ನವದೆಹಲಿ,ಮಾ.17- ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ವಿರುದ್ಧ ಸೋದರ ಸಂಬಂಧಿ ವರುಣ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಆಕ್ಸ್‍ಫರ್ಡ್ ವಿವಿಯಲ್ಲಿ ದೇಶದ ಮಾನ ಹರಾಜು ಹಾಕಿರುವ ರಾಹುಲ್ ಗಾಂಧಿ ಅವರನ್ನು ಕೆಣಕಿರುವ ವರುಣ್‍ಗಾಂಧಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ ಸರಿಯಾದ ಹಾದಿಯಲ್ಲಿದೆ ಎಂದು ಹೇಳಿಕೆ ನೀಡುವ ಮೂಲಕ ಟಾಂಗ್ ನೀಡಿದ್ದಾರೆ.
ನನಗೂ ಆಕ್ಸ್‍ಫರ್ಡ್ ವಿವಿಯಲ್ಲಿ ಭಾಷಣ ಮಾಡಲು ಬೇಡಿಕೆ ಬಂದಿತ್ತು ಆದರೆ, ಅದನ್ನು ನಾನು ನಿರಾಕರಿಸಿದ್ದೆ ನಿಮ್ಮ ಹಾಗೇ ದೇಶದ ಮಾನ ಹರಾಜು ಹಾಕಲು ಹೋಗಲಿಲ್ಲ ಎಂದು ಅವರು ಟ್ವಿಟ್ ಮಾಡಿದ್ದಾರೆ.
ಬಹುಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಭಾರಿ ಬೆಂಕಿ, 6 ಮಂದಿ ಸಾವು
ಭಾರತದ ಆಯ್ಕೆಗಳು ಮತ್ತು ಸವಾಲುಗಳನ್ನು ಅಂತರಾಷ್ಟ್ರೀಯ ಪರಿಶೀಲನೆಗೆ ಒಳಪಡಿಸುವುದು ಅಗೌರವಕಾರಿ ಕೃತ್ಯ ಎಂದು ಬಣ್ಣಿಸಿರುವ ವರುಣ್‍ಗಾಂಧಿ ಭಾರತದ ರಾಜಕೀಯ ನಿಯಮಿತವಾಗಿ ವಿಮರ್ಶೆ ಮತ್ತು ರಚನಾತ್ಮಕ ಸಲಹೆಗಾಗಿ ಜಾಗವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಬರೋಬ್ಬರಿ 4 ಸಾವಿರ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿಸುತ್ತಿದೆ ಕಬ್ಜ ಚಿತ್ರ
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಕುರಿತು ರಾಹುಲ್ ಗಾಂಧಿಯವರ ಹೇಳಿಕೆ ಕುರಿತಂತೆ ಕ್ಷಮಾಪಣೆ ಕೇಳುವಂತೆ ಬಿಜೆಪಿ ಮುಖಂಡರು ಪಟ್ಟು ಹಿಡಿದಿರುವ ಬೆನ್ನಲೇ ವರುಣ್‍ಗಾಂಧಿ ಅವರ ಈ ಹೇಳಿಕೆ ಕುತೂಹಲ ಕೆರಳಿಸಿದೆ.
Varun Gandhi, Dig, ,Rahul Gandhi, Oxford,