ರಾಜ್ಯದಲ್ಲಿ ಏ.1ರಿಂದ ಗುಜರಿ ನೀತಿ ಜಾರಿ

Social Share

ಬೆಂಗಳೂರು,ಫೆ.9- ರಾಜ್ಯದಲ್ಲಿ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಗುಜರಿ ನೀತಿಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರ ರೂಪಿಸಿರುವ 1989ರ ಕೇಂದ್ರ ಮೋಟಾರು ವಾಹನಗಳ ನಿಯಮ 51ಎರಲ್ಲಿನ ಅವಕಾಶದಂತೆ ಈ ಯೋಜನೆಯಲ್ಲಿ ವಾಹನ ಮಾಲೀಕರ ಪರವಾಗಿ ರಾಜ್ಯದಲ್ಲಿಯೂ ಕೆಲವು ರಿಯಾಯತಿಗಳನ್ನು ಘೋಷಿಸುವ ಬಗ್ಗೆ ಪರಿಶೀಲಿಸಲಾಗಿದೆ.

ಈ ನೀತಿಯಲ್ಲಿ ಕಡ್ಡಾಯ ಅಂಶವನ್ನು ಸೇರಿಸದೇ ವಾಹನಗಳ ಮಾಲೀಕರ ಆಯ್ಕೆಗೆ ಬಿಟ್ಟು ಮೊದಲ ಹಂತವಾಗಿ ಸ್ಕ್ರಾಪಿಂಗ್ ಪಾಲಿಸಿಯನ್ನು ಜಾರಿಗೆ ತರಲಾಗುತ್ತಿದೆ. ಹಾಗಾಗಿ 15 ವರ್ಷ ತುಂಬಿದ ವಾಹನ ಮಾಲೀಕರಿಗೆ ತಾತ್ಕಾಲಿಕ ರಿಲೀಫ್ ಸಿಗಲಿದೆ.

ಆದರೆ ಸರ್ಕಾರಿ ವಾಹನಗಳಿಗೆ ಈ ರಿಯಾಯಿತಿ ಅನುಮಾನವಾಗಿದ್ದು, ಬಹುತೇಕ 15 ವರ್ಷ ತುಂಬಿದ ವಾಹನಗಳು ಸ್ಕ್ರಾಪಿಂಗ್ ಕೇಂದ್ರ ತಲುಪಲಿವೆ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ಗುಜರಿ ನೀತಿಯಂತೆ ರಾಜ್ಯದಲ್ಲಿ 15 ವರ್ಷಕ್ಕಿಂತ ಹೆಚ್ಚು ಹಳೆಯ ವಾಹನಗಳನ್ನು ಗುಜರಿಗೆ ಸೇರಿಸುವ ಕೇಂದ್ರ ಸರ್ಕಾರದ ಗುಜರಿ ನೀತಿಗೆ ಅಳವಡಿಸಲಾಗುತ್ತದೆ. ಕರ್ನಾಟಕದಲ್ಲಿಯೂ ಈ ನೀತಿ ಜಾರಿಗೆ ತರುವ ಬಗ್ಗೆ ಪ್ರಸ್ತಾವನೆ ಪರಿಶೀಲನೆಯಲ್ಲಿದೆ.

ಅಮೆರಿಕ ಭಾರತದ ಪ್ರಮುಖ ಪಾಲುದಾರ ದೇಶವಾಗಿರಲಿದೆ : ಪೆಂಟಗಾನ್

ಮೊದಲ ಬಾರಿಗೆ ಈ ಗುಜರಿ ನೀತಿಯನ್ನು ಜಾರಿಗೆ ತರುತ್ತಿರುವುದರಿಂದ ಹದಿನೈದು ವರ್ಷವಾಗಿದ್ದರೂ ಸಹ ಫಿಟ್‍ನೆಸ್ ಇರುವ ವಾಹನಗಳಿಗೆ ಆಗುವ ಸಮಸ್ಯೆಗಳ ಬಗ್ಗೆ ಸರ್ಕಾರ ಸ್ಪಷ್ಟತೆ ಹೊಂದಿದ್ದು, ಗುಜರಿ ನೀತಿಯನ್ನು ಕಡ್ಡಾಯಗೊಳಿಸದೆ ಮಾಲೀಕರ ಆಯ್ಕೆಗೆ ಬಿಡಲಾಗುತ್ತದೆ.

ಹದಿನೈದು ವರ್ಷವಾಗಿರುವ ವಾಹನಗಳ ಸ್ಕ್ರಾಪ್ ಮಾಡಲು ವಾಹನ ಮಾಲೀಕರಿಗೇ ಆಯ್ಕೆಯ ಅವಕಾಶ ನೀಡಲಾಗುತ್ತದೆ. ಈ ಅವಕಾಶ ಬಳಸಿಕೊಳ್ಳುವವರೆಗೆ ತೆರಿಗೆ ರಿಯಾಯಿತಿ ಸೌಲಭ್ಯವನ್ನೂ ಸರ್ಕಾರ ನೀಡುತ್ತಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಒಡೆತನದವಾದರೂ ಸರಿ ಸ್ವಯಂಪ್ರೇರಿತವಾಗಿ ವಾಹನಗಳನ್ನು ಗುಜರಿಗೆ ಹಾಕಿದರೆ ಅವರಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ.

