ಸರ್ಕಾರಿ ಅಧಿಕಾರಿ ಬಳಿ ಕ್ರಿಪ್ಟೋ ಕರೆನ್ಸಿ ಪತ್ತೆ

Social Share

ಭುವನೇಶ್ವರ್, ಅ.29- ಒಡಿಸ್ಸಾ ಸರ್ಕಾರದ ಅಧಿಕಾರಿಯ ಬಳಿ 1.75 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋ ಕರೆನ್ಸಿಗಳು ಪತ್ತೆಯಾಗಿದ್ದು, ಕೋಟ್ಯಂತರ ಅಕ್ರಮ ಆಸ್ತಿಯ ದಾಖಲೆಗಳು ಸಿಕ್ಕಿವೆ.

ಸೋಮವಾರ ನಿವೃತ್ತರಾಗಬೇಕಿದ್ದ ಹೆಚ್ಚುವರಿ ಮುಖ್ಯ ಅಭಿಯಂತರರ ಮನೆ ಹಾಗೂ ಕಚೇರಿಯ ಮೇಲೆ ಜಾಗೃತದಳದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ಶೋಧ ಕಾರ್ಯಾಚರಣೆ ಶನಿವಾರದವರೆಗೂ ಮುಂದುವರೆದಿದೆ.

ಭ್ರಷ್ಟಚಾರದ ಆರೋಪಕ್ಕೆ ಸಂಬಂಧ ಪಟ್ಟಂತೆ ದಾಳಿ ನಡೆದಿತ್ತು. ಈ ವೇಳೆ ಅಧಿಕಾರಿಯ ಕುಟುಂಬದ ಸದಸ್ಯರು ಸಾಕ್ಷ್ಯ ನಾಶ ಮಾಡುವ ಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮನೆ ಬಾಗಿಲಲ್ಲಿ ತನಿಖಾಕಾಧಿರಿಗಳನ್ನು ಕಂಡು ಗಲಿಬಿಲಿಗೊಂಡ ಕುಟುಂಬದ ಸದಸ್ಯರು ಕ್ರಿಪ್ಟೋ ಕರೆನ್ಸಿಯ ಲಿಂಕ್‍ಗಳನ್ನು ಡಿಲಿಟ್ ಮಾಡಲು ಯತ್ನಿಸಿದ್ದಾರೆ.

ಪುನೀತ್ ಪ್ರಥಮ ಪುಣ್ಯಸ್ಮರಣೆಗೆ ಹರಿದುಬಂದ ಅಭಿಮಾನಿ ಸಾಗರ

ತಕ್ಷಣವೇ ಎಚ್ಚೆತ್ತುಕೊಂಡ ಜಾಗೃತದ ದಳದ ಸಿಬ್ಬಂದಿ ಕ್ರಮ ಕೈಗೊಂಡಿದ್ದು, ಆರಂಭದಲ್ಲಿ 1.75 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋ ಪತ್ತೆ ಹಚ್ಚಿದ್ದಾರೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಒಡಿಸ್ಸಾದ ಖುದ್ರಾ, ಶಂಬ್ಲಾಪುರ, ಬರ್ಗಹ ಜಿಲ್ಲೆಗಳಲ್ಲಿ ಆಸ್ತಿಗಳ ಶೋಧ ಕಾರ್ಯಾಚರಣೆ ನಡೆದಿದೆ. ಶುಕ್ರವಾರದಿಂದ ಎಣಿಸಲಾರಂಭಿಸಿದರು ಹಣ ಮತ್ತು ಆಸ್ತಿ ಲೆಕ್ಕಾಚಾರ ಇನ್ನೂ ಮುಗಿದಿಲ್ಲ ಎಂದು ಮೂಲಗಳು ತಿಳಿಸಿವೆ. ಅಕ್ರಮ ಆಸ್ತಿಗಳ ಮಾಹಿತಿ ಸ್ಪಷ್ಟವಾಗುತ್ತಿದ್ದಂತೆ ಅಕಾರಿ ಬಂಧನಕ್ಕೂ ಜಾಗೃತ ದಳ ಮುಂದಾಗಿದೆ ಎಂದು ಉನ್ನತ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.

Articles You Might Like

Share This Article