ಗಂಗೂಲಿ, ರಿಕ್ಕಿ ದಾಖಲೆ ಸರಿಗಟ್ಟಲು ಕೊಹ್ಲಿ ತವಕ

Social Share

ಮಿರ್‍ಪುರ್, ಡಿ.7- ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಹಲವು ದಾಖಲೆಯನ್ನು ನಿರ್ಮಿಸಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧದ 2ನೆ ಪಂದ್ಯದಲ್ಲಿ ಮತ್ತೊಂದು ದಾಖಲೆಯನ್ನು ಬರೆಯಲು ಹೊರಟಿದ್ದಾರೆ.

ಆಸ್ಟ್ರೇಲಿಯಾದಂತೆ ಬಾಂಗ್ಲಾದೇಶ ಪಿಚ್‍ಗಳಲ್ಲೂ ವಿರಾಟ್ ಕೊಹ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದು, ಈ ಪಿಚ್‍ಗಳಲ್ಲಿ ಇದುವರೆಗೂ ಆಡಿರುವ 17 ಪಂದ್ಯಗಳಲ್ಲಿ 979 ರನ್ ಗಳಿಸಿದ್ದು ಇಂದಿನ ಪಂದ್ಯದಲ್ಲಿ 21 ರನ್ ಗಳಿಸಿದರೆ ಬಾಂಗ್ಲಾದಲ್ಲಿ 1000 ಸಾವಿರ ರನ್ ಗಳಿಸಿದ ಆಟಗಾರ ಎಂಬ ಖ್ಯಾತಿ ಪಡೆಯಲಿದ್ದಾರೆ.

ವಿರಾಟ್ ಕೊಹ್ಲಿ ಅವರು ಬಾಂಗ್ಲಾದೇಶದ ನೆಲದಲ್ಲಿ 75.30ರ ಸರಾಸರಿಯಲ್ಲಿ 5 ಶತಕ, 3 ಅರ್ಧಶತಕಗಳೊಂದಿಗೆ 979 ರನ್ ಗಳಿಸಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಾಕ್ಕಾರ ಅವರು ಬಾಂಗ್ಲಾ ದೇಶದ ನೆಲದಲ್ಲಿ 21 ಪಂದ್ಯಗಳಿಂದ 1045 ರನ್ ಗಳಿಸಿದ್ದಾರೆ.

ವೋಟರ್ ಡೇಟಾ ಹಗರಣ : ಇಬ್ಬರು ಐಎಎಸ್ ಅಧಿಕಾರಿಗಳಿಗೆ ಮತ್ತೆ ಡ್ರಿಲ್

ವಿರಾಟ್ ಕೊಹ್ಲಿ ಬಾಂಗ್ಲಾದೇಶದ ನೆಲದಲ್ಲಿ 1000 ರನ್ ಪೂರೈಸಿದರೆ 3 ವಿವಿಧ ದೇಶಗಳಲ್ಲಿ 1000 ರನ್ ಪೂರೈಸಿದ 5ನೇ ಆಟಗಾರನಾಗಿ ಗುರುತಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ವಿಶ್ವಕಪ್ ನಾಯಕ ರಿಕ್ಕಿ ಪಾಂಟಿಂಗ್, ಶ್ರೀಲಂಕಾದ ವಿಶ್ವಕಪ್ ನಾಯಕ ಅರ್ಜುನ್‍ರಣತುಂಗ, ಅರವಿಂದ ಡಿ ಸಿಲ್ವ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು 3 ವಿದೇಶಿ ನೆಲಗಳಲ್ಲಿ 1000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ಶ್ರೀಲಂಕಾದ ಮಾಜಿ ನಾಯಕರಾದ ಸನತ್ ಜಯಸೂರ್ಯ ಹಾಗೂ ಮಹೇಲಾ ಜಯವರ್ಧನೆ ಅವರು 4 ವಿದೇಶಿ ಪಿಚ್‍ಗಳಲ್ಲಿ 1000 ರನ್‍ಗಳ ಗಳಿಸಿದ ಆಟಗಾರರಾಗಿ ಗುರುತಿಸಿಕೊಂಡಿದ್ದರೆ, ಕ್ರಿಕೆಟ್ ದೇವರು 5 ವಿದೇಶಿ ನೆಲಗಳಲ್ಲಿ 1000 ರನ್ ಗಳಿಸಿದ್ದಾರೆ.

ಸಿದ್ರಾಮುಲ್ಲಾಖಾನ್ ನಾಮಕರಣಕ್ಕೆ ಬೇಸರವಿಲ್ಲ: ಸಿದ್ದರಾಮಯ್ಯ

ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ನೆಲದಲ್ಲಿ 33 ಪಂದ್ಯಗಳಿಂದ 1349 ರನ್ ಹಾಗೂ ಆಸ್ಟ್ರೇಲಿಯಾದಲ್ಲಿ 29 ಪಂದ್ಯಗಳಿಂದ 1327 ರನ್ ಗಳಿಸಿದ್ದಾರೆ.

Virat Kohli, Ganguly, Sangakkara, ODI, Bangladesh,

Articles You Might Like

Share This Article