ಬೆಂಗಳೂರು,ಮಾ.18-ದಮ್ಮು, ತಾಕತ್ತು ಇದ್ದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ರ್ಪಧಿಸಲಿ ಎಂದು ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಬ್ಬರ ದಮ್ಮು, ತಾಕತ್ತು ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ದಮ್ಮು, ತಾಕತ್ತು ಇದ್ದರೆ ಸ್ಪರ್ಧೆ ಮಾಡಲಿ. ಕ್ಷೇತ್ರದ ಜನ ಯಾರನ್ನು ಕೈ ಹಿಡಿಯುತ್ತಾರೋ ನೋಡೋಣ ಎಂದು ಸವಾಲು ಎಸೆದರು.
ನಾನು ಕೋಲಾರದಿಂದ ಸ್ಪರ್ಧೆ ಮಾಡುವುದು ಬೇಡ ಎಂದರೆ ನನ್ನಂತಹ ಚಿಲ್ಲರೆ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದರು. ಇದೇ ಚಿಲ್ಲರೆ ವ್ಯಕ್ತಿ ಸೋಲಿನ ರುಚಿ ತೋರಿಸುತ್ತಾನೆ ಎಂಬುದು ಅವರಿಗೆ ಖಾತರಿಯಾಗಿದೆ. ಹಾಗಾಗಿಯೇ ಯುದ್ಧಕ್ಕೂ ಮುನ್ನವೇ ಸೋಲು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸಿಬಿಐ, ಇಡಿ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿವೆ : ಶಾ
ಸಿದ್ದರಾಮಯ್ಯ ಅವರಿಗೆ ಗಂಡಸ್ತನವಿದ್ದರೆ ಕೋಲಾರದಿಂದ ಸ್ರ್ಪಧಿಸಲಿ ಅವರು ಅಲ್ಲಿಗೆ ಬಂದಿದ್ದೆ ಕುರುಬ ಸಮಾಜದವರನ್ನು ಹಾಳು ಮಾಡಿ ಸಮುದಾಯದ ನಡುವೆ ಬೆಂಕಿ ಹಚ್ಚಿದರು. ವಾಸ್ತವ ಸ್ಥಿತಿ ಏನೆಂಬುದು ಗೊತ್ತಾಗಿದ್ದರಿಂದಲೇ ಕ್ಷೇತ್ರದಿಂದಲೇ ಪಲಾಯನ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನಿಜವಾಗಿ ಅವರು ಸ್ಪರ್ಧೆ ಮಾಡಿದ್ದರೆ ನನ್ನ ತಾಕತ್ತು ಏನೆಂಬುದನ್ನು ತೋರಿಸುತ್ತಿದ್ದೆ. ಆದರೆ ಯುದ್ದಕ್ಕೂ ಮುನ್ನವೇ ಶಸ್ತ್ರ ತ್ಯಾಗ ಮಾಡಿರುವವರ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಬಾರಿ ಕೋಲಾರದಲ್ಲಿ ನನ್ನ ಗೆಲುವು ನೂರಕ್ಕೆ ನೂರರಷ್ಟು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಆರ್.ಟಿ.ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಆಗಮಿಸಿದ ವರ್ತೂರು ಪ್ರಕಾಶ್, ಕೋಲಾರ ಬೆಳವಣಿಗೆಯ ಕುರಿತಂತೆ ರಹಸ್ಯ ಮಾತುಕತೆ ನಡೆಸಿದರು.
ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ
ಕೋಲಾರದಿಂದ ಸ್ರ್ಪಧಿಸದಂತೆ ಸಿದ್ದರಾಮಯ್ಯನವರಿಗೆ ಪಕ್ಷದ ವರಿಷ್ಠರು ಸಲಹೆ ಮಾಡಿದ್ದಾರೆಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ತುಸು ಮನಸ್ಮಿತರಾಗಿದ್ದ ವರ್ತೂರು ಪ್ರಕಾಶ್ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆನಡೆಸಿದ್ದಾರೆ.
Varthur Prakash, siddaramaiah, kolar, assembly, constituency,