ಚನೈ,ಜ.20- ಚಲನಚಿತ್ರದ ಶೂಟಿಂಗ್ ವೇಳೆ ಲಂಕಾವಿ ದ್ವೀಪದ ಬಳಿಯ ಸಮುದ್ರದಲ್ಲಿ ಸ್ಕೈ ಜೆಟ್ ವಾಹನವನ್ನು ಚಲಾಯಿಸುವಾಗ ಅದು ಮೊಗಚಿಬಿದ್ದು ಸಂಭವಿಸಿ ಅಪಘಾತದಲ್ಲಿ ತಮಿಳು ನಟ ವಿಜಯ್ ಅಂತೋನಿ ಗಾಯಗೊಂಡು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ವಿಜಯ್ ಪ್ರಸ್ತುತ ಮಲೇಷ್ಯಾದಲ್ಲಿ ಪಿಚೈಕಾರನ್ 2 ಚಿತ್ರೀಕರಣದಲ್ಲಿ ಬಾಗಿಯಾಗಿದ್ದು ಸ್ಕೈ ಜೆಟ್ ವೇಗವಾಗಿ ಹೋಗುವ ಶೂಟಿಂಗ್ ವೇಳೆ ಈ ದುರಂತ ನಡೆದಿದೆ ಮತ್ತೊಮದು ದೋಣಿಯಲ್ಲಿದ್ದ ನಟಿ ಕಾವ್ಯಾ ಥಾಪರ್ ಸುರಕ್ಷಿತವಾಗಿದ್ದಾರೆ.
ಪಂಜಾಬ್ನ ವೃದ್ಧನಿಗೆ ಒಲಿದ 5 ಕೋಟಿ ಬಂಪರ್ ಲಾಟರಿ
ಸದ್ಯ ವಿಜಯ್ ಮುಖಕ್ಕೆ ತೀವ್ರ ಗಾಯಗಳಾಗಿದ್ದು, ತುಟಿ ಬಿರುಕು ಬಿಟ್ಟಿದ್ದಲ್ಲದೆ, ಹಲ್ಲು ಕೂಡ ಮುರಿದಿದೆ .
ಘಟನೆ ವೇಳೆ ಪ್ರಜ್ಞೆ ತಪ್ಪಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಿಜಯ್ ಅಂತೋನಿ ಅವರನ್ನು ಚಿತ್ರತಂಡ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದೆ.
ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಲೇಷ್ಯಾ ರಾಜಧಾನಿ ಕೌಲಾಲಂಪುರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಜಯ್ ಬಾಯಿಯ ಕೆಳಭಾಗಕ್ಕೆ ತೀವ್ರ ಹಾನಿಯಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಎಂದು ಹೇಳಲಾಗಿದೆ. ವಿಜಯ್ ಕುಟುಂಬ ನಿನ್ನೆ ಕೌಲಾಲಂಪುರಕ್ಕೆ ತೆರಳಿದೆ. ಇಂದು ರಾತ್ರಿ ಕುಟುಂಬಸ್ಥರು ಅವರನ್ನು ಚೆನ್ನೈಗೆ ಕರೆತರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರವೀಣ್ ನೆಟ್ಟಾರು ಹಂತಕರ ಸುಳಿವು ನೀಡುವವರಿಗೆ 5 ಲಕ್ಷ ರೂ. ಬಹುಮಾನ ಘೋಷಣೆ