ಹಳೆಯ ವಾಹನ ಹೊಂದಿದವರಿಗೆ ಶಾಕಿಂಗ್ ನ್ಯೂಸ್, ಇಂದಿನಿಂದ ಗುಜರಿ ನೀತಿ ಜಾರಿ

Social Share

ಬೆಂಗಳೂರು,ಆ.5- ಈಗಾಗಲೇ ಕೇಂದ್ರ ಸರ್ಕಾರ ಜಾರಿ ಮಾಡಿರುವ ಹಳೆ ವಾಹನಗಳನ್ನು ಗುಜರಿಗೆ ಹಾಕುವ ಸ್ಕ್ರ್ಯಾಪ್ ನೀತಿಯು ರಾಜ್ಯದಲ್ಲೂ ಜಾರಿಯಾಗಿದೆ. ರಾಜ್ಯ ಸರ್ಕಾರದ ಹೊಸ ನಿಯಮದಂತೆ ಇನ್ನು ಮುಂದೆ 15 ವರ್ಷ ಹಳೆಯದಾದ ವಾಹನವನ್ನು ಕಡ್ಡಾಯವಾಗಿ ಗುಜರಿಗೆ ಹಾಕುವುದು ಅನಿವಾರ್ಯವಾಗುತ್ತದೆ.

2023 ರಿಂದ, ಎಲ್ಲಾ ರೀತಿಯ ಭಾರಿ ವಾಣಿಜ್ಯ ವಾಹನಗಳು ಕಡ್ಡಾಯ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅದೇ ಸಮಯದಲ್ಲಿ, ಈ ನೀತಿಯು ಜೂನ್ 2024ರಿಂದ ಖಾಸಗಿ ಮತ್ತು ಇತರ ವಾಹನಗಳ ಗುಂಪುಗಳಿಗೆ ಅನ್ವಯಿಸುತ್ತದೆ. ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ಮೋಟಾರ್ ವೆಹಿಕ್ ( ರಿಜಿಸ್ಟ್ರೇಷನ್ ಮತ್ತು ವಾಹನಗಳ ಚಲನಾ ಸ್ಕ್ರಾಫ್ ಫೆಸಿಲಿಟಿ) ನಿಯಮ 2021ನ್ನು, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ನಿಯಮವನ್ನು ಇಂದಿನಿಂದಲೇ ಜಾರಿಗೆ ಬರುವಂತೆ ಕರ್ನಾಟಕದಲ್ಲಿಯೂ ಜಾರಿಗೊಳಿಸಿ ಆದೇಶಿಸಿದ್ದಾರೆ.

ಈ ನೀತಿಯಲ್ಲಿ ಹೊಸ ವಾಹನ ಖರೀದಿಗೆ ಪ್ರೋತ್ಸಾಹ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಹಳೆ ವಾಹನ ಗುಜರಿಗೆ ಹಾಕಿರುವ ಪ್ರಮಾಣಪತ್ರವನ್ನು ಹೊಸ ವಾಹನ ಖರೀದಿ ವೇಳೆ ತೋರಿಸಿದರೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಹಳೇ ವಾಹನಗಳ ಗುಜರಿ ಮೌಲ್ಯವನ್ನೂ ನಿಗದಿ ಮಾಡಲಾಗಿದೆ. ಹೊಸ ವಾಹನದ ಎಕ್ಸ್ ಶೋರೂಂ ದರದ ಶೇ.4ರಿಂದ ಶೇ. 6ರಷ್ಟನ್ನು ಗುಜರಿಗೆ ಹಾಕುವ ವಾಹನಕ್ಕೆ ನೀಡಬೇಕು. ಈ ನೀತಿಯಂತೆ ನೋಂದಣಿ ಅವಧಿ ಮುಗಿದ ಬಳಿಕ ಎಲ್ಲ ವಾಹನಗಳು ಕಡ್ಡಾಯವಾಗಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕು.

ವಾಣಿಜ್ಯ ಬಳಕೆಯ ವಾಹನಗಳು 15 ವರ್ಷ ಪೂರೈಸಿದ ಕೂಡಲೇ ಫಿಟ್ನೆಸ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈಯಕ್ತಿಕ ಬಳಕೆಯ ವಾಹನಗಳಿಗೆ 20 ವರ್ಷ ಪೂರೈಸಿದ ಮೇಲೆ ಫಿಟ್ನೆಸ್ ಪರೀಕ್ಷೆ ನಡೆಸಲಾಗುವುದು. ಫಿಟ್ನೆಸ್ ಪರೀಕ್ಷೆಯಲ್ಲಿ ಅನುತೀರ್ಣ ಆಗುವ ವಾಹನಗಳನ್ನು ಗುಜರಿಗೆ ಹಾಕಬೇಕು.

ಮಾಲಿನ್ಯ ಮತ್ತು ಅಪಘಾತಗಳನ್ನು ಕಡಿಮೆ ಮಾಡುವ ಸಲುವಾಗಿ ಹಳೆಯ ವಾಹನಗಳನ್ನು ರಸ್ತೆಯಿಂದ ತೆಗೆದುಹಾಕುವ ಗುರಿಯನ್ನು ಹೊಂದಿರುವ ಹೊಸ ವಾಹನ ಗುಜರಿ ನೀತಿಯನ್ನು ಕಳೆದ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು.

ಸ್ಕ್ರ್ಯಾಪೇಜ್ ನೀತಿಯಡಿ ವಾಹನ ಮಾಲೀಕರು 15 ವರ್ಷಗಳ ನಂತರ ನೋಂದಣಿ ಮುಗಿದ ನಂತರ ತಮ್ಮ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಸಾಧ್ಯವಾಗುತ್ತದೆ.

Articles You Might Like

Share This Article