ಮುಂಬೈ-ಗೋವಾ ನಡುವೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು

Social Share

ಥಾಣೆ,ಮಾ.4-ಮುಂಬೈ-ಗೋವಾ ಮಾರ್ಗದಲ್ಲಿ ವಂದೇ ಭಾರತ್ ಸೆಮಿ ಹೈಸ್ಪೀಡ್ ಎಕ್ಸ್‍ಪ್ರೆಸ್ ರೈಲನ್ನು ಶೀಘ್ರದಲ್ಲೇ ಓಡಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಭರವಸೆ ನೀಡಿದ್ದಾರೆ.

ಇತ್ತಿಚೆಗೆ ಸಚಿವರನ್ನು ಭೇಟಿಯಾಗಿದ್ದ ಶಾಸಕರ ನಿಯೋಗಕ್ಕೆ ಈ ಭರವಸೆ ನೀಡಲಾಗಿದೆ ಎಂದು ಮಹಾರಾಷ್ಟ್ರ ವಿಧಾನಪರಿಷತ್‍ಸದಸ್ಯ ನಿರಂಜನ್ ದಾವ್ಕರೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಎಕ್ಸ್‍ಪ್ರೆಸ್ ರೈಲನ್ನು ಮುಂಬೈ-ಶಿರಡಿ ಮತ್ತು ಮುಂಬೈ-ಸೋಲಾಪುರ ಮಾರ್ಗಗಳಲ್ಲಿ ಇತ್ತೀಚೆಗೆ ಪರಿಚಯಿಸಲಾದ ಮಾರ್ಗಗಳಲ್ಲಿ ಮುಂಬೈ ಮತ್ತು ಗೋವಾ ನಡುವೆ ಪ್ರಯಾಣದ ಸಮಯ ಮೊಟಕುಗೊಳಿಸುವ ಉದ್ದೇಶದಿಂದ ಚಾಲನೆ ನೀಡಲಾಗುತ್ತಿದೆಯಂತೆ.

ಮಾ.8ಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಭಾರತ ಭೇಟಿ

ಮುಂಬೈ-ಗೋವಾ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಪರಿಶೀಲನೆಯ ನಂತರ ಹೊಸ ರೈಲು ಸೇವೆಯನ್ನು ಪರಿಚಯಿಸಲಾಗುವುದು ಎಂದು ಸಚಿವರು ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ನಿರಂಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲ್ವೆ ಯೋಜನೆ ಪೀಡಿತ ವ್ಯಕ್ತಿಗಳಿಗೆ ಅಥವಾ ಅವರ ಸಂಬಂಧಿಕರಿಗೆ ಮಳಿಗೆಗಳನ್ನು ಹಂಚಿಕೆ ಮಾಡುವುದು, ರೈತರಿಗೆ ಪ್ರತಿ ರೈಲು ನಿಲ್ದಾಣದಲ್ಲಿ ಮೊಬೈಲ್ ಮಳಿಗೆಗಳು, ಅವರ ಮತ್ತು ರೈಲುಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಪ್ಲಾಟ್‍ಫಾರ್ಮ್‍ಗಳ ಎತ್ತರವನ್ನು ಹೆಚ್ಚಿಸುವುದು, ರೈಲ್ವೆ ಸೇತುವೆಯಿಂದ ಪ್ರವಾಹವನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವುದು. ರಾಯಗಡದ ಮಹಾಡ್ ಕೂಡ ಚರ್ಚೆಗೆ ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಆಸ್ಟ್ರೇಲಿಯಾದಲ್ಲಿ ಮುಂದುವರೆದ ಹಿಂದೂ ದೇಗುಲಗಳ ಮೇಲೆ ದಾಳಿ

ಥಾಣೆಯ ಮುಂಬ್ರಾ ನಿಲ್ದಾಣವನ್ನು ಮುಂಬ್ರಾ ದೇವಿ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕೆಂದು ಶಾಸಕರು ಒತ್ತಾಯಿಸಿದರು. ಈ ಕುರಿತು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಧಾನ್ವೆ ಭರವಸೆ ನೀಡಿದ್ದಾರೆ.

Vande Bharat, train, soon, Mumbai, Goa,

Articles You Might Like

Share This Article