ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಬೈಕ್, 8 ಮೊಬೈಲ್‍ ವಶ

Social Share

ಬೆಂಗಳೂರು,ನ.14- ಮೊಬೈಲ್‍ನಲ್ಲಿ ಮಾತನಾಡುತ್ತಾ ನಡೆದು ಹೋಗುತ್ತಿದ್ದ ವೈದ್ಯರೊಬ್ಬರ ಕೈಯಿಂದ ಮೊಬೈಲ್ ಎಗರಿಸಿ ಇಬ್ಬರು ದರೋಡೆಕೋರರು ಪರಾರಿಯಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದ ಬಳಿ ನಿನ್ನೆ ಸಂಜೆ ವೈದ್ಯರೊಬ್ಬರು ನಡೆದು ಹೋಗುತ್ತಿದ್ದಾಗ ಅವರ ಮೊಬೈಲ್‍ಗೆ ಕರೆಯೊಂದು ಬಂದಿದೆ. ಕರೆ ಸ್ವೀಕರಿಸಿ ಮಾತನಾಡಿಕೊಂಡು ಹೋಗುತ್ತಿದ್ದರು. ಆಗ ವೈದ್ಯರನ್ನು ಇಬ್ಬರು ದರೋಡೆಕೋರರು ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಮೊಬೈಲ್ ಎಗರಿಸಿ ಪರಾರಿಯಾದರು. ತಕ್ಷಣ ವೈದ್ಯರು ಸಹಾಯಕ್ಕಾಗಿ ಕೂಗಿಕೊಂಡಿದ್ದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ವಿಜಯನಗರ ಠಾಣೆ ಪೊಲೀಸರು ತಕ್ಷಣ ಕಾರ್ಯಪ್ರವೃತರಾಗಿ ಆರೋಪಿಗಳನ್ನು ಬೆನ್ನಟ್ಟಿ ಗಂಗೊಂಡನಹಳ್ಳಿ ಸ್ಲಂನಲ್ಲಿರುವ ಶೆಡ್‍ವೊಂದರಲ್ಲಿ ಇರುವುದನ್ನು ಪತ್ತೆಹಚ್ಚಿ ಶೆಡ್ ಬಳಿ ಧಾವಿಸುತ್ತಿದ್ದಂತೆ ಇಬ್ಬರು ದರೋಡೆಕೋರರು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ.

ಕಾಂಗ್ರೆಸ್ ಟಿಕೆಟ್‍ಗೆ ಮುಗಿಬಿದ್ದ ಆಕಾಂಕ್ಷಿಗಳು

ಪೊಲೀಸರು ಶೆಡ್ ಪರಿಶೀಲಿಸಿದ್ದು ಸ್ಥಳದಲ್ಲಿದ್ದ ಬೈಕ್ ಹಾಗೂ 8 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ದರೋಡೆಕೋರರಿಗಾಗಿ ಶೋಧ ನಡೆಸುತ್ತಿದ್ದಾರೆ.

Articles You Might Like

Share This Article