ನಟ ವಿಕ್ಕಿ ಕೌಶಲ್ ಚಿತ್ರೀಕರಣದಲ್ಲಿ ನಕಲಿ ನೋಂದಣಿ ಸಂಖ್ಯೆಯ ವಾಹನ ಬಳಕೆ..?

Social Share

ಇಂದೋರ್, ಜ.3- ವಿಕ್ಕಿ ಕೌಶಲ್ ನಟಿಸಿರುವ ಚಲನಚಿತ್ರದಲ್ಲಿ ನಕಲಿ ನೋಂದಣಿ ಸಂಖ್ಯೆ ಇರುವ ಮೋಟಾರ್ ಸೈಕಲ್ ಬಳಕೆ ಮಾಡಲಾಗಿದೆ ಎಂಬ ಆರೋಪ ತನಿಖೆ ನಡೆಸಿದ ಪೊಲೀಸರು, ದೂರಿನಲ್ಲಿ ಸತ್ಯಾಂಶವಿಲ್ಲ ಎಂದು ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.
ನಾಯಕ ವಿಕ್ಕಿ ಕೌಶಲ್ ಮತ್ತು ನಾಯಕಿ ಸಾರಾ ಆಲಿ ಖಾನ್ ನಟಿಸಿರುವ ದೃಶ್ಯದ ಫೋಟೋಗಳು ಮಧ್ಯಪ್ರದೇಶದಾದ್ಯಂತ ವೈರಲ್ ಆಗಿದ್ದವು. ಇಂದೂರ್‍ನಲ್ಲಿ ಫೋಟೋ ಫ್ರೇಮ್ ಅಂಗಡಿ ನಡೆಸುತ್ತಿದ್ದ ಜೈ ಸಿಂಗ್ ಯಾದವ್ ಅವರು ಬಂಗಾಂಗ ಪೊಲೀಸ್ ಠಾಣೆಗೆ ದೂರು ನೀಡಿ, ಚಿತ್ರೀಕರಣದಲ್ಲಿ ಬಳಸಲಾದ ಬೈಕ್‍ನಲ್ಲಿ ಕಾಣಸಿಗುವ ವಾಹನದ ಕೊನೆಯ ನಾಲ್ಕು ನೋಂದಣಿ ಸಂಖ್ಯೆ ತಮ್ಮ ದ್ವಿಚಕ್ರ ವಾಹನದ್ದಾಗಿದೆ.
ಬಹುಶಃ ನೋಂದಣಿ ಸಂಖ್ಯೆ ನಕಲಿಯಾಗಿರುವ ಆತಂಕವಿದೆ. ಮುಂದೆ ಆ ಬೈಕ್ ಎಲ್ಲಿಯಾದರೂ ಅಪಘಾತ ಮಾಡಿದರೆ ತಮಗೆ ತೊಂದರೆಯಾಗಲಿದೆ ಎಂಬ ಆತಂಕ ವ್ಯಕ್ತ ಪಡಿಸಿದ್ದರು.
ದೂರು ದಾಖಲಿಸಿದ್ದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ದೂರುದಾರರ ವಾಹನದ ನೋಂದಣಿ ಸಂಖ್ಯೆ 4872 ಆಗಿದ್ದು, ಚಿತ್ರೀಕರಣದಲ್ಲಿ 1872 ಸಂಖ್ಯೆಯ ವಾಹನವನ್ನು ಬಳಕೆ ಮಾಡಲಾಗಿದೆ. ಆದರೆ ವೈರಲ್ ಆಗಿರುವ ಫೋಟೋದಲ್ಲಿ ನೋಂದಣಿ ಸಂಖ್ಯೆ ಅಸ್ಪಷ್ಟವಾಗಿರುವುದರಿಂದ ಗೊಂದಲವಾಗಿದೆ ಎಂದು ಠಾಣಾಧಿಕಾರಿ ರಾಜೇಂದ್ರ ಸೋನಿ ತಿಳಿಸಿದ್ದಾರೆ.
ಒಂದು ಮತ್ತು ನಾಲ್ಕು ಸಂಖ್ಯೆ ಗೋಚರದಲ್ಲಿ ಒಂದಿಷ್ಟು ಗೊಂದಲಗಳಾಗಿವೆ. ಹಾಗಾಗಿ ದೂರಿನಲ್ಲಿ ಸತ್ಯಾಂಶ ಇಲ್ಲ ಎಂದು ಮನಗಂಡು ಪ್ರಕರಣವನ್ನು ಮುಕ್ತಾಯಗೊಳಿಸಿರುವುದಾಗಿ ತಿಳಿಸಿದ್ದಾರೆ.

Articles You Might Like

Share This Article