ಬಿಜಾಪುರ ನಗರಪಾಲಿಕೆ ಅತಂತ್ರ, ಅಧಿಕಾರಕ್ಕೇರಲು ಬಿಜೆಪಿಗೆ 1 ಸ್ಥಾನದ ಕೊರತೆ

Social Share

ಬಿಜಾಪುರ,ಅ.31-ಜಿದ್ದಾಜಿದ್ದಿನ ಕಣವಾಗಿದ್ದ ನಗರಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಒಟ್ಟು 35 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಾಲಿಕೆಯಲ್ಲಿ ಚುಕ್ಕಾಣಿ ಹಿಡಿಯಲು ಒಂದು ಸ್ಥಾನದ ಕೊರತೆ ಎದುರಾಗಿದ್ದು, ಪಕ್ಷೇತರ ಬೆಂಬಲದಿಂದ ಅಕಾರಕ್ಕೆ ಬರುವ ಸಾಧ್ಯತೆ ಇದೆ.

ಕಾಂಗ್ರೆಸ್ 10 ಸ್ಥಾನ ಪಡೆದು 2ನೇ ಸ್ಥಾನದಲ್ಲಿದ್ದರೆ ಪಕ್ಷೇತರರು 5 ವಾರ್ಡ್‍ಗಳಲ್ಲಿ ಜೆಡಿಎಸ್-1 ಹಾಗೂ ಎಂಐಎ 2 ವಾರ್ಡ್‍ಗಳಲ್ಲಿ ಗೆಲುವು ಸಾಸಿದೆ.

ಮಾಜಿ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸ್ವಕ್ಷೇತ್ರವಾಗಿದ್ದ ಬಿಜಾಪುರ ನಗರ ಪಾಲಿಕೆಯಲ್ಲಿ ಬಿಜೆಪಿ 17 ಸ್ಥಾನ ಗೆಲ್ಲುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ.

ಹಿಂದುತ್ವವನ್ನೇ ದಾಳವಾಗಿಟ್ಟುಕೊಂಡು ಪ್ರಚಾರ ನಡೆಸಿದ್ದ ಯತ್ನಾಳ್ ಒಂದು ಸಮುದಾಯವನ್ನು ಹಿಗ್ಗಾಮುಗ್ಗ ಟೀಕಿಸಿದ್ದರು. ಪರಿಣಾಮ ಹಿಂದೂ ಮತಗಳ ದ್ರುವೀಕರಣದಿಂದ ನಗರಪಾಲಿಕೆಯಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದಿದೆ.

ಸರಳ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಇರುವುದರಿಂದ ಜೆಡಿಎಸ್ ಇಲ್ಲವೇ ಪಕ್ಷೇತರ ಸದಸ್ಯರ ಬೆಂಬಲ ಪಡೆದು ಮೊದಲ ಬಾರಿಗೆ ಅಕಾರ ಗದ್ದುಗೆ ಹಿಡಿಯಲು ಕೇಸರಿ ಪಡೆ ಸಜ್ಜಾಗಿದೆ.

Articles You Might Like

Share This Article