ವಿರಾಟ್ ಕೊಹ್ಲಿಗೆ 12 ಲಕ್ಷ ದಂಡ..!

Spread the love

ದುಬೈ, ಸೆ. 25- ಕಳಪೆ ಫೀಲ್ಡಿಂಗ್‍ನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಲೋಕೇಶ್ ರಾಹುಲ್‍ಗೆ ಎರಡು ಜೀವದಾನ ನೀಡಿದ್ದ ಆರ್‍ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ದಂಡ ವಿಸಲಾಗಿದೆ.

ದುಬೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಸನ್‍ರೈಸರ್ಸ್ ಹೈದ್ರಾಬಾದ್ ವಿರುದ್ಧ ಬ್ಯಾರಿಸ್ಟೋಗೆ 3 ಜೀವದಾನ ನೀಡಿದ್ದ ಆರ್‍ಸಿಬಿ ಫೀಲ್ಡರ್‍ಗಳು, ಈ ಪಂದ್ಯದಲ್ಲೂ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿ ರಾಹುಲ್‍ಗೆ 2 ಜೀವದಾನ ನೀಡಿದ್ದರ ಪರಿಣಾಮ ಪಂಜಾಬ್ 3 ವಿಕೆಟ್ ನಷ್ಟಕ್ಕೆ 206 ಬೃಹತ್ ಮೊತ್ತವನ್ನು ಕಲೆಹಾಕಿತು.

ಈ ಮೊತ್ತವನ್ನು ಗುರಿಮೆಟ್ಟಿದ್ದ ಆರ್‍ಸಿಬಿ ಪಡಿಕ್ಕಲ್, ಫಿಂಚ್, ಕೊಹ್ಲಿ, ವಿಲಿಯರ್ಸ್‍ರಂತಹ ಶ್ರೇಷ್ಠ ಬ್ಯಾಟ್ಸ್‍ಮನ್‍ಗಳ ವೈಫಲ್ಯದಿಂದ 109 ರನ್‍ಗಳಿಗೆ ಅಲೌಟ್ ಆಗಿ 97 ರನ್‍ಗಳಿಂದ ಹೀನಾಯ ಸೋಲು ಕಂಡಿತು.

ಆರ್‍ಸಿಬಿ ಬೌಲಿಂಗ್ ಅನ್ನು ನಿಗತ ಸಮಯದಲ್ಲಿ ಮುಗಿಸದಿದ್ದರಿಂದ ತಂಡದ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ದಂಡ ವಿಸಲಾಗಿದೆ. ಐಪಿಎಲ್ ನಿಯಮಗಳ ಪ್ರಕಾರ ಡ್ರಿಂಕ್ಸ್ ಸಮಯವೂ 75 ನಿಮಿಷಗಳಲ್ಲಿ ಒಂದು ಇನ್ನಿಂಗ್ಸ್ ಮುಗಿಸಬೇಕು.

ಅದನ್ನು ಮೀರಿದರೆ 12 ಲಕ್ಷ ದಂಡ ವಿಸಲಾಗುತ್ತದೆ, ಇದು ಮತ್ತೊಂದು ಪಂದ್ಯಕ್ಕೂ ಮುಂದುವರೆದರೆ ನಾಯಕನನ್ನು ಒಂದು ಪಂದ್ಯದಿಂದ ಹೊರಗಿಡಲಾಗುತ್ತದೆ.

Facebook Comments

Sri Raghav

Admin