ಹ್ಯಾಂಡ್‍ಲಾಕ್ ಮುರಿದು ವಾಹನ ಕದಿಯುತ್ತಿದ್ದವರ ಸೆರೆ

Spread the love

ಬೆಂಗಳೂರು,ಮೇ 24- ಮನೆ ಮುಂಭಾಗ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದಂತಹ ಬೈಕ್‍ಗಳ ಹ್ಯಾಂಡ್‍ಲಾಕ್ ಮುರಿದು ಕಳವು ಮಾಡುತ್ತಿದ್ದ ಇಬ್ಬರನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿ 6.50 ಲಕ್ಷ ರೂ. ಬೆಲೆಯ ಎಂಟು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮೊಹಮ್ಮದ್ ಇರ್ಷಾದ್ ಷರೀಫ್ ಮತ್ತು ಫರೀದಾ ಖಾನ್ ಬಂಧಿತರು.

ಏ.13ರಂದು ಸಂಜೆ 7.30ರಲ್ಲಿ ಪಿರ್ಯಾದು ದಾರರು ತಮ್ಮ ಮನೆ ಮುಂಭಾಗದ ರಸ್ತೆಯಲ್ಲಿ ತಮ್ಮ ಕೆಟಿಎಂ ಡ್ಯೂಕ್ ಬೈಕ್‍ನ್ನು ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ 7.30ರ ಸುಮಾರಿನಲ್ಲಿ ನೋಡಿದಗ ಕಳ್ಳತನವಾಗಿರುವುದು ಕಂಡುಬಂದಿದೆ.

ಈ ಬಗ್ಗೆ ಬಸವೇಶ್ವರನಗರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಇನ್‍ಸ್ಪೆಕ್ಟರ್ ಕೃಷ್ಣಮೂರ್ತಿ ಅವರು ತಮ್ಮ ಸಿಬ್ಬಂದಿಯೊಂದಿಗೆ ತನಿಖೆ ನಡೆಸಿ ಇಬ್ಬರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಆರೋಪಿಗಳು ಬಸವೇಶ್ವರನಗರ, ಸುಬ್ರಹ್ಮಣ್ಯ ಪುರ, ಚಂದ್ರಲೇಔಟ್, ಬ್ಯಾಟರಾಯನಪುರ ಹಾಗೂ ಬಂಡೇಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಳವು ಮಾಡಿದ್ದ 6.50 ಲಕ್ಷ ರೂ. ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments