ಬಣ್ಣದ ಲೋಕದ ನಂಟು ಕಳಚಿದ `ಸಾಕ್ಷಾತ್ಕಾರ’ ನಟಿ ಜಮುನಾ

Social Share

ಹೈದ್ರಾಬಾದ್, ಜ. 27- ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಹುಭಾಷಾ ನಟಿ ಜಮುನಾ (86) ಇಂದು ಬಣ್ಣದ ಲೋಕದ ನಂಟು ಕಳಚಿಕೊಂಡು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ತಮ್ಮ ನಿವಾಸದಲ್ಲೇ ಇಂದು ಬೆಳಗ್ಗೆ ನಿಧನರಾದ ಜಮುನಾ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಹೈದ್ರಾಬಾದ್‍ನ ಫಿಲಂ ಚೇಂಬರ್‍ನಲ್ಲಿ ವ್ಯವಸ್ಥೆ ಮಾಡಲಾಗಿತ್ತು, ಚಿತ್ರರಂಗ, ರಾಜಕೀಯ ಗಣ್ಯರು ಹಾಗೂ ಅಪಾರ ಅಭಿಮಾನಿಗಳು ದರ್ಶನ ಪಡೆದು ಕಂಬನಿ ಮಿಡಿದಿದ್ದಾರೆ. ಮೇರು ನಟಿ ಜಮುನಾ ಅವರ ನಿಧನಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗಮೋಹನ್‍ರೆಡ್ಡಿ, ತೆಲಂಗಾಣದ ಸಿಎಂ ಕೆ.ಸಿ.ಚಂದ್ರಶೇಖರ್, ಎರಡು ರಾಜ್ಯಗಳ ರಾಜ್ಯಪಾಲರು ಕೂಡ ಸಂತಾಪ ಸೂಚಿಸಿದ್ದಾರೆ. ಜಮುನಾ ಅವರು ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಬಾಲ್ಯದಲ್ಲೇ ಕಲಾ ನಂಟು: 1936 ರ ಆಗಸ್ಟ್ 30 ರಂದು ಹಂಪಿಯಲ್ಲಿ ಜನಿಸಿದ ಜಮುನಾ ಅವರು, 1952ರಲ್ಲಿ ತಮ್ಮ 16ನೇ ವಯಸ್ಸಿನಲ್ಲೇಪುಟ್ಟಿಲ್ಲು ‘ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದರು. ಬಾಲ್ಯದಲ್ಲೇ ನಾಟಕ ಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದ ಜಮುನಾ ಅವರು, ತಮ್ಮ ತಾಯಿಯಿಂದ ಸಂಗೀತ ಅಭ್ಯಾಸ ಮಾಡಿದ್ದರು. ಇವರು ನಟಿಸಿದ್ದ ನಾಟಕಗಳಿಂದ ಪ್ರಭಾವಿತರಾದ ನಿರ್ಮಾಪಕ, ನಿರ್ದೇಶಕರು ಅವರನ್ನು ಚಿತ್ರರಂಗಕ್ಕೆ ಕರೆತಂದರು.

ಕಾಶ್ಮೀರ ಪ್ರವೇಶಿಸಿದ ಭಾರತ್ ಜೋಡೊ ಪಾದಯಾತ್ರೆ

ಬಲು ಬೇಡಿಕೆ ನಟಿ:
1985ರಲ್ಲಿ ತೆಲುಗು ಚಿತ್ರರಂಗದ ಬಲು ಬೇಡಿಕೆಯ ನಟಿಯಾಗಿದ್ದ ಜಮುನಾ, ಭೂಕೈಲಾಸ',ಗುಂಡಮ್ಮನ ಕಥಾ’, ಚಿರಂಜೀವಿಲು',ಮೂಗ ಮನಸುಲು’, ರಾಮುಡು ಭೀಮುಡು' ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಗಮನ ಸೆಳೆದಿದ್ದರು. ಶ್ರೀಕೃಷ್ಣ ತುಲಾ ಭಾರಂ’ ಚಿತ್ರದಲ್ಲಿನ ಸತ್ಯಭಾಮಾ, ಸಂಪೂರ್ಣ ರಾಮಾ ಯಣ' ಸಿನಿಮಾದಲ್ಲಿನ ಕೈಕೇಯಿ ಪಾತ್ರಗಳಿಂದ ಪ್ರಭಾವ ಬೀರಿದ್ದರು.

ಬಾಲಿವುಡ್‍ನಲ್ಲೂ ಮಿಂಚು: ಸುನೀಲ್‍ದತ್ ಅಭಿನಯದಮಿಲನ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಜಮುನಾ, ಈ ಚಿತ್ರಕ್ಕಾಗಿ ಫಿಲಂಫೇರ್ ಪ್ರಶಸ್ತಿಗೆ ಭಾಜನರಾಗಿದ್ದರು.

