ಬೆಂಗಳೂರು,ಫೆ.16- ನಗರದಲ್ಲಿ ನೀರಿನ ಕಳ್ಳತನ, ಅಕ್ರಮ ಸಂಪರ್ಕ ಮತ್ತು ಸೋರಿಕೆಯನ್ನು ಕಟ್ಟುನಿಟ್ಟಾಗಿ ತಡೆ ಗಟ್ಟಲು ಜಾ ಗೃತ ದಳ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ಅವಯಲ್ಲಿ ಸದಸ್ಯೆ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಬೆಂಗಳೂರು ಜಲಮಂಡಳಿ ಕಾವೇರಿ ಒಂದರಿಂದ ನಾಲ್ಕನೇ ಹಂತದವರೆಗೆ 1450 ದಶಲಕ್ಷ ಲೀಟರ್ ಪೂರೈಕೆ ಮಾಡುತ್ತಿದೆ. ಕಾವೇರಿ ನೀರಿನ ಸಂಗ್ರಹಣೆ,ಸರಬರಾಜಿಗೆ ಮುನ್ನ ಜಲ ಶುದ್ಧೀಕರಣ ಘಟಕದಲ್ಲಿ ರಾಸಾಯನಿಕ ಬಳಕೆ, ವಿದ್ಯುತ್ ಶುಲ್ಕ, ಬಂಡವಾಳ ವೆಚ್ಚ ಹಾಗೂ ನೌಕರರ ವೇತನ ಸೇರಿ ಒಂದು ಕಿಲೋ ಮೀಟರ್ಗೆ 3.83 ಕೋಟಿ ರೂಪಾಯಿಗಳಷ್ಟು ವೆಚ್ಚವಾಗುತ್ತಿದೆ.
ಸಾರ್ವಜನಿಕ ಕೊಳಾಯಿಯಲ್ಲಿ ಶೇ.4ರಷ್ಟು, ಗೃಹ ಸಂಪರ್ಕಗಳ ಕೊಳವೆಗಳಲ್ಲಿ ಸೋರಿಕೆ ಶೇ.5, ಜಲಮಾಪಕಗಳ ಲೋಪದೋಷದಿಂದ ಶೇ.5, ಕೊಳಗೇರಿ ಪ್ರದೇಶದಲ್ಲಿ ಶೇ.4, ಹಳೆಯ, ಶಿಥಿಲಗೊಂಡ ನೆಲಮಟ್ಟದ ಜಲಾಶಯದಲ್ಲಿನ ಸೋರಿಕೆಯಿಂದ ಶೇ.5ರಷ್ಟು, ದಿನಂಪ್ರತಿ ರಸ್ತೆಗಳಲ್ಲಿ ಹೆಚ್ಚಿನ ವಾಹನಗಳ ಓಡಾಟದಿಂದ ನೀರಿನ ಕೊಳವೆಗಳ ಸೋರಿಕೆ ಹಾಗೂ ನೀರಿನ ಕೊಳವೆಗಳನ್ನು ಶುಚಿಗೊಳಿಸಲು ಉಪಯೋಗಿಸಲು ಶೇ.6ರಷ್ಟು ಸೇರಿ ಒಟ್ಟು ಶೇ.29ರಷ್ಟು ನೀರು ಪೋಲಾಗುತ್ತಿದೆ ಎಂದು ವಿವರಿಸಿದರು.
ತಾವು ಮುಖ್ಯಮಂತ್ರಿಯಾಗಿದ್ದಾಗ ಈ ಸೋರಿಕೆ ಶೇ.32ರಷ್ಟಿತ್ತು. ಹಂತ ಹಂತವಾಗಿ ಕಡಿತ ಮಾಡಲಾಗಿದೆ. ನೀರು ಸಬರಾಜಿಗೆ 50 ವರ್ಷಗಳ ಹಿಂದೆ ಪೈಪ್ಗಳನ್ನು ಅಳವಡಿಸಲಾಗಿದ್ದು, ಅವು ಹಳೆಯದಾಗಿದ್ದು ಬದಲಾವಣೆ ಮಾಡಬೇಕಿದೆ. ಜೊತೆಗೆ ಹಳೆಯ ಶಿಥಲೀಕರಣಗಳ ಪುನಃಶ್ಚೇತನಗೊಳಿಸಬೇಕಿದೆ.
