುವಿನ ನಗೆಬೀರಿ ಪ್ರಥಮ ಸ್ಥಾನ ಪಡೆಯಿತು.
ಗೆಲುವಿಗಾಗಿ ತೀವ್ರ ಹೋರಾಟ ನಡೆಸಿದ ಉಜಿರಿಯಾ ಎಸ್ಡಿಎಂ ವಿವಿಯು 2ನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾಯಿತು. ಕೇರಳದ ಪರವಾಗಿ ಹೇಮಂತ್, ರಿತು ಹರ್ಷದ್ ಉತ್ತಮ ಪ್ರದರ್ಶನ ನೀಡಿದರೆ, ಉಜಿರಿ ತಂಡದ ಪರವಾಗಿ ರೋಹನ್, ಶಶಾಂಕ್, ಸಯ್ಯದ್, ಮೆಲವಿನ್, ಪ್ರಬಾಸ್, ಮಾನಸ್ ಕೂಡ ಎದುರಾಳಿಗೆ ತಂಡಕ್ಕೆ ತೀವ್ರ ಪೈಪೋಟಿ ಒಡ್ಡಿದರು. ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಹರ್ಷೋದ್ಘಾರ, ಜೈಕಾರ, ಚಪ್ಪಾಳೆ ನಡುವೆಯೂ ಉಜಿರಿ ತಂಡ ತೀವ್ರ ಪೈಪೋಟಿ ನೀಡಿತಾದರೂ ಅಂತಿಮವಾಗಿ ಕೇರಳದ ಕೊಟ್ಟಾಯಂನ ಮಹಾತ್ಮ ಗಾಂ ವಿವಿ ಗೆಲುವಿನ ನಗೆ ಬೀರಿತು.
ಬೆಂಗಳೂರು ವಿವಿಯು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದಗೌಡ, ಅಬಕಾರಿ ಸಚಿವಕೆ.ಗೋಪಾಲಯ್ಯ, ಕರ್ನಾಟಕ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಮಾಜಿ ಉಪಮಹಾಪೌರ ಎಸ್. ಹರೀಶ್, ಹೇಮಲತಾ ಗೋಪಾಲಯ್ಯ , ಬಿಬಿಎಂಪಿ ಮಾಜಿ ಸದಸ್ಯ ಕೆ.ಉಮೇಶ್ ಶೆಟ್ಟಿ ಅವರು ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಥಮ ಸ್ಥಾನ ಪಡೆದ ತಂಡಕ್ಕೆ 40 ಸಾವಿರ ರೂ. ದ್ವಿತೀಯ ಸ್ಥಾನ ಪಡೆದವರಿಗೆ 20 ಸಾವಿರ, ತೃತೀಯ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ನೀಡಲಾಯಿತು.
ಅತ್ಯುತ್ತಮ ಆಟವಾಡಿದ ರೋಹನ್, ಪಾಸರ್ ಜಸ್ವಿನ್, ಹೇಮಂತ್ ಅವರಿಗೆ ವೈಯಕ್ತಿಕ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 97ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್ ಅವರು ಕಳೆದ 19 ವರ್ಷಗಳಿಂದ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬಂದಿದ್ದಾರೆ.

Articles You Might Like

Share This Article