ಪರಿಷತ್ ಚುನಾವಣೆ : ಏಳು ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ
ಬೆಂಗಳೂರು,ಮೇ 25- ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆಗೆ ಸಲ್ಲಿಸಲಾಗಿದ್ದ ಏಳು ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿದ್ದು, ಸ್ವೀಕೃತಗೊಂಡಿವೆ. ಹೀಗಾಗಿ ಮೂರು ಪಕ್ಷಗಳ ಏಳು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದಂತಾಗಿದೆ.
ನಾಮಪತ್ರ ವಾಪಸ್ ಪಡೆಯಲು ಮೇ 27ರ ಮಧ್ಯಾಹ್ನ 3 ಗಂಟೆವರೆಗೂ ಅಕಾಶವಿದ್ದು, ಆನಂತರ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಅಕೃತವಾಗಿ ಪ್ರಕಟಿಸಲಾಗುತ್ತದೆ. ವಿಧಾನಸಭಾ ಕಾರ್ಯದರ್ಶಿ( ಪ್ರಭಾರ) ಹಾಗೂ ರಾಜ್ಯಸಭೆ ಚುನಾವಣಾಕಾರಿ ವಿಶಾಲಾಕ್ಷಿ ಅವರು ನಾಮಪತ್ರಗಳ ಪರಿಶೀಲನೆನಡೆಸಿದ್ದು, ಎಲ್ಲಾ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ.
ಆಡಳಿತಾರೂಢ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವ, ಛಲವಾದಿ ನಾರಾಯಣಸ್ವಾಮಿ, ಕೇಶವಪ್ರಸಾದ್, ಹೇಮಲತಾ ನಾಯ್ಕ್, ಕಾಂಗ್ರೆಸ್ ಅಭ್ಯರ್ಥಿಗಳಾದ ಅಬ್ದುಲ್ ಜಬ್ಬರ್, ನಾಗರಾಜ್ ಯಾದವ್ ಹಾಗೂ ಜೆಡಿಎಸ್ ಅಭ್ಯರ್ಥಿ ಟಿ.ಎ.ಶರವಣ ಅವರ ನಾಮಪತ್ರಗಳು ಕ್ರಮಬದ್ದವಾಗಿದ್ದು, ಸ್ವೀಕೃತಗೊಂಡಿವೆ. ಅಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ.