ಹೈದ್ರಾಬಾದ್, ಡಿ. 25 – ತೆಲುಗು ಚಿತ್ರರಂಗದ ಖ್ಯಾತ ಖಳನಟ, ಪೋಷಕ ನಟ, ನಿರ್ಮಾಪಕರಾಗಿದ್ದ ಚಲಪತಿ ರಾವ್ (78) ನಿನ್ನೆ ತಡರಾತ್ರಿ ಹೃದಯಾಘಾತದಿಂದ ತಮ್ಮ ನಿವಾಸದಲ್ಲಿ ಬಣ್ಣದ ಲೋಕದ ಪಯಣ ಮುಗಿಸಿದ್ದಾರೆ.
ತೆಲುಗು ಚಿತ್ರರಂಗದ ಹಿರಿಯ ಚೇತನ ಚಲಪತಿ ರಾವ್ ಅವರ ನಿಧನಕ್ಕೆ ಹಿರಿಯ ನಟರಾದ ಮೆಗಾಸ್ಟಾರ್ ಚಿರಂಜೀವಿ, ಅಕ್ಕಿ ನೇನಿ ನಾಗಾರ್ಜುನ್, ನಂದಮೂರಿ ಬಾಲಕೃಷ್ಣ, ವಿಕ್ಟರಿ ವೆಂಕಟೇಶ್, ಸಾಯಿಧರಂ ತೇಜ , ಪವನ್ ಕಲ್ಯಾಣ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಂದಮೂರಿ ಎನ್ಟಿ ರಾಮರಾವ್ ಅವರ ನಟನೆಯಿಂದ ಪ್ರೇರಣೆಗೊಂಡ ಚಲಪತಿ ರಾವ್ 1966ರಲ್ಲಿ ಬಿಡುಗq Éಗೊಂಡ ಗೂಢಚಾರಿ 116' ಚಿತ್ರದಲ್ಲಿ ಖಳನಟನಾಗಿ ಬಣ್ಣದ ಲೋಕಕ್ಕೆ ಬಂದ ಚಲಪತಿ ರಾವ್, 6 ದಶಕಕ್ಕೂ ಹೆಚ್ಚು ಕಾಲ 3 ತಲೆಮಾರಿನ ನಟರುಗಳೊಂದಿಗೆ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕಲಿಯುಗ ಕೃಷ್ಣುಡು’, ಜಗನ್ನಾಟಕಂ',
ಪೆಳ್ಳಂಟೆ ನೂರೆಳ್ಳ ಪಂಟ’, ಡ್ರೈವರ್ ರಾಮುಡು',
ಸಿಂಹಾದ್ರಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಗಮನಾರ್ಹ ಪಾತ್ರದಲ್ಲಿ ನಟಿಸಿದ್ದಾರೆ.
‘ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ’ ಘೋಷಿಸಿ ರಾಜಕೀಯಕ್ಕೆ ರೆಡ್ಡಿ ರೀಎಂಟ್ರಿ
ಸ್ಯಾಂಡಲ್ವುಡ್ನ ವರ ನಟ ಡಾ.ರಾಜ್ಕುಮಾರ್ರೊಂದಿಗೂ ನಟಿಸಿರುವ ಚಲಪತಿ ರಾವ್ ಅವರು ಕಲಿಯುಗ ಕೃಷ್ಣುಡು',
ಪ್ರೆಸಿಡೆಂಟ್ಗಾರಿ ಅಲ್ಲುಡು’, `ರಕ್ತಂ ಚೆಲ್ಲಿದ ರಾತ್ರಿ’ ಸೇರಿದಂತೆ ಹಲವು ಚಿತ್ರಗಳ ನಿರ್ಮಾಣದೊಂದಿಗೆ, ಚದರಂಗಂ ಎಂಬ ವೆಬ್ ಸೀರೀಸ್ನಲ್ಲಿ ನಟಿಸಿದ್ದಾರೆ.
ಬಣ್ಣದ ಲೋಕವಲ್ಲದೆ, ರಾಜಕೀಯ ರಂಗದಲ್ಲೂ ಗುರುತಿಸಿಕೊಂಡಿದ್ದ ಚಲಪತಿ ರಾವ್, ಟಿಡಿಪಿ ಪಕ್ಷದಿಂದ ಚುನಾವಣೆಯಲ್ಲಿ ಸ್ರ್ಪಧಿಸಿ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು. ಚಲಪತಿ ರಾವ್ ಅವರ ಅಂತಿಮ ಸಂಸ್ಕಾರವನ್ನು ಪುತ್ರ ಹಾಗೂ ನಟ, ನಿರ್ದೇಶಕ ರವಿಬಾಬು ಇಂದು ಸಂಜೆ ಫಿಲ್ಮ್ ನಗರದಲ್ಲಿ ನೆರವೇರಿಸಲಿದ್ದಾರೆ.
Veteran actor, Chalapathi Rao, passes away,