ದೇಶದ 36ನೇ ಶ್ರೀಮಂತ ರಾಕೇಶ್ ಜುಂಜುನ್ವಾಲಾ ನಿಧನ

Social Share

ಮುಂಬೈ,ಆ.14- ಷೇರುಪೇಟೆ ಹೂಡಿಕೆದಾರ, ಆಕಾಸಾ ವಿಮಾನಯಾನ ಸಂಸ್ಥಾಪಕ ಹಾಗೂ ರಾಕೇಶ್ ಜುಂಜುನ್ವಾಲಾ (62) ಮುಂಬೈನಲ್ಲಿಂದು ನಿಧನರಾಗಿದ್ದಾರೆ.ತಮ್ಮ ಸಂಸ್ಥೆಯಾದ ರೇರ್ ಎಂಟರ್ಪ್ರೈಸಸ್ ಮೂಲಕ ವಿಶ್ವದ ಹಲವು ಷೇರುಪೇಟೆ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿಯೂ ಹೂಡಿಕೆ ಮಾಡಿದ್ದ ಜುಂಜುನ್ವಾಲಾ ಅವರನ್ನು ಭಾರತದ ವಾರೆನ್ ಬಫೆಟ್ ಎಂದೇ ಕರೆಯಲಾಗುತ್ತಿತ್ತು.

ಸ್ಟಾರ್ ಹೆಲ್ತ್, ಟೈಟಾನ್, ರಾಲಿಸ್ ಇಂಡಿಯಾ, ಎಸ್ಕಾಟ್ರ್ಸ್, ಕೆನರಾ ಬ್ಯಾಂಕ್, ಇಂಡಿಯನ್ ಹೋಟೆಲ್ಸ್ ಕಂಪನಿ, ಆಗ್ರೋ ಟೆಕ್ ಫುಡ್ಸ್, ನಜÁರಾ ಟೆಕ್ನಾಲಜೀಸ್, ಟಾಟಾ ಮೋಟಾರ್ಸ್ ಸೇರಿದಂತೆ 47 ಕಂಪನಿಗಳಲ್ಲಿ ಇವರು ಪಾಲುದಾರಿಕೆ ಹೊಂದಿದ್ದಾರೆ.

ಫೆÇೀಬ್ರ್ಸ್ ಪಟ್ಟಿಯ ಪ್ರಕಾರ ಇವರು 2021ರಲ್ಲಿ ಭಾರತದ 36ನೇ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ 438ನೇ ಶ್ರೀಮಂತ ವ್ಯಕ್ತಿಯಾಗಿದ್ದರು.ರಾಕೇಶ್ ಜುಂಜುನ್ವಾಲಾ ಅವರ ಆಕಾಸಾ ಏರ್ಲೈನ್ಸ್ ಆಗಸ್ಟ್ 7 ರಂದು ಚಾಲನೆ ಕಂಡಿತ್ತು. ಜುಂಜುನ್ವಾಲಾ ಅವರು ಅನೇಕ ಕಂಪನಿಗಳು ಮತ್ತು ಸ್ಟಾರ್ಟ್ ಅಪ್ಗಳಲ್ಲಿ ಹೂಡಿಕೆ ಮಾಡಿದ್ದರು. ಆಗಸ್ಟ್ 2022 ರ ಹೊತ್ತಿಗೆ ಅವರ ನಿವ್ವಳ ಮೌಲ್ಯವು 5.8 ಬಿಲಿಯನ್ ಡಾಲರ್ ಆಗಿತ್ತು ಎಂದು ಹೇಳಲಾಗಿದೆ.

ಪ್ರಧಾನಿ ಸಂತಾಪ: ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ರಾಕೇಶ್ ಜುಂಜುನ್ವಾಲಾ ಅದಮ್ಯ ಚೇತನ. ಹಾಸ್ಯ ಮತ್ತು ಒಳನೋಟವುಳ್ಳ ಅವರು ಭಾರತದ ಆರ್ಥಿಕ ಜಗತ್ತಿಗೆ ಅಳಿಸಲಾಗದ ಕೊಡುಗೆ ನೀಡಿ ಹೋಗಿದ್ದಾರೆ ಎಂದು ಸ್ಮರಿಸಿದ್ದಾರೆ.

ದೇಶದ ಆರ್ಥಿಕ ಪ್ರಗತಿಯ ಬಗ್ಗೆ ಜುಂಜುನ್ವಾಲಾ ಅವರು ದೂರಗಾಮಿ ಯೋಜನೆ ಹೊಂದಿದ್ದರು. ಇಂದು ಅವರ ಅಗಲಿಕೆ ದುಃಖ ತಂದಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಮೋದಿ ತಿಳಿಸಿದ್ದಾರೆ.

Articles You Might Like

Share This Article