ಬೆಂಗಳೂರು,ಫೆ.13- ಸಚಿವರ ಗೈರು ಹಾಜರಿಯಿಂದ ವಿಧಾನ ಪರಿಷತ್ನಲ್ಲಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದ ಪ್ರಸಂಗ ನಡೆಯಿತು. ಇಂದು ಬೆಳಗ್ಗೆ ಕಲಾಪದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸಚಿವರಾದ ಸಿ.ಸಿ.ಪಾಟೀಲ್, ಗೋವಿಂದ ಕಾರಜೋಳ್, ಡಾ.ಸುಧಾಕರ್, ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಆನಂದ್ ಸಿಂಗ್ ಗೈರು ಹಾಜರಿಗೆ ಅನುಮತಿ ಕೇಳಿದ್ದಾರೆ ಎಂದರು.
ಸಿ.ಸಿ.ಪಾಟೀಲ್ ಜಾತ್ರೆಯೊಂ ದರಲ್ಲಿ ಭಾಗವಹಿಸಲು, ಆನಂದ್ ಸಿಂಗ್ ಅನಾರೋಗ್ಯದಿಂದ, ಡಾ.ಸುಧಾಕರ್ ಏರ್ಶೋದಲ್ಲಿ ಪ್ರಧಾನಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಗೈರು ಹಾಜರಿ ಅನುಮತಿ ಕೇಳಿದ್ದಾರೆ ಎಂದು ಸಭಾಪತಿ ಸ್ಪಷ್ಟಪಡಿಸಿದರು.
ಮುಂದುವರೆದ ಕಲಾಪದಲ್ಲಿ ಪ್ರಶ್ನೋತ್ತರ ಬಂದಾಗ ಜೆಡಿಎಸ್ ಸದಸ್ಯ ಎಸ್.ಎಲ್.ಬೋಜೆಗೌಡ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಕೇಳಿದರು.ಆಗ ಅವರ ಗೈರು ಹಾಜರಿ ಮತ್ತೆ ಪ್ರಸ್ತಾಪವಾಯಿತು. ಇಂದು ಬೆಳಗ್ಗೆ ವಿಮಾನಗಳು ರದ್ದುಗೊಂಡಿದ್ದರಿಂದ ಸಚಿವರು ರಸ್ತೆ ಮಾರ್ಗವಾಗಿ ಪ್ರಯಾಣಿಸುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಬರುವುದಾಗಿ ತಿಳಿಸಿದ್ದಾರೆ ಎಂದು ಸಭಾಪತಿ ವಿವರಿಸಿದರು.
ಆಕ್ಷೇಪ ವ್ಯಕ್ತ ಪಡಿಸಿದ ಬೋಜೆಗೌಡರು, ಇಂದು ಏರ್ ಶೋ ಇದೆ, ವಿಮಾನ ಹಾರಾಟ ಇರುವುದಿಲ್ಲ ಎಂದು ಸಚಿವರಿಗೆ ಗೋತ್ತಿರಲಿಲ್ಲವೇ. ಅವೇಶನ ಮುಖ್ಯ ಎಂಬುದು ಗಂಭೀರವಾಗಿದ್ದರೆ ನಿನ್ನೆ ರಾತ್ರಿಯೇ ಹೊರಟು ಬರಬೇಕಿತ್ತು. ನಮಗೂ ಸಮಸ್ಯೆ ಇತ್ತು. ನಾವೇಲ್ಲಾ ದೂರದ ಊರಿನಿಂದ ಬಂದಿಲ್ಲವೇ ಎಂದು ಪ್ರಶ್ನಿಸಿದರು. ಮತ್ತೊಂದು ಕಲಾಪದಲ್ಲಿ ಸಭಾನಾಯಕರ ಕೋಟಾ ಶ್ರೀನಿವಾಸ ಪೂಜಾರಿ ಗೈರು ಹಾಜರಿಯಲ್ಲಿ ಸಚಿವ ಅಶ್ವಥನಾರಾಯಣ ಸದಸ್ಯರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ ಎಂದು ಮುಖ್ಯಸಚೇತಕ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಉತ್ತರವು ಸಿದ್ದವಿದೆ, ಸಚಿವರು ತಯಾರಿದ್ದಾರೆ ಎಂದು ನಾರಾಯುಣಸ್ವಾಮಿ ಹೇಳಿದಾಗ, ಈ ಮಾಹಿತಿಯನ್ನು ನಮ್ಮ ಗಮನಕ್ಕೆ ತರುವುದು ಪದ್ಧತಿಯಲ್ಲವೇ. ನಿಮ್ಮಷ್ಟೆಕ್ಕೆ ನೀವೆ ನಿರ್ಧಾರ ತೆಗೆದುಕೊಂಡರೆ ಹೇಗೆ ಎಂದು ಬಸವರಾಜ ಹೊರಟ್ಟಿ ಅಸಮಧಾನ ವ್ಯಕ್ತಪಡಿಸಿದರು.
ನಂತರ ಗಮನ ಸೆಳೆಯುವ ಸೂಚನೆ ಕಲಾಪದ ವೇಳೆಗೆ ಸಚಿವರಾದ ಅಶ್ವಥನಾರಾಯಣ, ಸುನೀಲ್ ಕುಮಾರ್, ಗೋಪಾ ಲಯ್ಯ ಮಾತ್ರ ಉಪಸ್ಥಿತರಿದ್ದರು. ಮತ್ತೆ ಸಚಿವರ ಗೈರು ಹಾಜರು ಚರ್ಚೆಗೆ ಒಳಗಾಯಿತು.
ವಿಪಕ್ಷ ನಾಯಕ ಹರಿಪ್ರಸಾದ್, ಸಚಿರ ಗೈರು ಹಾಜರಿ ಹೆಚ್ಚಿದೆ. ಸದ್ಯಕ್ಕೆ ಕಲಾಪವನ್ನು ಮುಂದೂಡಿಕೆ ಮಾಡಿ. ಮಧ್ಯಾಹ್ನ ಬೋಜನ ವಿರಾಮದ ಬಳಿಕ ಚರ್ಚೆಗೆ ಅವಕಾಶ ನೀಡಿ ಎಂದು ಸಲಹೆ ನೀಡಿದರು.
#Vidhanaparishad, #Members, #Skip, #Session,