ಸಾಕ್ಷಾತ್ಕಾರದ ನಟಿ: ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲಿ ತಮ್ಮ ಅಭಿನಯದ ಗಂಧ ಚೆಲ್ಲಿದ್ದ ಜಮುನಾ ಅವರು ಸ್ಯಾಂಡಲ್‍ವುಡ್‍ನಲ್ಲೂ ತಮ್ಮ ಅಭಿನಯದ ಕಂಪನ್ನು ಚೆಲ್ಲಿದ್ದರು. ನಟ ಸಾರ್ವಭೌಮ ಡಾ.ರಾಜ್‍ಕುಮಾರ್ ಹಾಗೂ ಬಾಲಿವುಡ್‍ನ ಮೇರು ನಟ ಪೃಥ್ವಿರಾಜ್ ಕಪೂರ್ ನಟಿಸಿದ್ದ ಸಾಕ್ಷಾತ್ಕಾರ' ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು.ಆದರ್ಶ ಸತಿ’, ತೆನಾಲಿ ರಾಮಕೃಷ್ಣ',ಭೂ ಕೈಲಾಸ’, ರತ್ನಗಿರಿ ರಹಸ್ಯ', ಪೊಲೀಸ್ ಮತ್ತು ದಾದಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಜಮುನಾ `ಬಹುಬಾಲಿ’ ಚಿತ್ರದಲ್ಲಿ ಅಂತಿಮವಾಗಿ ಬಣ್ಣದ ಹಚ್ಚಿದ್ದರು. ತಮ್ಮ ಕಲಾ ಜೀವನದಲ್ಲಿ ಹಲವು ಸಿನಿಮಾಗಳಲ್ಲಿ ಮರೆಯಲಾಗದ ನಟನೆ ಮಾಡಿದ್ದಾರೆ.

ಹರಸಿ ಬಂದ ಪ್ರಶಸ್ತಿಗಳು:
ತಮ್ಮ ಅಮೋಘ ನಟನೆಗಾಗಿ ಎಂಜಿಆರ್, ಎನ್‍ಟಿಆರ್ ಪ್ರಶಸ್ತಿ ಪುರಸ್ಕøತರಾದ ಜಮುನಾಗೆ ಪದ್ಮಭೂಷಣ ಡಾ.ಬಿ.ಆರ್.ಸರೋಜಿನಿ ದೇವಿ, ಜೀವಮಾನ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಹುಬ್ಬಳ್ಳಿಗೆ ಅಮಿತ್ ಷಾ: ಚುನಾವಣೆ ಕಾರ್ಯತಂತ್ರಕ್ಕೆ ಸರಣಿ ಸಭೆ

ರಾಜಕೀಯ ನಂಟು:
ಬಣ್ಣದ ಲೋಕದೊಂದಿಗೆ ಅವಿನಾ ಭಾವ ನಂಟು ಹೊಂದಿದ್ದ ಮೇರು ನಟಿ ಜಮುನಾ , ರಾಜಕೀಯ ರಂಗದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು. 1980ರಲ್ಲಿ ಆಂಧ್ರಪ್ರದೇಶದ ಕಾಂಗ್ರೆಸ್ ಪಕ್ಷದ ಮಹಿಳಾ ಅಧ್ಯಕ್ಷೆ ಆಗಿದ್ದ ಜಮುನಾ, 1989 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜಮಂಡ್ರಿ ಕ್ಷೇತ್ರದ ಸ್ರ್ಪಧಿಸಿ ಸಂಸದೆಯಾಗಿ ಆಯ್ಕೆಯಾಗಿದ್ದರು.

1990 ರಲ್ಲಿ ಅಟಲ್‍ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಜಮುನಾ, 1991ರಲ್ಲಿ ನಡೆದ ಚುನಾವಣೆಯಲ್ಲಿ ಸೋಲು ಕಂಡ ನಂತರ ರಾಜಕೀಯ ರಂಗದಿಂದ ದೂರ ಉಳಿದರು. ತೆಲುಗು ಕಲಾವಿದರ ಸಂಘವನ್ನು ಸೃಷ್ಟಿಸಿದ ಜಮುನಾ ಅವರು 25 ವರ್ಷಗಳ ಕಾಲ ಈ ಸಂಘದಲ್ಲಿ ಸಕ್ರಿಯರಾಗಿದ್ದರು.

Veteran, Telugu, actor, Jamuna, passes away,

Articles You Might Like

Share This Article