ಹೊಸ ವಾಹನ ಖರೀದಿಸುವಾಗಿ ಆ ಪ್ರಮಾಣಪತ್ರ ತೋರಿಸಿದಲ್ಲಿ ಸಾರಿಗೇತರ ವಾಹನಕ್ಕೆ 15 ವರ್ಷಗಳ ಕಾಲ ಶೇ.25 ಮತ್ತು ಸಾರಿಗೆ ವಾಹನಕ್ಕೆ 8 ವರ್ಷಗಳ ಕಾಲ ಶೇ.15ರಷ್ಟು ತೆರಿಗೆ ವಿನಾಯಿತಿ ನೀಡಲಾಗುತ್ತದೆ ಇಂತಹ ರಿಯಾಯಿತಿ ಮೂಲಕ ವಾಹನಗಳ ಸ್ಕ್ರಾಪ್ ಮಾಡಲು ವಾಹನ ಮಾಲೀಕರು ಮುಂದಾಗುವಂತೆ ಉತ್ತೇಜನ ನೀಡಲಿದೆ.

ವಾಹನಗಳನ್ನು ಗುಜರಿಗೆ ಹಾಕಬೇಕಾದರೂ ಕೆಲವೊಂದು ಷರತ್ತುಗಳನ್ನು ವಿಸಲಾಗುತ್ತಿದೆ. ಗುಜರಿಗೆ ಹಾಕುವ ವಾಹನಗಳ ಮೇಲೆ ಕ್ರಿಮಿನಲ್ ಕೇಸ್ ಇರಬಾರದು, ಸಂಚಾರ ನಿಯಮ ಉಲ್ಲಂಘನೆಯ ದಂಡ ಬಾಕಿ ಇರಬಾರದು ಈ ಕುರಿತು ಸ್ಕ್ರಾಪ್ ಕೇಂದ್ರದಲ್ಲಿ ಮುಚ್ಚಳಿಕೆ ಬರೆದುಕೊಡಬೇಕಾಗುತ್ತದೆ.

ಭುಜದ ಮೇಲೆ ಪತ್ನಿ ಶವ ಹೊತ್ತು ಸಾಗಿದ ಪತಿ

ನಂತರ ಅವರ ವಾಹನದ ಚಾಸಿ ಸಂಖ್ಯೆಯನ್ನು 6 ತಿಂಗಳ ಕಾಲ ಇಟ್ಟಿರಲಾಗುತ್ತದೆ. 2 ವರ್ಷಗಳ ಕಾಲ ಸ್ಕ್ರಾಪ್ ಆದ ವಾಹನಗಳ ಭೌತಿಕ ದಾಖಲೆ ಇರಿಸಿಕೊಳ್ಳಲಿದ್ದು, 10 ವರ್ಷದವರೆಗೂ ಡಿಜಿಟಲ್ ದಾಖಲೆಗಳ ಸಂಗ್ರಹ ಮಾಡಿಕೊಳ್ಳಲಾಗುತ್ತದೆ. ಹಾಗಾಗಿ ಸ್ಕ್ರಾಪ್ ಆದ ವಾಹನಗಳ ದಾಖಲೆಗಳ ದುರ್ಬಳಕೆಯ ಆತಂಕಪಡಬೇಕಿಲ್ಲ.
ಸದ್ಯಕ್ಕೆ ಮೊದಲ ಹಂತದಲ್ಲಿ ವಾಹನ ಮಾಲೀಕರಲ್ಲಿ ಜÁಗೃತಿ ಮೂಡಿಸುವುದಕ್ಕೆ ಆದ್ಯತೆ ನೀಡಲಾಗಿದೆ. ನಂತರದ ದಿನಗಳಲ್ಲಿ ಹಂತಹಂತವಾಗಿ ಸ್ಕ್ರ್ಯಾಪಿಂಗ್ ನೀತಿಯನ್ನು ಕಡ್ಡಾಯಗೊಳಿಸುವ ಚಿಂತನೆ ಇದೆ.

ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಇದು ಅವಲಂಬಿಸಿದೆ. ಹಾಗಾಗಿ ಇನ್ನು ಕೆಲ ವರ್ಷ 15 ವರ್ಷವಾಗಿರುವ ವಾಹನಗಳ ಕಡ್ಡಾಯ ಸ್ಕ್ರ್ಯಾಪಿಂಗ್‍ನಿಂದ ವಾಹನ ಮಾಲೀಕರು ಬಚಾವಾಗಿದ್ದು, ತಾತ್ಕಾಲಿಕವಾಗಿ ಗುಜರಿ ನೀತಿಯಿಂದ ರಿಲೀಫ್ ಪಡೆದುಕೊಳ್ಳುತ್ತಿದ್ದಾರೆ.

ಮಗುವಿಗೆ ಜನ್ಮ ನೀಡಿದ ತೃತಿಯಲಿಂಗಿ, ಭಾರತದಲ್ಲಿ ಇದೆ ಮೊದಲು

ಆದರೆ ಭವಿಷ್ಯದಲ್ಲಿ 15 ವರ್ಷ ತುಂಬಿದ ವಾಹನಗಳ ನೋಂದಣಿ ಸ್ಥಗಿತದ ಆದೇಶ ತಂದಲ್ಲಿ ಆಗ ಸಂಪೂರ್ಣವಾಗಿ ಸ್ಕ್ರಾಪಿಂಗ್ ಪಾಲಿಸಿ ಎಲ್ಲರಿಗೂ ಅನ್ವಯವಾಗಲಿದೆ. ಅಲ್ಲಿಯವರೆಗೂ ವಾಹನ ಮಾಲೀಕರು ನಿರಾತಂಕವಾಗಿ ಫಿಟ್‍ನೆಸ್ ಇರುವ ವಾಹನಗಳನ್ನು ರಸ್ತೆಗಿಳಿಸಬಹುದಾಗಿದೆ.

Vehicle, Scrapping, Policy, April,

Articles You Might Like

Share This Article