90 ವರ್ಷದ ನಂತರ ತುಂಬಿದ ವಾಣಿ ವಿಲಾಸ ಸಾಗರ

Social Share

ಚಿತ್ರದುರ್ಗ, ಸೆ.1- ಅಚ್ಚುಕಟ್ಟು ಪ್ರದೇಶಗಳಲ್ಲಿ ಮಳೆ ಹಾಗೂ ಮಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟದಿಂದ 90 ವರ್ಷಗಳ ನಂತರ ಹಿರಿಯೂರು ತಾಲ್ಲೂಕಿನಲ್ಲಿರುವ ಪ್ರಸಿದ್ಧ ವಾಣಿ ವಿಲಾಸ ಜಲಾಶಯ ಭರ್ತಿಯಾಗಿದೆ.

ಇದನ್ನು ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದು, ಐತಿಹಾಸಿಕ ಜಲಾಶಯ ತುಂಬಿರುವುದರಿಂದ ರೈತ ಸಮುದಾಯದಲ್ಲಿ ಹರ್ಷದ ಹೊನಲು ಹರಿದಿದೆ.ಜಲಾಶಯಕ್ಕೆ ಮೂರೂವರೆ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇಂದು ಬಹುತೇಕ 130 ಅಡಿ ಎತ್ತರದ ಜಲಾಶಯ ಇಂದು ಭರ್ತಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

30 ಟಿಎಂಸಿ ನೀರು ಶೇಖರಿಸಬಹುದಾದ ಈ ಜಲಾಶಯವನ್ನು ಕಳೆದ 1908ರಲ್ಲಿ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದ್ದರು. ವಿಶೇಷವೆಂದರೆ ಅಂದಿನಿಂದ ಈ ಜಲಾಶಯ ಪೂರ್ಣವಾಗಿ ತುಂಬಿರುವ ಉದಾಹರಣೆಗಳೇ ಇರಲಿಲ್ಲ.

ಆದರೆ, ಈಗ 90 ವರ್ಷದ ನಂತರ ಜಲಾಶಯ ತುಂಬಿದ್ದು, ಗೇಟ್ಗಳನ್ನು ಇಂದು ಸಂಜೆ ವೇಳೆಗೆ ತೆರೆದು ನೀರು ಹೊರಗೆ ಹರಿಸುವ ಸಾಧ್ಯತೆ ಇದೆ. ಜನರು ತಂಡೋಪತಂಡವಾಗಿ ಈ ಭಾಗಕ್ಕೆ ಬರುತ್ತಿದ್ದು, ಹೊಸದುರ್ಗ, ಹಿರಿಯೂರು ಭಾಗದ ಹಾರನಕಣಿವೆ ಸಮೀಪ ಕೋಡಿ ನೀರು ಹರಿದು ಬರುವ ಹಿನ್ನೆಲೆಯಲ್ಲಿ ಅಲ್ಲಿಗೆ ಜನರ ಸಂಚಾರವನ್ನು ನಿರ್ಬಂಸಲಾಗಿದೆ.

Articles You Might Like

Share This Article