ಪಿಜಿಯಲ್ಲಿದ್ದ ಹುಡುಗಿಯರ ಅರೆನಗ್ನ ವಿಡಿಯೋ ಮಾಡುತ್ತಿದ್ದವನ ಬಂಧನ

Social Share

ಬೆಂಗಳೂರು, ಡಿ. 8- ಯುವತಿಯರ ನಗ್ನ, ಅರೆನಗ್ನ ವಿಡಿಯೋಗಳು ಮಾಡಿ ಮಂಚಕ್ಕೆ ಕರೆಯುತ್ತಿದ್ದ ಆರ್ಕಿಟೆಕ್ಚರ್ ಒಬ್ಬನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಇ ಪದವಿ ಪಡೆದು ಉತ್ತಮ ಉದ್ಯೋಗದಲ್ಲಿದ್ದರೂ ತನ್ನ ಚಂಚಲ ಮನಸ್ಸಿನಿಂದ ಯುವತಿಯರ ಅರೆನಗ್ನ ವಿಡಿಯೋ ಚಿತ್ರೀಕರಿಸುತ್ತಿದ್ದ ಪಾಂಡಿಚೇರಿ ಮೂಲದ ನಿರಂಜನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ. ಬಿಇ ಆರ್ಕಿಟೆಕ್ಚರ್ ವ್ಯಾಸಂಗ ಮಾಡಿದ್ದು ಆಗ್ನೇಯ ವಿಭಾಗದ ಪಿಜಿಯೊಂದರಲ್ಲಿ ನೆಲೆಸಿದ್ದನು.

ಆರ್ಕಿಟೆಕ್ಚರ್ ಕೆಲಸ ಮಾಡಿಕೊಂಡಿದ್ದ ಆರೋಪಿಯು ನನ್ನ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳದೇ ಕೆಟ್ಟ ಆಲೋಚನೆಗಳಿಂದ ತನ್ನ ಪಿಜಿ ಪಕ್ಕದಲ್ಲೇ ಇದ್ದ ಹೆಣ್ಣು ಮಕ್ಕಳ ಬ್ಲಾಕ್‍ನ ಕಟ್ಟಡಕ್ಕೆ ಹಾರಿ ಯುವತಿಯರು ಸ್ನಾನ ಮಾಡುವ ಹಾಗೂ ಬಟ್ಟೆ ಬದಲಾಯಿಸುವಾಗ ನಗ್ನ ಹಾಗೂ ಅರೆನಗ್ನ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದನು.

ಉಪಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳ ಮೇಲುಗೈ

ತದನಂತರದಲ್ಲಿ ಆ ಯುವತಿಯರನ್ನು ಮಾತನಾಡಿಸುವಂತೆ ಕರೆದು ತನ್ನೊಂದಿಗೆ ಸಹಕರಿಸುವಂತೆ ಪೀಡಿಸುತ್ತಿದ್ದನು. ಆತನ ಮಾತನ್ನು ನಿರಾಕರಿಸಿದಾಗ ಮೊಬೈಲ್‍ನಲ್ಲಿ ತೆಗೆದಿದ್ದ ವಿಡಿಯೋ ತೋರಿಸಿ ಬ್ಲಾಕ್‍ಮೇಲ್ ಮಾಡುತ್ತಿದ್ದನು.

ಕಾಂಗ್ರೆಸ್ ಸೋಲಿಸಲು ಆಮ್‍ಆದ್ಮಿ ಪಕ್ಷಕ್ಕೆ ಬಿಜೆಪಿ ಫಂಡಿಂಗ್ ಮಾಡಿದೆ : ಸಿದ್ದರಾಮಯ್ಯ

ಈ ಬಗ್ಗೆ ಯುವತಿಯೊಬ್ಬರು ಆಗ್ನೇಯ ವಿಭಾಗದ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆ ಯುವತಿಯ ಮೂಲಕವೇ ಆರೋಪಿಯನ್ನು ಕರೆಸಿಕೊಳ್ಳುವಂತೆ ಟ್ರ್ಯಾಪ್ ಮಾಡಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಮೊಬೈಲ್‍ನಲ್ಲಿ ಸುಮಾರು 20ಕ್ಕೂ ಹೆಚ್ಚು ನಗ್ನ, ಅರೆನಗ್ನ ವಿಡಿಯೋಗಳು ಇವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

videos, Blackmail, man, arrested,

Articles You Might Like

Share This Article