ಇರಾನ್‍ನಾದ್ಯಂತ ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿಗಳು-ಭದ್ರತಾ ಪಡೆ ನಡುವೆ ಘರ್ಷಣೆ

Social Share

ಟೆಹ್ರಾನ್,ಅ. 31-ಇರಾನ್‍ನಾದ್ಯಂತ ವಿಶ್ವವಿದ್ಯಾನಿಲಯಗಳು ಹಾಗು ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿಗಳು ಹಾಗು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆದಿದೆ.

ಮೊದಲಿಗೆ ಟೆಹ್ರಾನ್‍ನ ಆಜಾದ್ ವಿಶ್ವವಿದ್ಯಾನಿಲಯದಲ್ಲಿ ಘರ್ಷಣೆಗಳು ಆರಂಭಗೊಂಡಿದ್ದು ಭದ್ರತಾ ಪಡೆಗಳು ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಮತ್ತು ಗುಂಡು ಹಾರಿಸುತ್ತಿರುವ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಕಂಡುಬಂದಿದೆ.

ದೇಶದ ಅರೆಸೇನಾಪಡೆಯ ರೆವಲ್ಯೂಷನರಿ ಗಾರ್ಡ್‍ನ ಬೆದರಿಕೆಗಳ ಹೊರತಾಗಿಯೂ ರಾಷ್ಟ್ರವ್ಯಾಪಿ ಸ್ವಾತಂತ್ರ್ಯ, ಸ್ವಾತಂತ್ರ್ಯ, ಸ್ವಾತಂತ್ರ್ಯ ಎಂಬ ಘೋಷಣೆನ್ನು ಪ್ರತಿಭಟನಾಕಾರರು ಕೂಗುತ್ತಿದ್ದು ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಇರಾನ್ ಮಾಧ್ಯಮ ವರದಿ ಮಾಡಿದೆ,

ದಕ್ಷಿಣ ಇರಾನ್‍ನ ಪ್ರಮುಖ ಶಿಯಾ ಪವಿತ್ರ ಸ್ಥಳದಲ್ಲಿ ಮಾರಣಾಂತಿಕ ದಾಳಿ ನಡೆದಿದೆ, ಅಯತೊಲ್ಲ ಅಲಿ ಖಮೇನಿ ವಿರುದ್ಧ ಘೋಷಣೆ ಕೂಗುತ್ತಿರುವ ವಿದ್ಯಾರ್ಥಿಗಳ ಮೇಲೆ ಭದ್ರತಾ ಪಡೆಗಳು ಅಶ್ರುವಾಯು ಸಿಡಿಸಿದೆ.

23 ಸಾವಿರ ರೂ.ವಿದ್ಯುತ್ ಬಿಲ್ ನೋಡಿ ಬಡ ಕಾರ್ಮಿಕನಿಗೆ ಶಾಕ್ ..!

ಸಶಸ್ತ್ರ ಪಡೆಗಳಿಂದ ವಿಶ್ವವಿದ್ಯಾನಿಲಯ ಕ್ಯಾಂಪಸ್‍ಗಳ ಅತಿಕ್ರಮಣ ಮತ್ತು ಶಾಂತಿಯುತ ವಿದ್ಯಾರ್ಥಿಗಳ ಪ್ರತಿಭಟನೆಗಳ ಮೇಲೆ ಹಿಂಸಾತ್ಮಕ ದಮನವನ್ನು ಬಲವಾಗಿ ಖಂಡಿಸುತ್ತದೆ ಎಂದು ಮಾನವ ಹಕ್ಕುಗಳ ಗುಂಪು ಹೇಳಿದೆ.

Articles You Might Like

Share This Article