ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ನಿಧನ

Social Share

ಬೆಂಗಳೂರು,ಫೆ.4- ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ವಾಣಿ ಜಯರಾಂ(78) ಇಂದು ಚೆನ್ನೈನ ನುಂಗಂಬಾಕ್ಕಂನಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇತ್ತೀಚೆಗಷ್ಟೇ ಭಾರತ ಸರ್ಕಾರ ವಾಣಿ ಜಯರಾಂ ಅವರಿಗೆ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ. ಶಾಸ್ತ್ರೀಯ ಸಂಗೀತಗಾರರ ಕುಟುಂಬದಿಂದ ಬಂದ ವಾಣಿ ಜೈರಾಂ ದುರೈಸಾಮಿ ಅಯ್ಯಂಗಾರ್ ಮತ್ತು ಪದ್ಮಾವತಿ ದಂಪತಿಗೆ ಜನಿಸಿದರು.

2021ರಲ್ಲಿ ಹಿನ್ನಲೆ ಗಾಯಕಿಯಾಗಿ ಜೈರಾಮ್ 50 ವರ್ಷಗಳನ್ನು ಪೂರೈಸಿದ್ದಾರೆ. 1971ರಲ್ಲಿ ತೆರೆ ಕಂಡ ಗುಡ್ಡಿ ಎಂಬ ಹಿಂದಿ ಚಲನಚಿತ್ರ ನಿಂದ ಬೋಲೆ ರೆ ಪಾಪಿ ಹರಾ ಗೀತೆ ಹಾಡುವ ಮೂಲಕ ಹಿನ್ನಲೆ ಗಾಯಕಿಯಾಗಿ ವೃತ್ತಿ ರಂಗಕ್ಕೆ ಪಾದಾರ್ಪಣೆ ಮಾಡಿದರು.

ಅದಾನಿ ಹಗರಣದ ತನಿಖೆಗೆ ಕಾಂಗ್ರೆಸ್ ಆಗ್ರಹ

ಈ ಗೀತೆ ವಾಣಿ ಜೈರಾಮ್ ಅವರಿಗೆ ದೊಡ್ಡ ಬ್ರೇಕ್ ನೀಡಿತ್ತು. ತಮ್ಮ ಗಾಯನ ಜೀವನದಲ್ಲಿ 19 ಭಾಷೆಗಳಲ್ಲಿ ಹಾಡಿರುವ ಅವರು 10,000ಕ್ಕೂ ಹೆಚ್ಚು ಹಾಡುಗಳನ್ನು ನೀಡಿದ್ದಾರೆ. ಅವರ ಕಂಠಸಿರಿಗೆ ಹಲವಾರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನು ಸಂದಿವೆ.

ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ, ಉರ್ದು, ಮರಾಠಿ, ಬೆಂಗಾಲಿ, ಭೋಜ್‍ಪುರಿ, ತುಳು ಮತ್ತು ಒರಿಯಾ ಭಾಷೆಗಳಲ್ಲಿ ಹಲವಾರು ಹಾಡುಗಳನ್ನು ಹಾಡಿದ್ದಾರೆ. ದೇಶ ಮತ್ತು ಪ್ರಪಂಚದಾದ್ಯಂತ ವ್ಯಾಪಕವಾಗಿ ಗಾಯನ ಪ್ರದರ್ಶನ ನೀಡಿದ್ದಾರೆ.

ಕೆಜಿಎಫ್ ಬಾಬು ಮನೆಗೆ ಪೆಟ್ರೋಲ್ ಸುರಿದು ಬೆಂಕಿ

ಎಂಎಸ್ ಇಳಯರಾಜ, ಆರ್‍ಡಿ ಬರ್ಮನ್, ಕೆವಿ ಮಹದೇವನ್, ಒಪಿ ನಯ್ಯರ್ ಮತ್ತು ಮದನ್ ಮೋಹನ್, ಚಕ್ರವರ್ತಿ, ಸತ್ಯಂ ಸೇರಿದಂತೆ ಅನೇಕ ಸುಪ್ರಸಿದ್ಧ ಸಂಯೋಜಕರೊಂದಿಗೆ ಕೆಲಸ ಮಾಡಿರುವ ಹೆಗ್ಗಳಿಕೆ ಇವರದು.
ಇತ್ತೀಚೆಗಷ್ಟೇ ಪದ್ಮಭೂಷಣ ಪ್ರಶಸ್ತಿ ಪಡೆದ ಅವರು, ಈ ಗೌರವ ನೀಡಲು ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ತುಂಬಾ ಕೃತಜ್ಞಳಾಗಿದ್ದೇನೆ.

ಕಳೆದ 52 ವರ್ಷಗಳಿಂದ, ನನ್ನ ಅಭಿಮಾನಿಗಳು ನನ್ನ ಹಾಡುಗಳನ್ನು ಕೇಳುತ್ತಿದ್ದಾರೆ ಮತ್ತು ನನ್ನನ್ನು ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಈ ನಿರಂತರ ಬೆಂಬಲಕ್ಕಾಗಿ ನಾನು ಅವರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದರು.

Veteran, singer, Vani Jayaram, passes away,

Articles You Might Like

Share This Article