ಜನರ ನಂಬಿಕೆ ಉಳಿಸಿಕೊಳ್ಳುವಂತೆ ಸಂಸದರಿಗೆ ವೆಂಕಯ್ಯ ನಾಯ್ಡು ಕರೆ

Social Share

ನವದೆಹಲಿ,ಫೆ.2- ಪ್ರಸಕ್ತ ಬಜೆಟ್ ಅವೇಶನದಲ್ಲಿ ಸದನದ ಕಲಾಪ ಸುಗಮವಾಗಿ ನಡೆಯಲು ಅನುವು ಮಾಡಿಕೊಡುವಂತೆ ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಸದನದ ಸದಸ್ಯರಿಗೆ ಮನವಿ ಮಾಡಿದರು.ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇನ್ನೂ ನಂಬಿಕೆ ಇರಿಸಿರುವ ಜನತೆಗೆ ಕುಂದಿಲ್ಲದಂತೆ ನಡೆದುಕೊಳ್ಳಬೇಕು ಎಂದು ಅವರು ರಾಜ್ಯ ಸಭಾ ಸಂಸದರಿಗೆ ಕಿವಿಮಾತು ಹೇಳಿದರು.
ಕಳೆದ 70 ವರ್ಷಗಳಿಂದ ನಿರಂತರವಾಗಿ ಪ್ರಜಾಪ್ರಭುತ್ವವನ್ನು ಪೆÇೀಷಿಸುತ್ತಾ ಬಂದಿರುವ ಜನತೆಯತ್ತ ದೇಶದ 5000 ಸಂಸತ್ ಸದಸ್ಯರು, ವಿಧಾನಸಭಾ ಸದಸ್ಯರು ಮತ್ತು ವಿಧಾನಪರಿಷತ್ ಸದಸ್ಯರು ಮುನ್ನಡೆಯಬೇಕು ಎಂದು ನಾಯ್ಡು ಕರೆ ನೀಡಿದರು. ಕಳೆದ ಎರಡು ಅವೇಶನಗಳಲ್ಲಿ ಸದನದ ಕಲಾಪಗಳಿಗೆ ಆಗಿರುವ ವ್ಯತ್ಯಯ ತೀವ್ರ ಬೇಸರ ಉಂಟು ಮಾಡಿದೆ ಎಂದು ನಾಯ್ಡು ಅವರು ನುಡಿದರು.
ಚಳಿಗಾಲದ ಅವೇಶನದಲ್ಲಿ ರಾಜ್ಯಸಭೆಯಲ್ಲಿ ಆದ ಗದ್ದಲದಿಂದ ಶೇ.52.10ರಷ್ಟು ಅಮೂಲ್ಯ ಕಲಾಪ ವ್ಯರ್ಥವಾಯಿತು. ಕಳೆದ ವರ್ಷದ ಮುಂಗಾರು ಅವೇಶನದಲ್ಲಿ ಸದನದ ಅಮೂಲ್ಯ ಸಮಯದ ನಷ್ಟ ಶೇ.70.40ರಷ್ಟಿತ್ತು ಎಂದು ನಾಯ್ಡು ವಿವರಿಸಿದರು.

Articles You Might Like

Share This Article