ಕೋಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನ ಐಕಾನ್

Social Share

ಡಾಕಾ,ಜ.16-ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರೋಚಿತ ಆಟ ಪ್ರದರ್ಶಿಸಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೋಹ್ಲಿ ಬಗ್ಗೆ ವಿಶ್ವೆದೆಲ್ಲೆಡೆ ವ್ಯಾಪಕ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.

ಫುಟ್‍ಬಾಲ್‍ಗೆ ಲಿಯೋನೆಲ್ ಮೆಸ್ಸಿ ಐಕಾನ್ ಆಗಿದ್ದರೆ, ಕ್ರಿಕೆಟ್‍ಗೆ ಕೋಹ್ಲಿ ಐಕಾನ್ ಆಗಿದ್ದಾರೆ ಎಂದು ಶ್ರೀಲಂಕಾದ ಮಾಜಿ ಆಟಗಾರ ಫವೇಝ್ ಮಹ್ರೂಫ್ ಅಭಿಪ್ರಾಯಪಟ್ಟಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಸತತ ಮೂರು ಶತಕ ಗಳಿಸಿದ್ದ ಕೋಹ್ಲಿ, ಶ್ರೀಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಅಜೇಯ 166 ರನ್ ಗಳಿಸುವ ಮೂಲಕ 317 ರನ್‍ಗಳ ಅಂತರದ ದಾಖಲೆ ಗೆಲುವು ಸಾಧಿಸಲು ಮುನ್ನುಡಿ ಬರೆದ ನಂತರ ಅವರ ಆಟದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಸಾರಥ್ಯವನ್ನು ಭಾರತ ವಹಿಸುತ್ತಿರುವ ಸಂದರ್ಭದಲ್ಲೆ ಕೋಹ್ಲಿ ಅವರ ಬ್ಯಾಟ್‍ನಿಂದ ರನ್ ಹರಿದುಬರುತ್ತಿರುವುದನ್ನು ನೋಡಿದರೆ ಅವರನ್ನು ಯಾರ ಕೈಯಿಂದಲೂ ಕಟ್ಟಿ ಹಾಕುವುದು ಅಸಾಧ್ಯ ಎಂದು ಮಹ್ರೂಫ್ ಬಣ್ಣಿಸಿದ್ದಾರೆ.

ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲೂ ಸರ್ಕಾರದ ಪ್ರತಿನಿಧಿಗಳಿರಬೇಕಂತೆ

ಕೋಹ್ಲಿ ಅವರ ಆಟ ಇದೇ ರೀತಿ ಮುಂದುವರೆದರೆ 2023ರ ವಿಶ್ವಕಪ್ ಅನ್ನು ಭಾರತ ಗೆದ್ದು ಬೀಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಅವರು, ಕೊಹ್ಲಿ 4 ಪಂದ್ಯಗಳಲ್ಲಿ 3ನೇ ಶತಕ ಗಳಿಸಿದ್ದನ್ನು ನೋಡಿ ಆಶ್ಚರ್ಯವಾಗಲಿಲ್ಲ ಅವರು ಇದುವರೆಗೂ ಎದುರಿಸಿದ್ದ ರನ್ ಬರ ನೀಗಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಬೆಂಗಳೂರು-ಮೈಸೂರು ನಡುವೆ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭ

ಕೋಹ್ಲಿ ಬ್ಯಾಟ್‍ನಿಂದ ರನ್‍ಗಳು ಹರಿದು ಬರುವುದು ಭಾರತೀಯ ಕ್ರಿಕೆಟ್‍ಗೆ ಒಳ್ಳೆಯ ಸುದ್ದಿ. ಇದು ವಿಶ್ವಕಪ್ ವರ್ಷ, ಮತ್ತು ವಿರಾಟ್ ಕೊಹ್ಲಿ ಈ ರೀತಿಯ ಫಾರ್ಮ್‍ನಲ್ಲಿರುವುದು ದೊಡ್ಡ ಸುದ್ದಿ ಎಂದು ಜಾಫರ್ ಶ್ಲಾಘಿಸಿದ್ದಾರೆ.

Virat Kohli, icon, International, Cricket, Farveez Mahroof,

Articles You Might Like

Share This Article