Saturday, September 23, 2023
Homeಇದೀಗ ಬಂದ ಸುದ್ದಿಕೊಹ್ಲಿಗೆ ಬೆಳ್ಳಿ ಬ್ಯಾಟ್ ಉಡುಗೊರೆ ನೀಡಿದ ಲಂಕಾ ಬೌಲರ್

ಕೊಹ್ಲಿಗೆ ಬೆಳ್ಳಿ ಬ್ಯಾಟ್ ಉಡುಗೊರೆ ನೀಡಿದ ಲಂಕಾ ಬೌಲರ್

- Advertisement -

ಕೊಲಂಬೊ, ಸೆ.11- ಪಾಕ್‍ನ ಎಡಗೈ ವೇಗಿ ಶಾಹೀನ್ ಶಾ ಆಫ್ರಿದಿ ಏಷ್ಯಾಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ದಿಗ್ಗಜರ ಸದ್ದಗಡಿಸಿದ್ದರು, ಸೂಪರ್ 4ರಲ್ಲಿ ಅಫ್ರಿದಿ ವಿರುದ್ಧ ಪ್ರಾಬಲ್ಯ ಮೆರೆಯುವ ಸಲುವಾಗಿ ನೆಟ್ ಪ್ರಾಕ್ಟೀಸ್‍ನಲ್ಲಿ ಶ್ರೀಲಂಕಾದ ವೇಗದ ನೆಟ್ ಬೌಲರ್‍ಗಳನ್ನು ಬಳಸಿಕೊಂಡು ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ಮಾಡಿದ್ದರು.

ನೆಟ್ ಬೌಲರ್ ಆಗಿದ್ದ ಶ್ರೀಲಂಕಾದ ಚಂದ್ರಮೋಹನ್ ಕ್ರಿಶಾಂತ್ ಅವರು ಇದೇ ವೇಳೆ ಟೀಮ್ ಇಂಡಿಯಾದ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿಗೆ ಬೆಳ್ಳಿ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ನೆಟ್ ಪ್ರಾಕ್ಟೀಸ್ ವೇಳೆ ವಿರಾಟ್ ಕೊಹ್ಲಿ ಅವರು ಚಂದ್ರಮೋಹನ್ ಕ್ರಿಶಾಂತ್ ಅವರಿಗೆ ಹಲವು ಸಲಹೆಗಳನ್ನು ನೀಡಿದ್ದರು. ಈ ಬ್ಯಾಟ್ ಮೇಲೆ ಕೊಹ್ಲಿ ಸಿಡಿಸಿರುವ 76 ಶತಕಗಳ ಸಂಪೂರ್ಣ ವಿವರದ ಮಾಹಿತಿಯಿದೆ.

- Advertisement -

ನಾಳೆ ಖಾಸಗಿ ಸಾರಿಗೆ ಬಂದ್: ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ

ಕೊಹ್ಲಿಗೆ ವಜ್ರದ ಬ್ಯಾಟ್:
ಈ ಹಿಂದೆ ಸೂರತ್‍ನ ವ್ಯಾಪಾರಿ ಒಬ್ಬರು ವಿರಾಟ್ ಕೊಹ್ಲಿಗೆ ವಜ್ರದ ಬ್ಯಾಟ್ ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಬ್ಯಾಟ್ 1.04 ಕ್ಯಾರೆಟ್ ಮೂಲ ವಜ್ರದ್ದಾಗಿದ್ದು, 15 ಮಿಲಿಮೀಟರ್ ಉದ್ದ ಮತ್ತು ಐದು ಮಿಲಿಮೀಟರ್ ಅಗಲ ವಿಸ್ತೀರ್ಣ ಹೊಂದಿದ್ದು, ಇದರ ಮೌಲ್ಯ 10 ಲಕ್ಷ ಎಂದು ವರದಿಯಾಗಿತ್ತು.

#ViratKohli, #silverbat, #SriLankan, #cricketer,

- Advertisement -
RELATED ARTICLES
- Advertisment -

Most Popular