ಗಣ್ಯವ್ಯಕ್ತಿಗಳಿಗೆ ವಿನಾಯ್ತಿ ಪಾಸ್‍ಟ್ಯಾಗ್‍ ವಿತರಣೆ

Social Share

ಬೆಂಗಳೂರು,ಫೆ.22-ಶಾಸಕರು, ಸಂಸದರು, ಗಣ್ಯವ್ಯಕ್ತಿಗಳುಹಾಗೂ ವಿಶೇಷ ವಾಹನಗಳು ಟೋಲ್‍ನಲ್ಲಿ ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ಶುಲ್ಕ ವಿನಾಯ್ತಿ ಪಾಸ್‍ಟ್ಯಾಗ್‍ ಗಳನ್ನು ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.

ವಿಧಾನಪರಿಷತ್‍ನ ಪ್ರಶ್ನೋತ್ತರದಲ್ಲಿ ಶಾಸಕ ಸುನೀಲ್ ಗೌಡ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2021ರ ಫೆ.16ರಿಂದ ಎಲ್ಲ ವಾಹನಗಳು ಟೋಲ್‍ಗಳಲ್ಲಿ ಸಂಚರಿಸಬೇಕಾದಾಗ ಪಾಸಟ್ಯಾಗ್‍ಗಳನ್ನು ಕಡ್ಡಾಯಗೊಳಿಸಲಾಗಿದೆ.

ನೈಸ್‍ರಸ್ತೆಯಲ್ಲಿ ಶುಲ್ಕ ವಿನಾಯ್ತಿ ಪಾಸ್‍ಟ್ಯಾಗ್‍ಗಳನ್ನು ನಿರಾಕರಿಸಿರುವ ಬಗ್ಗೆ ಯಾವುದೇ ದೂರುಗಳು ಕೇಳಿಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಅನಿತಾಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ : ಅಶ್ವಥ್ ನಾರಾಯಣ

ಸದಸ್ಯ ಎ.ದೇವೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೊಡ್ಡಬಳ್ಳಾಪುರ ಯಲಹಂಕ ಮಾರ್ಗದ ಮಾರಸಂದ್ರದಿಂದ ದೊಡ್ಡಬಳ್ಳಾಪುರ ತಾಲ್ಲೂಕು ಕಾಡನೂರು ಗೇಟ್ ಮೂಲಕ ಚೆನ್ನದೇವಿ ಅಗ್ರಹಾರಕ್ಕೆ ಹೋಗುವ ರಸ್ತೆ ಕಾಮಗಾರಿಯನ್ನು ಈ ವರ್ಷದ ಏ.8ರೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಸದಸ್ಯ ಫಾರೂಖ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉಲ್ಲಾಳ ತಾಲ್ಲೂಕಿನ ಉಲ್ಲಾಳ ಸೋಮೇಶ್ವರ ತೀರ ಪ್ರದೇಶಕ್ಕೆ ಹೊಂದಿಕೊಂಡ ರಸ್ತೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸದಸ್ಯ ಮಂಜುನಾಥ್ ಬಂಡಾರಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ಕಪಕ್ಕ ರ್ನಿಧಿಷ್ಟ ಜಾಗವನ್ನು ಮೀಸಲಿಡುವುದು ಅನಿವಾರ್ಯ ಎಂದು ಸ್ಪಷ್ಟಪಡಿಸಿದರು.

1997ರ ಆದೇಶದ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ ಮಧ್ಯಭಾಗದಿಂದ ಕನಿಷ್ಟ 40 ಮೀಟರ್, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಗಡಿರೇಖೆಯಿಂದ 3ರಿಂದ 6 ಮೀಟರ್ ಯಾವುದೇ ಶಾಶ್ವತ ನಿರ್ಮಾಣ ಕಾಮಗಾರಿ ಕೈಗೊಳ್ಳಬಾರದೆಂಬ ಷರತ್ತು ಇದೆ.

ಇಂದು ಬಿಜೆಪಿ ಸೇರಲಿದ್ದಾರೆ ಹಿರಿಯ ನಟ ಅನಂತನಾಗ್

ರಾಜ್ಯ ಹೆದ್ದಾರಿಗೆ 4 ಮೀಟರ್, ಗ್ರಾಮೀಣ ರಸ್ತೆಗಳಲ್ಲಿ 20 ಮೀಟರ್ ಜಾಗವನ್ನು ಮೀಸಲಿಡಬೇಕು. ಹೆದ್ದಾರಿ ಮತ್ತು ರಸ್ತೆಗಳ ಇಕ್ಕೆಲಗಳಲ್ಲಿರುವ ಹಳೆಯ ಕಟ್ಟಡಗಳೀಗೆ ರಿಯಾಯ್ತಿ ನೀಡಲಾಗಿದೆ. ಆದರೆ ಹೊಸ ಯೋಜನೆಯಲ್ಲಿ ಜಫರ್‍ಜೋನ್ ಅನಿವಾರ್ಯ ಎಂದು ಸಚಿವರು ತಿಳಿಸಿದರು.

vip, special, vehicles, fastag, toll,

Articles You Might Like

Share This Article