ಇಬ್ಬರು ಚೋರರ ಸೆರೆ, 3.50 ಲಕ್ಷ ಮೌಲ್ಯದ ವಾಹನಗಳ ವಶ

Social Share

ಬೆಂಗಳೂರು, ನ.30- ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿ, 3.50 ಲಕ್ಷ ರೂ. ಮೌಲ್ಯದ ಆರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಗ್ಗನಹಳ್ಳಿ ಕ್ರಾಸ್, ಸಂಜೀವಿನಿ ನಗರದ ಸಾಗರ್(19) ಮತ್ತು ಆಂಧ್ರಹಳ್ಳಿ ಮುಖ್ಯರಸ್ತೆಯ ಗಣೇಶ್(20) ಬಂಧಿತರು.
ಸೆಪ್ಟೆಂಬರ್ 30ರಂದು ಮಧ್ಯಾಹ್ನ 2.30ರ ಸುಮಾರಿನಲ್ಲಿ ಸುಜಯ್ ಗಣೇಶ್ ಎಂಬುವರು ತಮ್ಮ ಹೊಂಡಾ ಡಿಯೋ ದ್ವಿಚಕ್ರ ವಾಹನವನ್ನು ತಮ್ಮ ಮನೆ ಮುಂಭಾಗ ನಿಲ್ಲಿಸಿದ್ದು, ಮಾರನೇ ದಿನ ನೋಡಿದಾಗ ಬೈಕ್ ಕಳ್ಳತನವಾಗಿತ್ತು.

ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕಾಲೇಜು ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್..?

ಈ ಬಗ್ಗೆ ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತ ಲಕ್ಷ್ಮಣ್ ನಿಂಬರಗಿ ಹಾಗೂ ವಿಜಯ ನಗರ ಉಪವಿಭಾಗದ ಎಸಿಪಿ ರವಿ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ರವಿಕುಮಾರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳಿಬ್ಬರನ್ನು ಬಂಧಿಸಿ 3.50 ಲಕ್ಷ ರೂ. ಬೆಲೆಬಾಳುವ ಆರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹಿಂದೂ ಧರ್ಮ ನಾಶಕ್ಕೆ ಲವ್‍ಜಿಹಾದ್ ನಡೆಯುತ್ತಿದೆ : ಕೇಂದ್ರ ಸಚಿವ ಗಿರಿರಾಜ್ ಸಿಂಗ್

vehicles, seized, Two, thieves, arrested,

Articles You Might Like

Share This Article