ಬೆಂಗಳೂರು,ಜ.29- ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಯಾದ ಬೆಂಗಳೂರು-ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಸೇವೆ ಮಾರ್ಚ್ ತಿಂಗಳಾಂತ್ಯಕ್ಕೆ ಅಥವಾ ಏಪ್ರಿಲ್ ತಿಂಗಳಲ್ಲಿ ಆರಂಭವಾಗಲಿದೆ.
ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಮಿನಿ ವಂದೇ ಭಾರತ್ ಕಲ್ಪನೆಯಲ್ಲೇ ಇರಲಿದ್ದು, ಇದು 8 ಕೋಚ್‍ಗಳ ರೈಲಾಗಿದೆ. ಅಂದರೆ ಈ ರೈಲಿನಲ್ಲಿ 8 ಬೋಗಿಗಳು ಮಾತ್ರ ಇರಲಿದೆ. ಈ ಎಕ್ಸ್‍ಪ್ರೆಸ್ ರೈಲು ಕೇವಲ 5 ಗಂಟೆಗಳಲ್ಲಿ ಬೆಂಗಳೂರಿನಿಂದ ಧಾರವಾಡ ತಲುಪಬಹುದಾಗಿದೆ.
ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದ ಹೈಲೈಟ್ಸ್
ಜೊತೆಗೆ ಕರ್ನಾಟಕಕ್ಕೆ ಇನ್ನೊಂದು ವಂದೇ ಭಾರತ್ ರೈಲು ಸೌಲಭ್ಯ ದೊರೆಯುವ ಸಾಧ್ಯತೆಯಿದ್ದು, ಬೆಂಗಳೂರು ಮತ್ತು ಹೈದರಾಬಾದ್ ನಡುವೆ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲನ್ನು ಆರಂಭಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸುತ್ತಿದೆ ಎಂದು ಹೇಳಲಾಗಿದೆ.
ಈ ರೈಲು ಬೆಂಗಳೂರು ಮತ್ತು ಹೈದರಾಬಾದ್ ಬಳಿಯ ಕಾಚಿಗುಡ ನಡುವೆ ಸಂಚಾರ ಸೇವೆ ಒದಗಿಸಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಅಸೂಚನೆಯು ತಿಳಿಸಿದೆ.
#launching, #VandeBharatExpress, #DharwadToBengaluru,