ಡಾಕಾ,ಜ.10-ವಿಮಾನದಲ್ಲಿ ಪ್ರಯಾಣಿಕರು ತೋರುವ ಅಶಿಸ್ತಿನ ಪ್ರಕರಣಗಳು ಪ್ರತಿನಿತ್ಯ ಸುದ್ದಿ ಮಾಡುತ್ತಿರುವ ಸಂದರ್ಭದಲ್ಲೇ ಬಾಂಗ್ಲಾ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಬಟ್ಟೆ ಬಿಚ್ಚಿ ಬಡಿದಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಬಾಂಗ್ಲಾ ಸರ್ಕಾರಿ ಒಡೆತನದ ವಿಮಾನದಲ್ಲಿ ನಡೆದಿರುವ ಈ ಘಟನೆಯನ್ನು ಬಿಟಾಂಕೊ ಬಿಸ್ವಾಸ್ ಎನ್ನುವವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಘಟನೆ ನಡೆದಿದ್ದು ಯಾವಾಗ ಎನ್ನುವ ಮಾಹಿತಿ ಮಾತ್ರ ಹೊರಬಿದ್ದಿಲ್ಲ.
Another “Unruly Passenger” 👊
This time on a Biman Bangladesh Boeing 777 flight!🤦♂️ pic.twitter.com/vnpfe0t2pz— BiTANKO BiSWAS (@Bitanko_Biswas) January 7, 2023
ವಿಮಾನದ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ಇನ್ನೊಬ್ಬ ಪ್ರಯಾಣಿಕನೊಂದಿಗೆ ಮೊದಲ ವಾಗ್ವಾದ ನಡೆಸುತ್ತಿರುವುದು ಕಂಡು ಬರುತ್ತದೆ. ನಂತರ ಇಬ್ಬರು ಪ್ರಯಾಣಿಕರು ಪರಸ್ಪರ ಬಡಿದಾಡಿಕೊಂಡಿರುವುದು ವಿಡಿಯೋದಲ್ಲಿ ಗೋಚರಿಸುತ್ತದೆ.
39 ವರ್ಷ ಬಾಹ್ಯಾಕಾಶ ಸಂಶೋಧನೆ ನಡೆಸಿ ಭೂಮಿಗೆ ಹಿಂತಿರುಗಿದ ಉಪಗ್ರಹ
ಆ ಸಂದರ್ಭದಲ್ಲಿ ಸಹ ಪ್ರಯಾಣಿಕರು ಸಮಾಧಾನ ಪಡಿಸಲು ಎಷ್ಟೆ ಪ್ರಯತ್ನ ಪಟ್ಟರೂ ಸಾಧ್ಯವಾಗುವುದಿಲ್ಲ. ಹೀಗಾಗಿ ಎಲ್ಲರೂ ಸೇರಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸುವ ಶರ್ಟ್ ರಹಿತ ಪ್ರಯಾಣಿಕನನ್ನು ಹಿಡಿದುಕೊಳ್ಳುವುದು ಚಿತ್ರದಲ್ಲಿ ಕಾಣಬರುತ್ತದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಶಿಸ್ತು ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ದಕ್ಷಿಣ ಏಷ್ಯಾದಾದ್ಯಂತ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಉತ್ತಮ ಲಕ್ಷಣವಲ್ಲ ಎಂದು ಕೆಲವರು ಅಸಮಾಧಾನ ತೋಡಿಕೊಂಡಿದ್ದಾರೆ.
ಇತ್ತಿಚೆಗೆ ಕೆಳ ಮಧ್ಯಮ ವರ್ಗದವರಿಗೂ ಸಾಗರೋತ್ತರ ಉದ್ಯೋಗಗಳು ಲಭಿಸುತ್ತಿರುವುದು ಇಂತಹ ಅವಘಡಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಕೆಲವರು ಆರೋಪಿಸಿದ್ದರೆ ಇನ್ನು ಕೆಲವರು ವಿದ್ಯಾವಂತರು ಅಥವಾ ಅವಿದ್ಯಾವಂತರು ಗಗನಸಖಿ ಮತ್ತು ಸಹ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ.
ಚಳಿಯಲ್ಲೂ ರಾಹುಲ್ ಟೀ ಶರ್ಟ್ ಧರಿಸೋದೇಕೆ..? ಇದರ ಹಿಂದಿದೆ ಮನಕಲಕುವ ಕಥೆ
ಇದು ವಿಮಾನ ಮತ್ತು ಪ್ರಯಾಣಿಕರಿಗೆ ಅಪಾಯವನ್ನುಂಟು ಮಾಡುತ್ತದೆ. ಇದು ಮಾರಣಾಂತಿಕ ಅಪಘಾತಕ್ಕೆ ಕಾರಣವಾಗಬಹುದು. ಹೀಗಾಗಿ ವಿಮಾನ ಪ್ರಯಾಣಕ್ಕೆ ಕಟ್ಟುನಿಟ್ಟಾದ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Shirtless, Man, Fighting, CoPassenger, Mid-Air On Biman, Bangladesh, Flight,