ಬೆಂಗಳೂರು,ಫೆ.27- ಬರಲಿರುವ ವಿಧಾನಸಭೆ ಚುನಾವಣೆ ಅಭಿವೃದ್ಧಿ ಆಧಾರದ ಮೇಲೆ ನಡೆಯುತ್ತಯೇ ಹೊರೆತು ವೀರ ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ ಸಿದ್ದಾಂತದ ಮೇಲೆ ನಡೆಯುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲುರವರು ಈ ಬಾರಿಯ ಚುನಾವಣೆ ವೀರ ಸಾವರ್ಕರ್ ಹಾಗೂ ಟಿಪ್ಪು ಸಿದ್ದಾಂತದ ಮೇಲೆ ನಡೆಯಲಿದೆ ಎಂದು ಹೇಳಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿರುವ ಯಡಿಯೂರಪ್ಪ, ಟಿಪ್ಪು ವರ್ಸಸ್ ಸಾವರ್ಕರ್ ಎಂಬುದನ್ನು ನಾನು ಒಪ್ಪುವುದಿಲ್ಲ, ಇದು ಟಿಪ್ಪು ವರ್ಸಸ್ ಸಾವರ್ಕರ್ ಅಲ್ಲ, ಆದರೆ ಬಿಜೆಪಿಯ ನೀತಿಗಳು ಮತ್ತು ಯೋಜನೆಗಳ ಮೇಲೆ ಅವಲಂಬಿಸಿದೆ ಎಂದು ವ್ಯಾಖ್ಯಾನಿಸಿದ್ದಾರೆ.
ವಿಧಾನಸಭೆ ಚುನಾವಣೆಗೂ ಮುನ್ನ ಚುನಾವಣಾ ರಾಜಕೀಯ ತ್ಯಜಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿರುವ ಕರ್ನಾಟಕ ದಿಗ್ಗಜ ಬಿ.ಎಸ್.ಯಡಿಯೂರಪ್ಪ, ಈ ನಿರ್ಧಾರ ಸಂಪೂರ್ಣವಾಗಿ ನನ್ನ ತೀರ್ಮಾನವಾಗಿದ್ದು, ನನಗೆ ಯಾರೊಬ್ಬರೂ ಬಲವಂತ ಮಾಡಿಲ್ಲ ಎಂದು ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಕನ್ನಡಿಗನ ಸಂಶೋಧನೆ: ಮಕ್ಕಳಿಗೆ ಪಾಠ ಮಾಡಲಿದೆ ‘ಶಿಕ್ಷಾ’ ರೋಬೋಟ್
ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ, ನಾನು ದಣಿದಿಲ್ಲ, ಪ್ರಚಾರ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ. ಪ್ರವಾಸ ಮಾಡುತ್ತೇನೆ, ಬಿಜೆಪಿಗೆ ಸಂಪೂರ್ಣ ಬಹುಮತ ಸಿಗುತ್ತದೆ, ಚುನಾವಣಾ ರಾಜಕೀಯ ತ್ಯಜಿಸುವುದು ನನ್ನ ನಿರ್ಧಾರವಾಗಿತ್ತು. ಯಾರೂ ನನ್ನನ್ನು ಬಲವಂತಪಡಿಸಲಿಲ್ಲ. ನಾನು ಈ ನಿರ್ಧಾರವನ್ನು ಏಕೆ ತೆಗೆದುಕೊಂಡೆ ಎಂಬುದನ್ನು ನಾನು ಜನರಿಗೆ ಮನವರಿಕೆ ಮಾಡುತ್ತೇನೆ, ಎಂದು ಅವರು ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಚುನಾವಣಾ ರಾಜಕೀಯದಲ್ಲಿ ನನ್ನ ಅನುಪಸ್ಥಿತಿಯು ಒಂದು ಸವಾಲಾಗಿದೆ. ಬಿಜೆಪಿ ಈ ಸವಾಲುಗಳನ್ನು ಎದುರಿಸಬೇಕಾಗಿದೆ. ನಾನು ಚುನಾವಣೆಯಲ್ಲಿ ಸ್ರ್ಪಧಿಸದಿರುವ ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಲಿಂಗಾಯತ ಸಮುದಾಯದ ಪ್ರಬಲ ನಾಯಕ ಪುನರುಚ್ಚರಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಭ್ರಷ್ಟ ನಾಯಕರು, ಬಿಜೆಪಿ ವಿರುದ್ಧ ಅವರ ಭ್ರಷ್ಟಾಚಾರದ ಆರೋಪ ಆಧಾರ ರಹಿತವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆಯನ್ನು ಎಂಟು ಬಾರಿ ಪ್ರವೇಶ ಮಾಡಿದ್ದ ಯಡಿಯೂರಪ್ಪ ತಮ್ಮ ವಿದಾಯ ಭಾಷಣದಲ್ಲಿ ಪಕ್ಷವನ್ನು ಕಟ್ಟಲು ಮತ್ತು ತನ್ನ ಕೊನೆಯ ಉಸಿರು ಇರುವವರೆಗೂ ಅದನ್ನು ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ವಾಗ್ದಾನ ಮಾಡಿದ್ದರು.
ಕಾಡು ಹಂದಿಯೊಂದಿಗೆ ಹೋರಾಡಿ ಮಗಳನ್ನು ರಕ್ಷಿಸಿ ಬಲಿದಾನವಾದ ಮಹಿಳೆ
ಬಿಜೆಪಿ ಆಡಳಿತವಿರುವ ಏಕೈಕ ದಕ್ಷಿಣ ರಾಜ್ಯದಲ್ಲಿ ಆಶಾಗೋಪುರದ ನಾಯಕ ಕಳೆದ ವರ್ಷ ಜುಲೈನಲ್ಲಿ ತಾನು ವಿಧಾನಸಭಾ ಚುನಾವಣೆಯಲ್ಲಿ ಸ್ರ್ಪಧಿಸುವುದಿಲ್ಲ ಎಂದು ಘೋಷಿಸಿದ್ದರು. ಅವರ ಕಿರಿಯ ಮಗ ಮತ್ತು ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದಾರೆ.
ಪಕ್ಷದ ನಾಯಕತ್ವ ಒಪ್ಪಿದರೆ ಬಿವೈ ವಿಜಯೇಂದ್ರ ಸ್ರ್ಪಸಲಿದ್ದಾರೆ ಎಂದು ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಪುರಸಭಾ ಅಧ್ಯಕ್ಷರಾಗಿ ಚುನಾವಣಾ ರಾಜಕೀಯ ಆರಂಭಿಸಿದ ಹಿರಿಯ ನಾಯಕ, 1983ರಲ್ಲಿ ಶಿಕಾರಿಪುರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು ಮತ್ತು ಅಲ್ಲಿಂದ ಎಂಟು ಬಾರಿ ಗೆದ್ದರು.
ಯಡಿಯೂರಪ್ಪ ಅವರು ಜುಲೈ 26, 2021 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು, ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಳ್ಳಲು ದಾರಿ ಮಾಡಿಕೊಟ್ಟಿದ್ದರು.
veera savarkar, Tipu Sultan, bs yediyurappa, Development, agenda, Assembly elections,