ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಟೀಸರ್ ಮತ್ತು ಪೋಸ್ಟರ್ ಗಳಿಂದ ಸದ್ದು ಮಾಡುತ್ತಿದೆ. ಕೋವಿಡ್ ಇಲ್ಲದಿದ್ದರೆ ಕಳೆದ ತಿಂಗಳು ಬಿಡುಗಡೆಯಾಗಬೇಕಿತ್ತು.
ಚಿತ್ರತಂಡ ಸಿನಿಮಾದ ಬಗ್ಗೆ ತುಂಬಾ ಕ್ಯೂರಿಯಾಸಿಟಿ ಹುಟ್ಟಿಸುವಂತ ಮಾಹಿತಿಗಳನ್ನು ಆಗಾಗ ಬಿಡುಗಡೆ ಮಾಡುತ್ತಿದೆ ಸದ್ಯದ ಕುತೂಹಲ ವಿಚಾರವೆಂದರೆ ಸುದೀಪ್ ಅವರು ವಿಕ್ರಾಂತ್ ರೋಣ ಚಿತ್ರಕ್ಕೆ ಇಂಗ್ಲಿಷ್ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ ಎಂಬುವುದು.
#VikrantRonaInEnglish @KicchaSudeep sir completes dubbing for the English version. First Kannada superstar & one of the few from India to dub for a full fledged commercial movie in English #VikrantRоna pic.twitter.com/xXAvJgAmts
— Anup Bhandari (@anupsbhandari) March 2, 2022
ಈ ವಿಚಾರವನ್ನು ಸ್ವತಃ ನಿರ್ದೇಶಕ ಅನುಪ್ ಭಂಡಾರಿ ಟ್ವಿಟರ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಇಂಗ್ಲಿಷ್ನಲ್ಲಿ ತಮ್ಮ ಪಾತ್ರಕ್ಕೆ ಸುದೀಪ್ ಅವರ ಧ್ವನಿ ನೀಡಿದ್ದಾರೆ ಕನ್ನಡದ ಸೂಪರ್ ಸ್ಟಾರ್ ಒಬ್ಬರು ತಮ್ಮ ಇಂಗ್ಲಿಷ್ ಚಿತ್ರಕ್ಕೆ ತಮ್ಮದೇ ಧ್ವನಿ ನೀಡಿರುವುದು ಇದೇ ಮೊದಲು ಎಂದು ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.