ವೆನೆಜುವೆಲಾದಲ್ಲಿ ಭಾರೀ ಮಳೆ ಹಾಗೂ ಭೂಕುಸಿತಕ್ಕೆ 25 ಮಂದಿ ಸಾವು

Social Share

ಕ್ಯಾರಕಾಸ್ (ವೆನೆಜುವೆಲಾ), ಅ.11-ಲಾಸ್ ಟೆಜೆರಿಯಾಸ್ ನಗರದಲ್ಲಿ ಸಂಭವಿಸಿದ ಭಾರೀ ಮಳೆ ಹಾಗೂ ಭೂಕುಸಿತಕ್ಕೆ 25 ಮಂದಿ ಸಾವನ್ನಪ್ಪಿದ್ದು ಹಲವಾರು ಜನರು ಕಣ್ಮರೆಯಾಗಿದ್ದಾರೆ. ಜೂಲಿಯಾ ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದ ಹಲವೆಡೆ ಭೂಕುಸಿತ ಸಂಭವಿಸಿದ್ದು ವೆನೆಜುವೆಲಾದ ಪ್ರಮುಖ ಕೈಗಾರಿಕಾ ವಲಯದಲ್ಲಿ ನೆಲೆಗೊಂಡಿರುವ ಸುಮಾರು 50,000 ಜನರ ಬಾದಿತರಾಗಿದ್ದಾಸರೆ ನಗರದಲ್ಲಿ 300 ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿದೆ.

ಬೆಟ್ಟ ಪ್ರದೇಶದ ಬಳಿ ಇದ್ದ ಮನೆಗಳು ಮಣಿನಲ್ಲಿ ಹುದುಗಿಹೋಗಿದ್ದು ಸುಮಾರು 52 ಮಂದಿ ನಾಪತ್ತೆಯಾಗಿದ್ದಾರೆ ಪರಿಹಾರ ಕಾರ್ಯಾಚರಣೆ ಗೆ ಡ್ರೋನ್‍ಳು ಮತ್ತು ತರಬೇತಿ ಪಡೆದ ನಾಯಿಗಳನ್ನು ಬಳಸಲಾಗುತ್ತಿದೆ
ರಸ್ತೆಗಳು ಕೂಡ ಮಣ್ಣಿನಿಂದ ಆವೃತವಾಗಿದ್ದು ಅವಶೇಷಗಳನ್ನು ಭಾರೀ ಯಂತ್ರೋಪಕರಣಗಳ ಮೂಲಕ ತೆರವುಗೊಳಿಸಲಾಗುತಿದೆ. ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮೃತರಿಗಾಗಿ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ.ದೇಶದ 11 ರಾಜ್ಯಗಳು ಪ್ರವಾಹದಿಂದ ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ.

ಅಪಾಯ ಸ್ಥಳದಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗುತ್ತಿದೆ ಹವಾಮಾನ ವ್ಯಪರಿತ್ಯದಿಂದ ಜನರು ತತ್ತರಿಸಿದ್ದಾರೆ. ಉಪಾಧ್ಯಕ್ಷ ಡೆಲ್ಸಿ ರೊಡ್ರಿಗಸ್ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ರಕ್ಷಣ ಕಾರ್ಯಾಚರಣೆ ಚುರುಕಿಗೆ ಸೂಚಿಸಿದ್ದಾರೆ.

Articles You Might Like

Share This Article