ವಿರೋಧದ ನಡುವೆಯೂ ಸುವರ್ಣಸೌಧದಲ್ಲಿ ಸಾರ್ವಕರ್ ಭಾವಚಿತ್ರ ಲೋಕಾರ್ಪಣೆ

Social Share

ಬೆಳಗಾವಿ,ಡಿ.19-ಪ್ರತಿಪಕ್ಷ ಕಾಂಗ್ರೆಸ್‍ನ ತೀವ್ರ ವಿರೋಧದ ನಡುವೆಯೂ ಇಲ್ಲಿನ ಸುವರ್ಣಸೌಧದ ವಿಧಾನಸೌಧ ಸಭಾಂಗಣದಲ್ಲಿ ನೂತನವಾಗಿ ಅಳವಡಿಸಿದ್ದ ಸಾರ್ವಕರ್ ಭಾವಚಿತ್ರ ಲೋಕಾರ್ಪಣೆ ಮಾಡಲಾಯಿತು.
ಸಭಾಧ್ಯಕ್ಷರ ಆಸನದ ಮೇಲ್ಭಾಗದಲ್ಲಿ ಒಟ್ಟು ಏಳು ಮಹನೀಯರ ಭಾವಚಿತ್ರಗಳನ್ನು ಅಳವಡಿಸಲಾಗಿದೆ.

ಮಧ್ಯಭಾಗದಲ್ಲಿ ಜಗಜ್ಯೋತಿ ಬಸವಣ್ಣ, ಎಡಭಾಗದಲ್ಲಿ ಸ್ವಾಮಿ ವಿವೇಕಾನಂದ, ಸುಭಾಷ್‍ಚಂದ್ರ ಬೋಸ್, ಡಾ.ಬಿ.ಆರ್. ಅಂಬೇಡ್ಕರ್, ಬಲಭಾಗದಲ್ಲಿ ಮಹಾತ್ಮ ಗಾಂೀಜಿ, ಸರರ್ದಾರ್ ವಲ್ಲಭಬಾಯ್ ಪಟೇಲ್ ಮತ್ತು ಸಾರ್ವಕರ್ ಸೇರಿದಂತೆ ಏಳು ಭಾವಚಿತ್ರಗಳನ್ನು ಅಳವಡಿಸಲಾಗಿದೆ.

ಕತಾರ್ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ಗೋಲು, ಹೊಸ ದಾಖಲೆ

ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ ಮತ್ತಿತರರು ಭಾವಚಿತ್ರಗಳನ್ನು ಅನಾವರಣಗೊಳಿಸಿದರು.

ವಿಧಾನಸಭೆಯ ಸಭಾಂಗಣದಲ್ಲಿ ವೀರ ಸಾರ್ವಕರ್ ಭಾವಚಿತ್ರವನ್ನು ಅಳವಡಿಸಿರುವುದಕ್ಕೆ ಅಕೃತ ವಿರೋಧ ಪಕ್ಷ ಕಾಂಗ್ರೆಸ್ ಭಾವಚಿತ್ರ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿ ಕಾರ್ಯಕ್ರಮವನ್ನು ಬಹಿಷ್ಕರಿಸಿತ್ತು.

#VeerSavarkar, #Photo, #SuvarnaSoudha,

Articles You Might Like

Share This Article