ವಿಧಾನಸೌಧದ ಬಳಿ ಸಿಕ್ಕ ಹಣ ಸಾಲ ತೀರಿಸಲು ತಂದಿದ್ದು

Social Share

ಬೆಂಗಳೂರು,ಫೆ.19- ವಿಧಾನಸೌಧದ ದ್ವಾರದ ಬಳಿ ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಜಗದೀಶ್ ಅವರ ಬಳಿ ಪತ್ತೆಯಾಗಿದ್ದ 10.5 ಲಕ್ಷ ಹಣ ಸಾಲ ತೀರಿಸಲು ತಂದಿದ್ದು ಎಂದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ.

ಚೆಕ್‍ಬೌನ್ಸ್ ಪ್ರಕರಣವೊಂದರಲ್ಲಿ ಸಿಲುಕಿದ್ದ ಜಗದೀಶ್ ಅವರು ಇದರಿಂದ ಪಾರಾಗುವ ಸಲುವಾಗಿ ಗುತ್ತಿಗೆದಾರರಿಂದ 5 ಲಕ್ಷ ರೂ., ತಮ್ಮ ಸಹೋದ್ಯೋಗಿಯಿಂದ 3.50 ಲಕ್ಷ ಹಾಗೂ ಮತ್ತೊಬ್ಬರಿಂದ 1.50 ಲಕ್ಷ ಸಾಲ ಪಡೆದಿದ್ದರು.

ಛತ್ರಪತಿ ಶಿವಾಜಿ ಕೋಟೆಗೆ ಜನರ ಭೇಟಿಗೆ ಅಡ್ಡಿ ಆರೋಪ

ಕಳೆದ ಜನವರಿ 4ರಂದು ಸಂಜೆ 7 ಗಂಟೆಗೆ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಜಗದೀಶ್ ಅವರು ಕಾರಿನಲ್ಲಿ ತೆರಳುವಾಗ ತಡೆದಿದ್ದ ಪೊಲೀಸರು ಪರಿಶೀಲನೆ ನಡೆಸಿದಾಗ ಬ್ಯಾಗ್‍ನಲ್ಲಿ 10.5 ಲಕ್ಷ ಪತ್ತೆಯಾಗಿದ್ದು, ಇದು ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರವೇ ನಡೆದಿತ್ತು.

ಈ ಬಗ್ಗೆ ತನಿಖೆ ಕೈಗೊಂಡಿದ್ದ ವಿಧಾನಸೌಧ ಪೊಲೀಸರು, ಜಗದೀಶ್ ಅವರನ್ನು ವಿಚಾರಣೆ ನಡೆಸಿದಾಗ ಅವರು ನೀಡಿದ ಮಾಹಿತಿ ಮೇರೆಗೆ ಹಣ ನೀಡಿದವರ ಬಳಿಯೂ ಮಾಹಿತಿ ಕಲೆ ಹಾಕಿ ಮತ್ತು ಬ್ಯಾಂಕ್‍ಗಳಲ್ಲೂ ಚೆಕ್‍ಬೌನ್ಸ್ ಪ್ರಕರಣದ ಕುರಿತು ಮಾಹಿತಿ ಪಡೆದು ಅಂತಿಮವಾಗಿ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.

IAS vs IPS : ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಗಂಭೀರ ಆರೋಪ

ಇದು ಲಂಚದ ಹಣವಲ್ಲ ಎಂಬುದನ್ನು ಪೊಲೀಸ್ ತನಿಖೆಯಿಂದ ದೃಢಪಟ್ಟಿರುವುದರಿಂದ ಹೊಸ ಸಂಚಲನ ಸೃಷ್ಟಿಸಿದೆ.

Vidhana Soudha, Engineer, Jagdish, loan money,

Articles You Might Like

Share This Article