ವಂದೇ ಭಾರತ್ ರೈಲಿಗೆ ಮತ್ತೆ ದನ ಡಿಕ್ಕಿ, 20 ನಿಮಿಷ ಪ್ರಯಾಣ ವಿಳಂಬ

Social Share

ಮುಂಬೈ, ಅ.29- ಗುಜರಾತ್‍ನ ಗಾಂಧಿನಗರ ಹಾಗೂ ಮಹರಾಷ್ಟ್ರದ ಮುಂಬೈ ನಡುವೆ ಸಂಚರಿಸುವ ವಂದೇ ಭಾರತ್ ಸೂಪರ್ ಪಾಸ್ಟ್ ಎಕ್ಸ್‍ಪೆಕ್ಸ್ ರೈಲಿಗೆ ಮೂರನೇ ಬಾರಿಗೆ ದನವೊಂದು ಡಿಕ್ಕಿ ಹೊಡೆದಿದ್ದು, ಸಂಚಾರ 20 ನಿಮಿಷಗಳ ಕಾಲ ಪ್ರಯಾಣ ವಿಳಂಬವಾಗಿದೆ.

ಶನಿವಾರ ಬೆಳಗ್ಗೆ 8.20ರ ಸುಮಾರಿಗೆ ಅತುಲ್ ರೈಲ್ವೆ ನಿಲ್ದಾಣದ ಬಳಿ ದನವೊಂದು ಡಿಕ್ಕಿ ಹೊಡೆದಿದೆ. ಇದರಿಂದ ರೈಲಿನ ಮುಂಬಾಗ ಮತ್ತೆ ಹಾನಿಗೆ ಒಳಗಾಗಿದೆ. ಸೆಪ್ಟಂಬರ್ 30ರಂದು ಗುಜರಾತ್‍ನ ಗಾಂಧಿ ನಗರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಮಾರ್ಗದ ವಂದೇ ಮಾತರಂ ರೈಲಿಗೆ ಚಾಲನೆ ನೀಡಿದ್ದರು. ಅಂದಿನಿಂದ ಇದು ಮೂರನೇ ಬಾರಿ ಸಂಭವಿಸಿದ ಅಪಘಾತ ಪ್ರಕರಣವಾಗಿದೆ.

ದೇಶಿ ನಿರ್ಮಿತ ಸೆಮಿ ಹೈಸ್ಪೀಡ್ ರೈಲು ಎಂಬ ಹೆಗ್ಗಳಿಕೆಯೊಂದಿಗೆ ವಂದೇ ಭಾರತ್ ಚಾಲನೆಗೊಂಡಿದೆ. ಅಕ್ಟೋಬರ್ 6ರಂದು ಮುಂಬೈ-ಗಾಂಧಿನಗರ ಮಾರ್ಗ ಮಧ್ಯೆ ವಟ್ವಾ ಮತ್ತು ಮಣಿನಗರ ರೈಲ್ವೆ ನಿಲ್ದಾಣಗಳ ನಡುವೆ ಡಿಕ್ಕಿ ಎಮ್ಮೆಗಳು ಹೊಡೆದಿದ್ದರಿಂದ ನಾಲ್ಕು ಜಾನುವಾರುಗಳು ಸಾವನ್ನಪ್ಪಿದ್ದವು. ರೈಲಿನ ಮುಖಭಾಗ ಜಕ್ಕಂ ಆಗಿತ್ತು, ರಾತ್ರೋರಾತ್ರಿ ಅದನ್ನು ದುರಸ್ತಿಗೊಳಿಸಲಾಗಿದೆ.
ಪುನೀತ್ ಪ್ರಥಮ ಪುಣ್ಯಸ್ಮರಣೆಗೆ ಹರಿದುಬಂದ ಅಭಿಮಾನಿ ಸಾಗರ

ಮಾರನೇಯ ದಿನ ಗುಜರಾತ್‍ನ ಆನಂದ ಬಳಿ ಹಸುವೊಂದು ಡಿಕ್ಕಿ ಹೊಡೆದಿತ್ತು. ಆಗಲೂ ರೈಲಿನ ಮುಖ ಭಾಗಕ್ಕೆ ಹಾನಿಯಾಗಿತ್ತು. ಈಗ ಮೂರನೇ ಬಾರಿ ಮತ್ತೆ ದನ ಡಿಕ್ಕಿ ಹೊಡೆದಿದೆ. ರೈಲಿನ ನಿರ್ವಹಣಾ ಸಾಮಥ್ರ್ಯಕ್ಕೆ ಯಾವುದೇ ಹಾನಿಯಾಗಿಲ್ಲ. ಮೊದಲ ಬೋಗಿಗೆ ಹಾನಿಯಾಗಿದೆ. 20 ನಿಮಿಷ ಕಾಲ ಪ್ರಯಾಣ ವಿಳಂಭವಾಗಿದ್ದು ಬಿಟ್ಟರೆ, ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ರೈಲ್ವೆ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.

Articles You Might Like

Share This Article