ತೆಲುಗು ಸೂಪರ್ ಸ್ಟಾರ್ ಕೃಷ್ಣ ಇನ್ನಿಲ್ಲ..!

Social Share

ಹೈದರಾಬಾದ್, ನ.15 – ತೆಲುಗು ಚಿತ್ರರಂಗದ ಹಿರಿಯ ನಟ ಕೃಷ್ಣ (80) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ ಹೃದಯಾಘಾತದಿಂದಾಗಿ ನಗರದ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮುಂಜಾನೆ 4 ಗಂಟೆಗೆ ನಟ ಇಹಲೋಕ ತ್ಯಜಿಸಿದ್ದಾರೆ

ಸೂಪರ್‍ ಸ್ಟಾರ್ ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರು 1960 ರ ದಶಕದ ಆರಂಭದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಈವರೆಗೆ ಸುಮಾರು 350 ಚಲನಚಿತ್ರಗಳಲ್ಲಿ ನಟಿಸಿ ಜನಮನಗೆದ್ದಿದ್ದರು
ಅವರ ಮೂಲ ಹೆಸರು ಘಟ್ಟಮನೇನಿ ಶಿವರಾಮ ಕೃಷ್ಣ, ಪೌರಾಣಿಕ ಪತ್ರಗಳಲ್ಲಿ ಮಿಂಚಿದ್ದ ಅವರು ಸಾಮಾಜಿಕ -ಕಮರ್ಷಿಯಲ್ ಚಿತ್ರದಲ್ಲೂ ಅದ್ಬುತ ನಟನೆ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದರು.

ಶನಿ ಸಂತಾನದಂತೆ ಬಿಜೆಪಿ ಆಡಳಿತ : ವೀರಪ್ಪ ಮೊಯ್ಲಿ ಟೀಕೆ

ಕೊರೊನಾದಿಂದ ಹಿಂದೆ ದೀರ್ಘ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು ಆದರೆ ಇತ್ತೀಚೆಗೆ ಅಸ್ವಸ್ಥಗೊಂಡಿದ್ದರು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಉಸಿರಾಟದ ದೊಂದರೆ ಯಿಂದಾಗಿ ವೆಂಟಿಲೇಟರ್‍ನಲ್ಲಿ ಇರಿಸಲಾಗಿತ್ತು.

ಕೆಎಸ್‌ಆರ್‌ಟಿಸಿ ನೌಕರರಿಗೆ ಒಂದು ಕೋಟಿ ಅಪಘಾತ ವಿಮೆ

ವೈದ್ಯರ ತಂಡವು ಸತತ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕೃಷ್ಣ ಎಂದೇ ಜನಪ್ರಿಯವಾಗಿದ್ದ ಇವರಿಗೆ ಅನೇಕ ಪ್ರಶಸ್ತಿಗಳು ಕೂಡ ಹರಿದುಬಂದಿದ್ದು , ನಿಧನದ ಸುದ್ದಿ ತಿಳಿಯುತಿದ್ದಂತೆ ಆಂಧ್ರದಲ್ಲಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಭರತೀಯ ಚಿತ್ರರಂಗದ ಅನೇಕರು ಅಗಲಿದ ಹಿರಿಯ ಕಲಾವಿದನಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

Articles You Might Like

Share This Article