ಇಂದಿನಿಂದ 4 ದಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯ

Social Share

ನವದೆಹಲಿ,ಮಾ.1-ದೇಶದ ಹಲವು ವಲಯಗಳಲ್ಲಿ ಹಳಿಗಳು ಹಾಗೂ ರೈಲುಗಳಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ 4 ದಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಇಂದು ಸುಮಾರು 351 ರೈಲುಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.ಇದೇ ರೀತಿಯ ನಿರ್ವಹಣೆ ಸಮಸ್ಯೆ ಹಿನ್ನೆಲೆಯಲ್ಲಿ 96 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು ಮನವಿ ಮಾಡಲಾಗಿದೆ.

ಮೋದಿ ಕೈ ಬೀಸಿದರೆಂದರೆ ಜನರಿಗೆ ಬರೆ ಬಿತ್ತು ಎಂದೇ ಅರ್ಥ : ಕಾಂಗ್ರೆಸ್ ಲೇವಡಿ

ವ್ಯತ್ಯಯವಾದ ರೈಲನ ಟಿಕೆಟ್‍ಅನ್ನು ಈಗಾಗಲೆ ಬುಕ್ ಮಾಡಿರುವ ಪ್ರಯಾಣಿಕರಿಗೆ ಮರುಪಾವತಿ ಮಾಡಲಾಗುವುದು, ಸರಿಯಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗಿದೆ.

ಕೌಂಟರ್‍ಗಳ ಮೂಲಕ ಟಿಕೆಟ್ ಕಾಯ್ದಿರಿಸಿದವರು ಮರುಪಾವತಿಯನ್ನು ಒಪಡೆಯಲು ರೈಲು ನಿಲ್ದಾಣಕ್ಕೆ ಬಂದು ಪಡೆಯಬಹುದು. ನೈರುತ್ಯ ವಲಯದಲ್ಲೇ ಹಾಗು ಸೆಂಟ್ರಲ್ ರೈಲ್ವೆ ಭಾಗದಲ್ಲೇ ಹೆಚ್ಚು ಬಾದಿತವಾಗಿದೆ.

#Variation, #TrainService, #IndianRailways,

Articles You Might Like

Share This Article