ಕ್ರೀಡಾ ಉತ್ತೇಜನಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌರ್ಕಯ ಅಗತ್ಯ : ಉಪರಾಷ್ಟ್ರಪತಿ

Spread the love

ಚಂಢೀಘರ್,ಸೆ.12-ದೇಶದಲ್ಲಿ ಕ್ರೀಡಾ ಸಂಸ್ಕೃತಿಯ ಪುನಶ್ಚೇತನಗೊಳಿಸಲು ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ನವೀಕರಿಸುವ ತುರ್ತು ಅವಶ್ಯಕತೆಯಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.

ಸತತ ಎರಡನೇ ಬಾರಿಗೆ ಅಬುಲ್ ಕಲಾಂ ಆಜಾದ್ ಟ್ರೋಫಿ ಗೆದ್ದ ಚಂಡೀಗ ಪಂಜಾಬ್ ವಿಶ್ವವಿದ್ಯಾಲಯಕ್ಕೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಡಿದ ಅವರು, ಆಟಗಳು, ಯೋಗ ಮತ್ತು ಇನ್ನಾವುದೇ ದೈಹಿಕ ಚಟುವಟಿಕೆಗಳು ಜನರ ಅವಿಭಾಜ್ಯವಾಗಬೇಕು ಉತ್ತಮ ಆರೋಗ್ಯ ಮತ್ತು ಒತ್ತಡ ರಹಿತ ಜೀವನಕ್ಕಾಗಿ ದಿನಚರಿಯಾಗಿರಬೇಕು ಎಂದು ಸಲಹೆ ನೀಡಿದರು.

ಕ್ರೀಡೆ ಅವರು ದೈಹಿಕ ಸಾಮಥ್ರ್ಯಗಳನ್ನು ಸುಧಾರಿಸುವುದಲ್ಲದೆ ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸುತ್ತಾರೆ. ಕ್ರೀಡೆಗಳಲ್ಲಿ ಭಾಗವಹಿಸುವಿಕೆಯು ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ತಂಡದ ಕೆಲಸಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ಹೇಳಿದರು.

ಶಿಕ್ಷಣದೊಂದಿಗೆ ಕ್ರೀಡಾ ಉತ್ಕೃಷ್ಟತೆಯನ್ನು ಸಾಧಿಸಿದ ಪಂಜಾಬ್ ವಿಶ್ವವಿದ್ಯಾಲಯದ ತರಬೇತುದಾರರು, ನಿರ್ವಹಣೆ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಅವರು ಶ್ಲಾಘಿಸಿದರು.

Facebook Comments