ಚಿಕ್ಕಬಳ್ಳಾಪುರದಲ್ಲಿ ಜ.15ರಂದು ಆದಿಯೋಗಿ ಅನಾವರಣ

Social Share

ಬೆಂಗಳೂರು, ಜ.11- ಮಾನವ ವ್ಯವಸ್ಥೆಯಲ್ಲಿನ ಐದು ಚಕ್ರಗಳ ದ್ಯೋತಕವಾಗಿ ಸದ್ಗುರುಗಳು ಆದಿಯೋಗಿಯ ಬಳಿ ಯೋಗೇಶ್ವರಲಿಂಗವನ್ನು ಪ್ರತಿಷ್ಠಾಪಿಸಲಿದ್ದಾರೆ. ಯೋಗೇಶ್ವರಲಿಂಗದ ಉಪಸ್ಥಿತಿ ಯೊಂದಿಗೆ ಆದಿಯೋಗಿಗೆ ಜೀವಂತ ಕಳೆಬರಲಿದೆ.

ಲಕ್ಷಾಂತರ ಜನರನ್ನುಮಂತ್ರಮುಗ್ಧರನ್ನಾಗಿಸಿರುವ ಯೋಗದ ಮೂಲ ಆದಿಯೋಗಿಯ ಅಪ್ರತಿಮ ಮುಖಪ್ರತಿಮೆಯನ್ನು, ಜ.15ರಂದು ಚಿಕ್ಕಬಳ್ಳಾಪುರದ ಅವಲಗುರ್ಕಿಯಲ್ಲಿ ಸದ್ಗುರು ಸನ್ನಿಯಲ್ಲಿ ಅನಾವರಣಗೊಳ್ಳಲಿದೆ.

ಸುಮಾರು 112 ಅಡಿ ಎತ್ತರದ ಆದಿಯೋಗಿಯ ಮುಖಪ್ರತಿಮೆಯು ಕೊಯಮತ್ತೂರಿನ ಈಶಯೋಗ ಕೇಂದ್ರದ ಪ್ರತಿರೂಪವಾಗಿದೆ. ಸದ್ಗುರು ಸನ್ನಿಯಲ್ಲಿರುವ ಆದಿಯೋಗಿಯನ್ನು ಉಪರಾಷ್ಟ್ರಪತಿ ಜಗದೀಪ್‍ಧನಕರ್ ಅವರು ಅಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಮತ್ತು ಸದ್ಗುರುಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಿದ್ದಾರೆ.

ರಣಜಿ ಟೂರ್ನಿಯಲ್ಲಿ ವೇಗದ ತ್ರಿಶತಕ ಗಳಿಸಿದ ಪೃಥ್ವಿ ಶಾ

ಡಿಸೆಂಬರ್ ಕೊನೆಯ ವಾರದಲ್ಲಿ ಪ್ರಾರಂಭವಾದ 21 ದಿನಗಳ ಆದಿಯೋಗಿ ರಥಯಾತ್ರೆಯು ಪ್ರಸ್ತುತ ಆದಿಯೋಗಿಯ ಅನಾವರಣಕ್ಕೆ ಮುಂಚಿತವಾಗಿ ಚಿಕ್ಕಬಳ್ಳಾಪುರಕ್ಕೆ ಬರಲಿದೆ. ಯಾತ್ರೆಯು ಅವಲಗುರ್ಕಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಎಲ್ಲಾ ಸಮುದಾಯಗಳನ್ನು ಅನಾವರಣಕ್ಕೆ ಆಹ್ವಾನಿಸಲಾಗಿದೆ.

ಆದಿಯೋಗಿ ಅನಾವರಣವು ಕರ್ನಾಟಕದ ಎಲ್ಲಾ ಕೇಬಲ್ ನೆಟ್‍ವರ್ಕ್‍ಗಳಲ್ಲಿ ನೇರಪ್ರಸಾರವಾಗಲಿದೆ. ಇದನ್ನು ಸದ್ಗುರು ಅಪ್ಲಿಕೇಶನ್ ಮತ್ತು ಸದ್ಗುರುಗಳ ಯೂಟ್ಯೂಬï, ಫೇಸ್‍ಬುಕ್ ಮತ್ತು ಇನ್‍ಸ್ಟ್ರಾಗ್ರಾಮ್‍ಗಳಲ್ಲೂ ಲೈವ್ ವೀಕ್ಷಿಸಬಹುದು.

ಜ.31ಕ್ಕೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ

ಅನಾವರಣದ ನಂತರ ಆದಿಯೋಗಿದಿವ್ಯದರ್ಶನಂ, 112 ಅಡಿ ಆದಿಯೋಗಿಯ ಮೇಲೆ 14 ನಿಮಿಷಗಳ
ವಿಶಿಷ್ಟ ಬೆಳಕು ಮತ್ತು ಧ್ವನಿ ಪ್ರದರ್ಶನ ನಡೆಯಲಿದೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಕೊಯಮತ್ತೂರಿನಈಶ ಯೋಗ ಕೇಂದ್ರದಲ್ಲಿ ಯೋಗದ ಮೂಲವಾದ ಆದಿಯೋಗಿಯ 112-ಅಡಿ ಪ್ರತಿಮಾರೂಪದ ಚಿತ್ರವನ್ನುಇನ್ಕ್ರೆಡಿಬಲï ಇಂಡಿಯಾ ತಾಣವೆಂದು ಪಟ್ಟಿಮಾಡಿದೆ.

ಸುಗ್ಗಿಯಹಬ್ಬವಾದ ಮಕರಸಂಕ್ರಾಂತಿಯು ಸದ್ಗುರುಸನ್ನಿಯಲ್ಲಿ ನಡೆಯುವ ಮೊದಲ ಆಚರಣೆಯಾಗಲಿದೆ. ಚಿಕ್ಕಬಳ್ಳಾಪುರದ ಗ್ರಾಮಗಳಿಂದ ಸಾವಿರಾರು ಜನರು ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

Vice President, unveil, 112-feet, Adiyogi statue, Chikkaballapura,

Articles You Might Like

Share This Article