ಈ ಎರಡು ಬಾಬ್ತುಗಳಿಗೆ ಸುಮಾರು ಎಂಟು ಸಾವಿರ ಕೋಟಿ ರೂಪಾಯಿ ಬೇಕಿದೆ. ಜಲಮಂಡಳಿಗೆ ಇದು ಆರ್ಥಿಕ ಹೊರೆಯಾಗುವುದರಿಂದ ಈ ಕಾಮಗಾರಿಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಸಿಪಿಹೆಚ್ಇಇಓ ಮಾನದಂಡದ ಪ್ರಕಾರ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ.15ರಷ್ಟು ಇರಬೇಕಿದೆ. ಇದನ್ನು ಶೂನ್ಯಕ್ಕೆ ತರಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ 22 ಕಿಲೋ ಮೀಟರ್ ಪೈಪ್ ಲೈನ್ಗಳನ್ನು ಅಳವಡಿಸಲಾಗುತ್ತಿದೆ.
ಈಗಾಗಲೇ 654 ಕೋಟಿ ರೂಪಾಯಿ ವೆಚ್ಚದಲ್ಲಿಕಾಮಗಾರಿ ನಡೆಯತ್ತಿದೆ ಎಂದು ವಿವರಿಸಿದರು. ಪ್ರತಿ ಕಿಲೋ ಮೀಟರ್ ನೀರು ಸರಬರಾಜಿಗೆ 41 ರೂಪಾಯಿ ವೆಚ್ಚವಾಗುತ್ತಿದೆ. ಅದರಂತೆ ದಿನವೊಂದಕ್ಕೆ ಮಂಡಳಿಗೆ 3.83 ಕೋಟಿ ರೂಪಾಯಿಗಳ ಶುಲ್ಕ ಸಂಗ್ರಹವಾಗುತ್ತಿದೆ ಎಂದರು.
ಇದಕ್ಕೂ ಮೊದಲು ಮಾತನಾಡಿದ ಭಾರತಿ ಶೆಟ್ಟಿ, ನೀರು ಸರಬರಾಜಿಗೆ ಪ್ರತಿದಿನ 5.94 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ.
ಸಂಗ್ರಹವಾಗುತ್ತಿರುವುದು 3.82 ಕೋಟಿ ರೂಪಾಯಿ ಮಾತ್ರ. ಬಾಕಿ 2.11 ಕೋಟಿ ರೂಪಾಯಿ ಪ್ರತಿ ದಿನ ನಷ್ಟವಾಗುತ್ತಿದೆ. ಇದನ್ನು ಹೇಗೆ ಭರಿಸಲಾಗುವುದು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಯವರು ನೀರಿನ ಸೋರಿಕೆ ತಡೆ ಗಟ್ಟಲು ಕ್ರಮ ಕೈಗೊಳ್ಳುವ ಜೊತೆಗೆ ಅಧಿಕಾರಿಗಳು ಅಕ್ರಮಗಳೊಂದಿಗೆ ಶಾಮೀಲಾಗಿರುವುದನ್ನು ಪತ್ರೆ ಹಚ್ಚಿ ಕ್ರಮ ಕೈಗೊಳ್ಳಲು ಜಾ ಗೃತ ದಳ ರಚಿಸಲಾಗುವುದು,. ಅದೇ ರೀತಿ ನೀರಿನ ಒಳ ಹರಿವು ಮತ್ತು ಸರಬರಾಜು ಹಂತದಲ್ಲಿ ನೀರಿನ ಲೆಕ್ಕ ಹಾಕಲು ಆಡಿಟ್ ವ್ಯವಸ್ಥೆ ಜಾ ರಿ ಮಾಡಲಾಗುವುದು ಎಂದು ತಿಳಿಸಿದರು.
#Vigilance, #prevent, #waterleakage, #Bengaluru, CMBommai,