‘ನೀವು ದೇವರು ಕೊಟ್ಟ ವರ’ ರೊನಾಲ್ಡೊ ಬಣ್ಣಿಸಿದ ಕೊಹ್ಲಿ

Social Share

ನವದೆಹಲಿ, ಡಿ. 12- ನೀವು ಟ್ರೋಫಿ ಗೆಲುವಲ್ಲಿ ಎಡವಿದ್ದರೂ ಕೂಡ ಫುಟ್ಬಾಲ್ ಲೋಕದ ದಿಗ್ಗಜರಾದ ನೀವು ದೇವರು ಕೊಟ್ಟ ವರ ಎಂದು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಫುಟ್ಬಾಲ್ ಲೋಕದ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಬಣ್ಣಿಸಿದ್ದಾರೆ.

ತಮ್ಮ ವೃತ್ತಿ ಜೀವನದ ಕೊನೆಯ ಫಿಫಾ ವಿಶ್ವಕಪ್‍ನಲ್ಲಿ ಟ್ರೋಫಿ ಗೆಲ್ಲುವ ಮೂಲಕ ಗೌರವಾಯುತವಾಗಿ ವಿದಾಯ ಹೇಳಬೇಕೆಂದು ಬಯಸಿದ್ದ ರೊನಾಲ್ಡೊಗೆ ಕೊನೆಗೂ ವಿಶ್ವಕಪ್ ಗೆಲ್ಲಲಿಲ್ಲ ಎಂಬ ಕೊರಗು ಕಾಡುತ್ತಿದೆ.

ಪೋರ್ಚುಗಲ್ ತಂಡದ ನಾಯಕನ ಪಟ್ಟ ಅಲಂಕರಿಸಿದ್ದ ರೊನಾಲ್ಡೊ ಕಳಪೆ ಪ್ರದರ್ಶನ ನೀಡಿದ್ದರಿಂದ ಸ್ವಿಡ್ಜರ್‍ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಬೆಂಚ್ ಕಾಯುವಂತಾಗಿತ್ತು. ಕ್ವಾರ್ಟರ್ ಫೈನಲ್‍ನಲ್ಲಿ ಬದಲಿ ಆಟಗಾರನ ರೂಪದಲ್ಲಿ ತಂಡಕ್ಕೆ ಸೇರ್ಪಡೆ ಗೊಂಡರೂ ಮೊರಾಕ್ಕೊ ವಿರುದ್ಧ 0-1 ಗೋಲಿನಿಂದ ಸೋತು ಸೆಮಿಫೈನಲ್ ಸುತ್ತಿನಿಂದ ಹೊರ ಬಿತ್ತು. ಪಂದ್ಯ ಸೋತ ನಂತರ ಭಾವುಕರಾಗಿ ಕಣ್ಣೀರಿಟ್ಟಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ವಿರಾಟ್ ಕೊಹ್ಲಿ ಅವರು ಬಣ್ಣಿಸಿದ್ದಾರೆ.

ರೋಲ್‍ಕಾಲ್ ಸರ್ಕಾರದಲ್ಲಿ ಜನರಿಗೆ ರಕ್ಷಣೆ ಇಲ್ಲ: ಕಾಂಗ್ರೆಸ್

ನೀವು ಟ್ರೋಫಿಯನ್ನು ಗೆಲ್ಲದಿದ್ದರೂ ವಿಶ್ವದೆಲ್ಲೆಡೆ ಅಭಿಮಾನಿಗಳ ಮನ ಗೆದ್ದಿದ್ದೀರಿ, ನೀವು ಪ್ರತಿಯೊಂದು ಪಂದ್ಯ ದಲ್ಲೂ ಉತ್ತಮ ಕಾರ್ಯ ಕ್ಷಮತೆಯಿಂದ ಆಡಿದ್ದೀರಿ, ಕ್ರೀಡಾ ಲೋಕಕ್ಕೆ ನೀವು ದೇವರು ಕೊಟ್ಟ ವರ’ ಎಂದು ಕೊಹ್ಲಿ ಹೇಳಿದ್ದಾರೆ.

ಕಳೆದ 16 ವರ್ಷಗಳಿಂದಲೂ ಫುಟ್ಬಾಲ್ ರಂಗದಲ್ಲಿ ಗುರುತಿಸಿಕೊಂಡಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಒಮ್ಮೆಯಾದರೂ ಫಿಫಾ ವಿಶ್ವಕಪ್ ಟ್ರೋಫಿ ಗೆಲ್ಲಬೇಕೆಂಬ ಕನಸು ಒತ್ತಿದ್ದರು, ತಮ್ಮ ನಾಯಕತ್ವದಲ್ಲಿ ಪೆÇೀರ್ಚುಗಲ್‍ಗೆ ವಿಶ್ವಕಪ್ ಕಿರೀಟ ತೊಡಿಸಬೇಕೆಂದು ರೊನಾಲ್ಡೊ ಬಯಸ್ಸಿದ್ದರಾದರೂ ಮೊರಾಕ್ಕೊ ಸೋತು ವಿಶ್ವಕಪ್ ಗೆಲ್ಲುವ ಕನಸನ್ನು ಕೈಚೆಲ್ಲಿದ್ದಾರೆ.

ಡಿ 15ರಿಂದ ಪಂಚರತ್ನ ಯಾತ್ರೆ ಮತ್ತೆ ಪ್ರಾರಂಭ

Virat Kohli, Cristiano Ronaldo, support, posts,

Articles You Might Like

Share This Article