ಮಹಿಳೆಯರ ಮೇಲೆ ಹಿಂಸಾಚಾರ ಹೆಚ್ಳಳ : ಉಪ ರಾಷ್ಟ್ರಪತಿ ಕಳವಳ

Spread the love

ಹೈದರಾಬಾದ್, ಡಿ.7- ಮಹಿಳೆಯರ ಮೇಲೆ ಹೆಚ್ಚುತ್ತಿರುವ ಆಘಾತಕಾರಿ ಹಿಂಸಾಚಾರ ಪ್ರಕರಣಗಳ ಬಗ್ಗೆ ಉಪ ರಾಷ್ಟ್ರಪತಿ ಡಾ.ಎಂ. ವೆಂಕಯ್ಯ ನಾಯ್ಡು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇಂಥ ಪ್ರಕರಣಗಳಲ್ಲಿ ತ್ವರಿತ ನ್ಯಾಯ ಒದಗಿಸುವಂತಾಗಲು ಕಾಲ ಚೌಕಟ್ಟಿನಲ್ಲಿ ವಿಚಾರಣೆ, ತನಿಖೆ ಮತ್ತು ನ್ಯಾಯ ನಿರ್ಣಯ ಕೈಗೊಳ್ಳಬೇಕಾದ ಅಗತ್ಯತೆಯನ್ನು ಉಪ ರಾಷ್ಟ್ರಪತಿ ಪ್ರತಿಪಾದಿಸಿದ್ದಾರೆ.

ಹೈದರಾಬಾದ್‍ನ ಮರಿ ಚೆನ್ನಾ ರೆಡ್ಡಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಲ್ಲಿ ಅಖಿಲ ಭಾರತ ಸೇವೆಗಳು ಮತ್ತು ಕೇಂದ್ರೀಯ ನಾಗರಿಕ ಸೇವೆಗಳ ಅಧಿಕಾರಿಗಳ 94ನೆ ಫೌಂಡೇಷನ್ ಕೋರ್ಸ್‍ನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.  ಹೈದರಾಬಾದ್, ಉನ್ನಾವೋ ಮತ್ತು ದೇಶದ ಇತರ ಕಡೆಗಳಲ್ಲಿ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣಗಳ ಬಗ್ಗೆ ವೆಂಕಯ್ಯ ನಾಯ್ಡು ಆಕ್ರೋಶ ವ್ಯಕ್ತಪಡಿಸಿದರು.

ಹೊಸ ಮಸೂದೆಯೊಂದರನ್ನು ಜಾರಿಗೊಳಿಸುವುದರಿಂದ ಅಥವಾ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡುವುದು ಇದಕ್ಕೆ ಏಕೈಕ ಪರಿಹಾರವಲ್ಲ. ಸಮಾಜದಲ್ಲಿನ ಇಂಥ ಪಿಡುಗುಗಳನ್ನು ನಿರ್ಮೂಲನೆ ಮಾಡಲು ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತಾತ್ಮಕ ಕೌಶಲ್ಯಗಳನ್ನು ಜಾರಿಗೊಳಿಸುವ ಮೂಲಕ ಈಗಿರುವ ಕಟ್ಟುನಿಟ್ಟಿನ ನಿಯಮಗಳನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ತಮಗೆ ಬರುವ ಪ್ರತಿಯೊಂದು ದೂರು ಅಥವಾ ಕುಂದುಕೊರತೆ ಅವಹಾಲುಗಳ ಬಗ್ಗೆ ತ್ವಿರಿತ ಮತ್ತು ಪ್ರಾಮಾಣಿಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಮದು ಅವರು ಪೊಲೀಸ್ ಇಲಾಖೆಗೆ ಸಲಹೆ ಮಾಡಿದರು.

Facebook Comments