ಕ್ರೀಡಾ ಪ್ರೇಮಿಗಳ ಮನಗೆದ್ದ ವಾಜಪೇಯಿ ಕಪ್ ವಾಲಿಬಾಲ್ ಪಂದ್ಯಾವಳಿ

Social Share

ಬೆಂಗಳೂರು,ಡಿ.23- ಮಹಾಲಕ್ಷ್ಮೀ ವಿಧಾನಸಭಾ ಕ್ಷೇತ್ರದ ಶಂಕರಮಠದ ಬಳಿ ಇರುವ ವಿವೇಕಾನಂದ ಮೈದಾನದಲ್ಲಿ ನಡೆಯುತ್ತಿರುವ ವಾಜಪೇಯಿ ಕಪ್ -2022 ವಾಲಿಬಾಲ್ ಪಂದ್ಯ ಕ್ರೀಡಾ ಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದ ಆಟದ ಮೈದಾನದಲ್ಲಿ ಅಜಾತ ಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಜನ್ಮ ದಿನಾಚರಣೆ ಪ್ರಯುಕ್ತ 20ನೇ ವರ್ಷದ ವಾಜಪೇಯಿ ಕಪ್ -2022 ರಾಷ್ಟ್ರಮಟ್ಟದ ಪುರುಷ, ಮಹಿಳಾ ವಾಲಿಬಾಲ್ ಎರಡನೇಯ ದಿನದ ಪಂದ್ಯಾವಳಿ ರೋಚಕತೆ ಇಂದ ಕೂಡಿತ್ತು.

ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮಾಜಿ ಮಹಾಪೌರರುಗಳಾದ ಎಸï.ಕೆ.ನಟರಾಜï, ಕಟ್ಟೆ ಸತ್ಯನಾರಾಯಣ್, ಮಾಜಿ ಉಪಮಹಾಪೌರ ಎಸ್.ಹರೀಶ್, ಮಾಜಿ ಆಡಳಿತ ಪಕ್ಷದ ನಾಯಕ .ಶಿವರಾಜು, ನಿಕಟಪೂರ್ವ ಬಿಬಿಎಂಪಿ ಸದಸ್ಯ ಕೇಶವಮೂರ್ತಿ, ಬಿಜೆಪಿ ಮುಖಂಡ ಸಪ್ತಗಿರಿಗೌಡ, ವಿನುತಾ ಹರೀಶ್ ಮತ್ತಿತರರು ಆಟಗಾರರಿಗೆ ಶುಭ ಕೋರಿದರು.

ಬಿಜೆಪಿಗೆ ಬಿಸಿ ತುಪ್ಪವಾದ ಫ್ಯಾಮಿಲಿ ಪಾಲಿಟಿಕ್ಸ್

ಕರ್ನಾಟಕ ಮತ್ತು ತಮಿಳುನಾಡು ಮಹಿಳಾ ತಂಡಗಳ ನಡುವೆ ನಡೆದ ರೋಚಕ ಪಂದ್ಯದಲ್ಲಿ ತಮಿಳುನಾಡು ತಂಡ ಜಯಭೇರಿ ಬಾರಿಸಿತು. ಕರ್ನಾಟಕ ತಂಡದ ವಿರುದ್ಧ 20-25, 27-29, 21-25 ನೇರ ಸೆಟ್ ಮೂಲಕ ತಮಿಳುನಾಡು ಮಹಿಳಾ ವಿಜಯ ಸಾಧಿಸಿತು. ತಮಿಳುನಾಡು ತಂಡದ ಪರ ಕಾವ್ಯ, ಪ್ರೀತಿ ಅತ್ಯುತ್ತಮ ಹೊಡೆತಗಳಿಂದ ಪಾಯಿಂಟ್ ಸಂಗ್ರಹ ಮಾಡಿ ಗಮನ ಸೆಳೆದರು.

ಪಂದ್ಯಾವಳಿ ಆರಂಭಕ್ಕೂ ಮುನ್ನ ಕೇರಳದ ಕಳರಿಪಾಯಟ್ಟು ಸಾಹಸ ಕಲೆ ಏರ್ಪಡಿಸಲಾಗಿತ್ತು. ಸಾಹಸ ಕಲಾವಿದರ ರೋಮಾಂಚಕಾರಿ ಕಸರತ್ತುಗಳು ಸಭೀಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

Vajpayee Cup Volleyball, Tournament, Rajajinagar,

Articles You Might Like

Share This Article